ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಶ್ರೇಯಸ್, ಮುಂದಿನ ವರ್ಷ ಪೂರ್ತಿ ಬ್ಯುಸಿಯೋ ಬ್ಯುಸಿ!

Published on

412 Views
Advertisement

ಪಡ್ಡೆಹುಲಿ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟದ್ದ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಸಂಪೂರ್ಣ ಸಿನಿಮಾದಲ್ಲಿಯೇ ಮುಳುಗಿದ್ದಾರೆ. ಈಗಾಗಲೇ ವಿಷ್ಣುಪ್ರಿಯ ಸಿನಿಮಾ ಮುಗಿಸಿರುವ ಶ್ರೇಯಸ್, ಇನ್ನೇನು ಆ ಚಿತ್ರವನ್ನು 2021ಕ್ಕೆ ಬಿಡುಗಡೆ ಮಾಡುವ ತಯಾರಿ ನಡೆಯುತ್ತಿದೆ. ಹೀಗಿರುವಾಗಲೇ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಶ್ರೇಯಸ್, ಮುಂದಿನ ವರ್ಷ ಪೂರ್ತಿ ಬ್ಯುಸಿಯೋ ಬ್ಯುಸಿ!

ಹೌದು, ಜನವರಿ ಅಂತ್ಯಕ್ಕೆ ಶ್ರೇಯಸ್ ಮಾಸ್ ಎಂಟರ್ಟೈನರ್ ಕಥಾಹಂದರವುಳ್ಳ ಸಿನಿಮಾವೊಂದು ಸೆಟ್ಟೇರಲಿದೆ. ಸ್ನೇಹ, ಪ್ರೀತಿಯ ಎಳೆಯನ್ನು ಹೊಂದಿರುವ ಈ ಚಿತ್ರದಲ್ಲಿ ಶ್ರೇಯಸ್ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಪಡ್ಡೇಹುಲಿ ಸಿನಿಮಾ ನೋಡಿ ಇಷ್ಟಪಟ್ಟು ಈ ಚಿತ್ರ ಮಾಡಲು ಮುಂದೆ ಬಂದಿದ್ದಾರೆ. ತಮಿಳು ಮತ್ತು ಮಲಯಾಳಿ ನಿರ್ಮಾಪಕ ರವಿಕುಮಾರ್ ಈ ಚಿತ್ರದ ನಿಮಾರ್ಪಕರು. ಅದರ ನಾಯಕಿ ಮತ್ತು ತಾಂತ್ರಿಕ ವರ್ಗದ ಆಯ್ಕೆ ಆಗಬೇಕಿದೆ.

Advertisement

ಇನ್ನು ಇದರ ಜತೆಗೆ ತಮಿಳಿನ ಕಥೆಗಾರರೊಬ್ಬರು ಹೇಳಿದ ಕಥೆಯನ್ನೂ ಶ್ರೇಯಸ್ ಕೇಳಿದ್ದು, ಆ ಕಥೆ ಕೇಳಿಯೇ ಫಿದಾ ಆಗಿದ್ದಾರೆ. ಎಲ್ಲ ಭಾಷೆಗಳಿಗೆ ಸಲ್ಲುವ ಕಥೆ ಇದಾಗಿರುವುದರಿಂದ ಕೆ. ಮಂಜು ಅವರೇ ತಮ್ಮ ಬ್ಯಾನರ್ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂನಲ್ಲಿ ಈ ಸಿನಿಮಾ ಮಾಡುವ ಯೋಜನೆ ನಡೆಯುತ್ತಿದೆ. ಹುಡುಗ ಹುಡುಗಿ ಮದುವೆ ಆಗುವುದಕ್ಕೂ ಮುಂಚೆ ಹೇಗಿರಬೇಕು, ಮದುವೆ ಆದ ಬಳಿಕ ಹೇಗಿರಬೇಕು ಎಂಬ ಎಳೆ ಈ ಚಿತ್ರದ್ದು. 10-12 ಕೋಟಿ ಬಜೆಟ್ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿರುವುದರಿಂದ ಮಾರ್ಚ್ ಅಂತ್ಯದ ವೇಳೆಗೆ ಈ ಸಿನಿಮಾ ಶುರುವಾಗಲಿದೆ.

ಈ ಎರಡು ಸಿನಿಮಾ ಒಂದು ಹಂತಕ್ಕೆ ಬರುತ್ತಿದ್ದಂತೆ ಮಲಯಾಳಂ ನಿರ್ದೇಶಕರ ಚಿತ್ರದಲ್ಲಿಯೂ ಶ್ರೇಯಸ್ ನಟಿಸಲಿದ್ದಾರೆ. ಈ ಸಿನಿಮಾ ಏಪ್ರಿಲ್ ಅಂತ್ಯಕ್ಕೆ ಸೆಟ್ಟೇರಲಿದ್ದು, ಅಂಡರ್ವರ್ಡ್ ಕಥಾಹಂದರ ಹಿನ್ನೆಲೆಯಲ್ಲಿ ಈ ಸಿನಿಮಾ ಸಾಗಲಿದೆ. ಮಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲಾಗುತ್ತದೆ.

Advertisement

ಈ ಮೂರು ಸಿನಿಮಾಗಳ ಮಾಹಿತಿ ಒಂದೆಡೆಯಾದರೆ, ಈಗಾಗಲೇ ವಿಷ್ಣುಪ್ರಿಯಾ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕನ್ನಡದ ಜತೆಗೆ ಮಲಯಾಳಂನಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಈ ಬಗ್ಗೆ ಮಾಹಿತಿ ನೀಡುವ ಕೆ. ಮಂಜು. ‘ಕೋವಿಡ್ ಪ್ರಮಾಣ ಕಡಿಮೆಯಾಗುತ್ತಿದೆಯಾದರೂ, ಚಿತ್ರಮಂದಿರಗಳು ಮೊದಲಿನಂತೆ ಕಾರ್ಯ ನಿರ್ವಹಿಸುತ್ತಿಲ್ಲ. ಈಗಾಗಲೇ ನಾನೇ ಹಲವು ಬಾರಿ ಸಿನಿಮಾ ವೀಕ್ಷಣೆ ಮಾಡಿದ್ದೇನೆ. ತುಂಬ ಚೆನ್ನಾಗಿ ಮೂಡಿ ಬಂದಿದೆ. ಹಾಗಾಗಿ ಮುಂದಿನ ವರ್ಷಕ್ಕೆ ಚಿತ್ರಮಂದಿರದಲ್ಲಿಯೇ ಬರಬೇಕೆಂದು ನಿರ್ಧರಿಸಿದ್ದೇವೆ. ಇತ್ತ ಇನ್ನೂ ಮೂರು ಸಿನಿಮಾಗಳು ಶ್ರೇಯಸ್ ಬಳಿ ಇದ್ದು, ಒಂದೊಂದಾಗಿಯೇ ಘೋಷಣೆ ಆಗಲಿವೆ ಎಂದು ಮಾಹಿತಿ ನೀಡುತ್ತಾರೆ ಕೆ ಮಂಜು.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com