ಸಿರಿಮಲ್ಲಿಗೆ ತೊಟ್ಟ ಸೀತಮ್ಮ

Published on

336 Views
Advertisement

ಸಿರಿಮಲ್ಲಿಗೆ ತೊಟ್ಟ ಸೀತಮ್ಮ

ನಿರ್ದೇಶಕ ಅಶೋಕ್ ಕಡಬ ನಿರ್ದೇಶನದಲ್ಲಿ ಮೂಡಿ‌ ಬರುತ್ತಿರುವ ಚಿತ್ರ ‘ ಸೀತಮ್ಮ ಬಂದಳು ಸಿರಿ ಮಲ್ಲಿಗೆ ತೊಟ್ಟು’ . ಬಹುತೇಕ ಹೊಸಬರ ಚಿತ್ರವಾಗಿದ್ದು, ನಿರ್ದೇಶಕರ ಕಥೆಯನ್ನು ಮೆಚ್ಚಿಕೊಂಡ ಹನುಮಂತರಾಜು ಬಿ. ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈಗಾಗಲೇ ಚಿತ್ರ ಪೂರ್ಣ ಗೊಂಡಿದ್ದು, ಚಿತ್ರದ ಆಡಿಯೋ ಸಿಡಿ‌ ಬಿಡುಗಡೆ ಸಮಾರಂಭ ನೆರವೇರಿತು. ಈ ಸಮಾರಂಭದಲ್ಲಿ ಕರ್ನಾಟಕ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ದೇಶಕ ಪಿ.ಶೇಷಾದ್ರಿ , ನಟ ಅನಿರುಧ್, ನಟಿ ಭಾವನ , ಲಹರಿ ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು ಪಾಲ್ಗೊಂಡಿದ್ದರು. ಆಡಿಯೋ ಬಿಡುಗಡೆ ಮಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ‘ಕಮರ್ಷಿಯಲ್‌ ಮತ್ತು ಕಲಾತ್ಮಕ ಚಿತ್ರಗಳೆಂಬ ಭೇದಭಾವ ಇರಬಾರದು. ಈ ಚಿತ್ರ ಕಲಾತ್ಮಕ ವಾದರೂ ಶೀರ್ಷಿಕೆ ಗಮನ ಸೆಳೆಯುತ್ತದೆ.

Advertisement


ವರ್ಷ ದಲ್ಲಿ ಅತೀ‌ ಹೆಚ್ಚು ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ನಿಲ್ಲುತ್ತಿಲ್ಲ. ತಾಂತ್ರಿಕತೆ , ಚಿತ್ರರಂಗ ಬೆಳೆಯುತ್ತಿದ್ದರು ಚಿತ್ರದ ಯಶಸ್ಸು ‌ಕಡಿಮೆಯಾಗಿದೆ. ಚಿತ್ರದ ಬಿಡುಗಡೆ ಸಮಯದಲ್ಲಿ‌ ಮಂಡಳಿಯ ಸಲಹೆಯನ್ನು ಪಡೆದು ಕೊಳ್ಳಬೇಕು ಎಂದು‌ ಹೇಳಿದರು. ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ನಂದೀಶ್ ಕಾಣಿಸಿಕೊಂಡಿದ್ದಾರೆ. ವೃತ್ತಿಯಲ್ಲಿ‌ ವಕೀಲಾಗಿರುವ ನಂದೀಶ್ ಈ‌ ಚಿತ್ರದಲ್ಲಿ ಪತ್ರಕರ್ತನ ಪಾತ್ರ ಮಾಡುತ್ತಿದ್ದಾರೆ.ಚಿತ್ರದಲ್ಲಿ ಒಂದು ಸುದ್ದಿಯ ಬೆನ್ನತ್ತಿ ಊರಿಗೆ ಹೋಗುವ ನಾಯಕ‌ ನ ಕಣ್ಣಿಗೆ ಬೀಳುವ ಗೆಳೆಯ ಹೆಂಡ್ತಿ ವಿಧವೆಯಾಗಿರುವುದು. ಆ ವಿಧವೆಗೆ‌ ನಾಯಕ ಹೊಸಬಾಳು‌ ಕೊಡುತಾನ? ತಾನು‌ ಬೆನ್ನತ್ತಿದ್ದ ಸುದ್ದಿ ಸಿಗುತ್ತಾ..? ಎಂಬುದೇ ಕಥೆ ಎಂದರು ನಿರ್ದೇಶಕರು. ‘ಹಾಲುತುಪ್ಪ’ ಚಿತ್ರದಲ್ಲಿ ನಾಯಕಿಯಾಗಿ ‌ಕಾಣಿಸಿಕೊಂಡ ನಾಯಕಿ‌ ಸಂಹಿತಾ ವಿನ್ಯಾ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಒಂದು ಹಾಡನ್ನು ಗಾಯಕ ಸಿ.ಅಶ್ವಥ್ ಅವರಿಗೆ ಆರ್ಪಿಸಲಾಗಿದೆ ಎಂದರು ಸಂಗೀತ ನಿರ್ದೇಶಕ ಕಾರ್ತೀಕ್‌ ವೇಕಟೇಶ್ .

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com