flixOye
Buzz

ರಕ್ಷಿತ್ ಶೆಟ್ಟಿ ಚಾರ್ಲಿಯನ್ನು ಮತ್ತೆ ಭೇಟಿ ಮಾಡಿದ್ದೇಕೆ? ಚಾರ್ಲಿ-2 ಗೆ ಮುಹೂರ್ತ ಫಿಕ್ಸ್ ಆಯ್ತಾ??

ರಕ್ಷಿತ್ ಶೆಟ್ಟಿ ಹಾಗೂ ಸಂಗೀತಾ ನಟನೆಯ 777 ಚಾರ್ಲಿ ಸಿನಿಮಾ ತೆರೆಗೆ ಬಂದು 2 ವರ್ಷ ಕಳೆದಿದೆ. ಚಾರ್ಲಿ 777 ದೇಶದಾದ್ಯಂತ ಉತ್ತಮ ಪ್ರದರ್ಶನ ಕಂಡಿತ್ತು. ಇದುವರೆಗೆ ವಿಶ್ವದಲ್ಲಿ ನಿರ್ಮಿಸಲಾದ ಅತ್ಯುತ್ತಮ ನಾಯಿ ಚಿತ್ರವಾಗಿತ್ತು ಎಂಬಾ ಖ್ಯಾತಿ ಹೊಂದಿರುವ ಚಿತ್ರ.

777 ಚಾರ್ಲಿ ಚಿತ್ರವು ಯಾವುದೇ ಭಾಷೆಯ ಅಡೆತಡೆಯಿಲ್ಲದ ಅಂತರರಾಷ್ಟ್ರೀಯ ಗುಣಮಟ್ಟದ ಅತ್ಯುತ್ತಮ ಚಲನಚಿತ್ರವಾಗಿದೆ. ಅದ್ಭುತ ನಿರ್ದೇಶನ, ನಟನೆ, ಸಂಗೀತ ಮತ್ತು ಛಾಯಾಗ್ರಹಣ ಹೊಂದಿರುವ ಅತ್ಯುತ್ತಮ ಚಿತ್ರವಾಗಿದೆ. 777 ಚಾರ್ಲಿ ಸಮಾಜಕ್ಕೆ ಬಲವಾದ ಥೀಮ್ ಮತ್ತು ಸಂದೇಶವನ್ನು ಹೊಂದಿರುವ ಚಿತ್ರ.

ಚಾರ್ಲಿ ಮತ್ತು ರಕ್ಷಿತ್ ಅವರ ಅದ್ಭುತ ಅಭಿನಯದೊಂದಿಗೆ ಚಾರ್ಲಿ ತುಂಬಾ ಬಲವಾದ ಮತ್ತು ಭಾವನಾತ್ಮಕ ಸಿನಿಮಾವಾಗಿದ್ದು, ಮೊದಲ ಅರ್ಧಭಾಗ ಹಾಸ್ಯದಿಂದ ಕೂಡಿದ್ದರೆ, ಕೊನೆಯ 10 ನಿಮಿಷ ರಕ್ಷಿತ್‌ ಹಾಗೂ ಚಾರ್ಲಿಯ ಅಭಿನಯದಿಂದ ಎಲ್ಲರ ಕಣ್ಣಂಚಲ್ಲಿ ನೀರು ತಂದಿತ್ತು. ಕಾಶ್ಮೀರದ ದೃಶ್ಯಗಳು ಚೆನ್ನಾಗಿ ಮೂಡಿಬಂದಿದೆ.

 

ಇದೀಗ, ಚಾರ್ಲಿಯನ್ನು ನೋಡಲು ರಕ್ಷಿತ್‌ ಮೈಸೂರಿಗೆ ತೆರಳಿದ್ದೇಕೇ??? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಚಾರ್ಲಿ 6 ನಾಯಿ ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳನ್ನು ನೋಡಲು ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಸರಳವಾಗಿ ಚಾರ್ಲಿಯ ಮನೆಗೆ ಭೇಟಿ ನೀಡಿ ಚಾರ್ಲಿಯನ್ನು ಮುದ್ದಾಡಿದ್ದಾರೆ. ರಕ್ಷಿತ್‌ ತಮ್ಮ ಇನ್‌ ಸ್ಟಾಗ್ರಾಮ್‌ ಖಾತೆಯಲ್ಲಿ ಲೈವ್‌ ಬಂದು, ಸಂತಸದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಚಾರ್ಲಿ ಭೇಟಿ‌ ಮಾಡಿದ ರಕ್ಷಿತ್ ಇನ್ಸ್ಟಾಗ್ರಾಮ್ ನಲ್ಲಿ‌ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದು ಹೀಗೆ:

https://www.instagram.com/reel/C7BoXGkPiJI/?igsh=aGxiczlsMHBhMzJ1

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ.

 

ಸಂಬಂಧಿತ · Related