ಸರ್ಕಾರಿ ಕೆಲಸ ದೇವರ ಕೆಲಸ ಚಿತ್ರವನ್ನು ನಿರ್ದೇಶನ ಮಾಡಿದ್ದ ನಿರ್ದೇಶಕ ಆರ್.ರವೀಂದ್ರ ಅವರು ನಿರ್ದೇಶನ ಮಾಡಿರುವ ಮನಸ್ಸಿನಾಟ ಚಿತ್ರವು ಸದ್ಯದಲ್ಲೇ ತೆರೆಗೆ ಬರಲಿದೆ. ಪ್ರಪಂಚದಾದ್ಯಂತ ಸಂಚಲನ ಮೂಡಿಸಿ ಆತ್ಮಹತ್ಯೆಗೆ ಪ್ರೇರೇಪಿಸಿ ಹಲವು ಅಮಾಯಕರನ್ನು ಬಲಿತೆಗೆದುಕೊಂಡ ಬ್ಲೂವೆಲ್ ಗೇಮ್ ಕುರಿತ ಕಥೆ ಈ ಚಿತ್ರದಲ್ಲಿ ಇದ್ದು, ಇದು ಮಕ್ಕಳನ್ನು ಮನಸ್ಸಿಗೆ ಏನೆಲ್ಲ ಎಪೆಕ್ಟ್ ಆಗುತ್ತೆ ಎಂಬುದನ್ನು ತೋರಿಸಲಿದ್ದಾರೆ ನಿರ್ದೇಶಕರು.ಚಿತ್ರವು ಸೆನ್ಸಾರ್ ಮುಗಿಸಿದ್ದು ಚಿತ್ರಕ್ಕೆ ಯು ಸರ್ಟಿಫಿಕೇಟ್ ನೀಡಲಾಗಿದೆ. ನಿಕೇತನ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಡಿ.ಮಂಜುನಾಥ್ ಹಾಗೂ ಹನುಮೇಶ್ ಗಂಗಾವತಿ ಅವರು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಪಳನಿ.ಡಿ.ಸೇನಾಪತಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಹಲವು ಹೆಸರಾಂತ ಕಲಾವಿದರು ನಟಿಸಿದ್ದಾರೆ.










