ಸೇನಾಪುರಕ್ಕೆ ಗಾಯಕಿ ಅನನ್ಯ ಭಟ್ ಹಿರೋಯಿನ್

Published on

438 Views
Advertisement

ಅಕ್ರಮ ಗಣಿ ಧಣಿಗಳ ಸತ್ಯ ಘಟನೆಗಳು ಒಂದು ಕಾಲಘಟ್ಟದಲ್ಲಿ ಅಕ್ರಮ ಗಣಿ ದಂಧೆ ರಾಜ್ಯಾದ್ಯಂತ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು. ಬಿಸಿಲು ನಾಡಿನ ಒಡಲಲ್ಲಿ ನಡೆದಿದ್ದ, ದಂಧೆಯ ಕಬಂಧ ಬಾಹುಗಳು ಕರಾವಳಿಯ ಕಿನಾರೆಗಳವರೆಗೂ ಮೈಚಾಚಿಕೊಂಡಿತ್ತು. ಇಂತಹ ವಿದ್ಯಾಮಾನಗಳ ಸುತ್ತ ನಡೆದಂತ ಒಂದಷ್ಟು ನೈಜ ಅಂಶಗಳನ್ನು ’ಸೇನಾಪುರ’ ಚಿತ್ರದಲ್ಲಿ ಬಳಸಲಾಗಿದೆ. ಕತೆ ಬರೆದು ನಿರ್ದೇಶನ ಮಾಡಿರುವುದು ಕುಂದಾಪುರದ ನವ ಪ್ರತಿಭೆ ಗುರುಸಾವನ್.

ಇವರು ಹೇಳುವಂತೆ ಮೊದಲು ವೆಬ್‌ಸೀರೀಸ್‌ಗೆ ಅಂತಲೇ ಮಾಡಲು ಚಿಂತನೆ ನಡೆಸಲಾಗಿತ್ತು. ಮುಂದೆ ಅದು ಚಿತ್ರವಾಗಿ ರೂಪಾಂತರಗೊಂಡಿತು. ಸಮಾಜ ಮತ್ತು ಪ್ರಕೃತಿ ಎಲ್ಲರಿಗೂ ಎಲ್ಲವನ್ನು ಸಮನಾಗಿ ನೀಡಿರುತ್ತದೆ. ಇವನು ಶ್ರೀಮಂತ, ಬಡವ ಎಂದು ಬೇಧಬಾವ ತೋರಿಸುವುದಿಲ್ಲ. ನಾವುಗಳನ್ನು ಅದನ್ನು ವರ್ಗ ಮಾಡಿಕೊಂಡು ಬದುಕುತ್ತಿದ್ದೇವೆ. ಪ್ರಕೃತಿ, ಸಮಾಜ, ಭೂಮಿ, ನೀರು ಅಂತ ಬಂದಾಗ ನಾವು ಹೆಣ್ಣಿಗೆ ಗೌರವ ಕೊಡುತ್ತೇವೆ. ಅದಕ್ಕಾಗಿ ಆಕೆಯಿಂದಲೇ ಕತೆಯನ್ನು ಹೇಳಿಸಲು ಪ್ರಯತ್ನ ಮಾಡಲಾಗಿದೆ ಎನ್ನುತ್ತಾರೆ.

Advertisement


ಖ್ಯಾತ ಗಾಯಕಿ, ರಂಗಭೂಮಿ ಹಿನ್ನಲೆಯಿರುವ ಅನನ್ಯ ಭಟ್ ಮೊದಲ ಬಾರಿ ಮಹಿಳಾ ಪ್ರಧಾನ ಕತೆಯಲ್ಲಿ ಮುಖ್ಯ ಪಾತ್ರವನ್ನು ನಿಭಾಯಿಸಿರುವುದರ ಜೊತೆಗೆ ಎರಡು ಹಾಡುಗಳಿಗೆ ಸಂಗೀತದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಚಿತ್ರೀಕರಣ ಅನುಭವಗಳನ್ನು ಹಂಚಿಕೊಂಡು, ಟೀಸರ್‌ದಲ್ಲಿ ಹಿನ್ನಲೆ ಧ್ವನಿ ನೀಡಿದ್ದು ಛಾಲೆಂಜಿಂಗ್ ಆಗಿತ್ತು ಎಂದರು.

ಕೆಲವು ಭಾವನೆಗಳ ಹೋರಾಟಗಳು, ಅಸಹನೆಯ ಯುದ್ದವು ಇದೆ. ಶಕ್ತರ ಹೊಡೆತ ಪವರ್‌ಫುಲ್ ಆಗಿರುತ್ತೆ. ಅದರೆ ಹಸಿದವರ ಹೊಡೆತ ರೆಬೆಲ್ ಆಗಿರುತ್ತೆ. ಶಕ್ತ-ಅಶಕ್ತರ ನಡುವಿನ ರಣರಂಗವೇ ’ಸೇನಾಪುರ’ ಎನ್ನುವ ಡೈಲಾಗ್ ಟೀಸರ್‌ದಲ್ಲಿ ಸುಂದರವಾಗಿ ಮೂಡಿ ಬಂದಿದೆ. ಅಮಿತ್‌ ಕುಮಾರ್ ಮತ್ತು ರಾಹುಲ್‌ ದೇವ್ ಜಂಟಿಯಾಗಿ ವಿಮ್‌ಲಾಸ್ ಎಂಟರ್‌ಟೈನ್‌ಮೆಂಟ್ ಹಾಗೂ ಅಂಸ ಕ್ರಿಯೇಶನ್ಸ್ ಮೂಲಕ ಬಂಡವಾಳ ಹೂಡಿರುವುದು ಹೊಸ ಅನುಭವ.

Advertisement

ತಾರಾಂಗಣದಲ್ಲಿ ದಿನೇಶ್‌ ಮಂಗಳೂರು, ಬಿ.ಎಂ.ಗಿರಿರಾಜ್, ಸಿಂಧೂ, ಶೇಖರ್‌ರಾಜ್, ರೀನ, ಅಮೂಲ್ಯ, ಪರಮೇಶ್ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಪ್ರಶಾಂತ್‌ಸಾಗರ್, ಅರ್ಜುನ್ ಸಂಕಲನ, ಪ್ರಮೋದ್‌ ಮರವಂತೆ ಸಾಹಿತ್ಯ, ಅರ್ಜುನ್‌ ಶ್ರೀನಿವಾಸಯ್ಯ ಸಂಕಲನವಿದೆ. ಮಂಗಳೂರು, ಸಂಪೆಕಟ್ಟೆ ತಾಣದಲ್ಲಿ ಚಿತ್ರೀಕರಣ ನಡೆಸಿ, ಸದ್ಯ ಸಿನಿಮಾವು ಡಬ್ಬಿಂಗ್‌ದಲ್ಲಿ ಬ್ಯುಸಿ ಇದೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com