flixOye
Buzz

ಗಾಯಕಿ ಈಗ ನಾಯಕಿ – ಅನನ್ಯಾ ಭಟ್

ವಿಶಿಷ್ಟ ಗಾಯನದ ಮೂಲಕವೇ ಎಲ್ಲರ ಗಮನಸೆಳೆದಿರುವ ಗಾಯಕಿ ಅನನ್ಯಾ ಭಟ್ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಗಾಯನದ ಜತೆಗೆ ನಾಟಕಗಳಲ್ಲಿ ನಟಿಸುವುದು ಅವರ ಹವ್ಯಾಸಗಳಲ್ಲೊಂದು. ಇದೀಗ ಇದೇ ಅನನ್ಯಾ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವ ಕಾತರದಲ್ಲಿದ್ದಾರೆ. ಈ ಹಿಂದೆ ‘ಉರ್ವಿ’ ಚಿತ್ರದಲ್ಲಿ ಪೋಷಕ ಪಾತ್ರ ಮಾಡಿದ್ದ ಅನನ್ಯಾ, ಇದೀಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಹೊಸ ಚಿತ್ರವೊಂದಕ್ಕೆ ಅವರೀಗ ನಾಯಕಿಯಾಗಿದ್ದಾರೆ! ಚೊಚ್ಚಲ ಬಾರಿಗೆ ಪ್ರಜ್ವಲ್ ಶಾಸ್ತ್ರಿ ನಿರ್ದೇಶಿಸಲಿರುವ ಸಿನಿಮಾವೊಂದರಲ್ಲಿ ಅನನ್ಯಾ ನಟಿಸಲಿದ್ದಾರೆ. ಇದೊಂದು ನಾಯಕಿ ಪ್ರಧಾನ ಸಿನಿಮಾವಾಗಿರುವುದರಿಂದ ಇಡೀ ಚಿತ್ರ ಅವರ ಪಾತ್ರದ ಮೇಲೆಯೇ ಸಾಗಲಿದೆಯಂತೆ. ‘ಇದು ಥ್ರಿಲ್ಲರ್ ಶೈಲಿಯ ಚಿತ್ರ.

ಸಂಬಂಧಿತ · Related