ಶಿವಣ್ಣನ ಬರ್ತ್ಡೇ ಸ್ಪೆಷಲ್ ಗುಡ್ ನ್ಯೂಸ್ ಕೊಟ್ಟ ದ್ರೋಣ ಟೀಮ್…!!!!

Published on

405 Views
Advertisement

ದ್ರೋಣನಾಗಿ ಘರ್ಜಿಸೋದಕ್ಕೆ ಸಜ್ಜಾದ್ರು ಸೆಂಚುರಿ ಸ್ಟಾರ್
ಕತ್ತಿಗಿಂತ ಹರಿದವಾದ ಲೇಖನಿ ಹಿಡಿದು ಬರ್ತಾವ್ರೆ ಕರುನಾಡ ಚಕ್ರವರ್ತಿ
ಶಿವಣ್ಣನ ಬರ್ತ್ಡೇ ಸ್ಪೆಷಲ್ ಗುಡ್ ನ್ಯೂಸ್ ಕೊಟ್ಟ ದ್ರೋಣ ಟೀಮ್…!!!!

57ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರೋ, ಚಿರಯುವಕ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ವರ್ಷದ 365ದಿನವೂ ಸಿನಿಮಾದಲ್ಲೇ ಮುಳುಗಿರೋ ಕನ್ನಡದ ಏಕೈಕ ನಟ… ಕನ್ನಡ ಆಲ್ವೇಸ್ ಬ್ಯುಸಿಯಸ್ಟ್ ನಟ… ಸಿನಿಮಾದಿಂದ ಸಿನಿಮಾದಿಂದ ಸಿನಿಮಾಗೆ ಭಿನ್ನತೆಯನ್ನ ಕಾಪಾಡಿಕಳ್ಳುತ್ತಾ, ಬ್ಯಾಕ್ ಟು ಬ್ಯಾಕ್ ವೆರೈಟಿ ಸಿನಿಮಾಗಳನ್ನ ಕೊಡುತ್ತಾ ಬರ್ತಿರೋ ಶಿವಣ್ಣ, ಕಳೆದ ವರ್ಷ ಅನೌನ್ಸ್ ಮಾಡಿದ್ದ ದ್ರೋಣ ಸಿನಿಮಾ ಇದೀಗ ರಿಲೀಸ್ ಗೆ ರೆಡಿಯಾಗ್ತಿದೆ.. ದ್ರೋಣ ಸಿನಿಮಾದ ಟೈಟಲ್ಲೇ ಹೇಳುವಂತೆ ಈ ಚಿತ್ರದಲ್ಲಿ ಶಿವಣ್ಣನದ್ದು ಗುರುವಿನ ಪಾತ್ರ.. ಮೇಷ್ಟ್ರ ಪಾತ್ರದಲ್ಲಿ ಮಿಂಚಿದ್ದಾರೆ.. ಕತ್ತಿಗಿಂತ ಹರಿತವಾದದ್ದು ಲೇಖನಿ ಅನ್ನೋ ಥೀಮ್ ಇರೋ ಈ ಸಿನಿಮಾ ಸಾಮಾಜಿಕ ಮೌಲ್ಯಗಳಿಂದ ಕೂಡಿದೆ..

Advertisement

ಮುಹೂರ್ತದಂತೆ ಪೆನ್ ಹಿಡಿದು ಭಿನ್ನವಾಗಿ ಫೋಸ್ ಕೊಟ್ಟು, ಕನ್ನಡ ಸಿನಿಪ್ರಿಯರಲ್ಲಿ ವಿಶೇಷ ಕುತೂಹಲವನ್ನ ಹುಟ್ಟಿಸಿದ್ದ ದ್ರೋಣ ಟೀಮ್ ಇದೀಗ ಸಿನಿಮಾವನ್ನ ರಿಲೀಸ್ ಗೆ ರೆಡಿಮಾಡಿದ್ದು, ಪಬ್ಲಿಸಿಟಿ ಶುರುಮಾಡೋದಕ್ಕೆ ಪ್ಲಾನ್ ಮಾಡಿಕೊಂಡಿದೆ.. ಅಂದ್ಹಾಗೆ ಇವತ್ತು ಶಿವಣ್ಣನ ಹುಟ್ಟುಹಬ್ಬಕ್ಕೆ ಸ್ಪೆಷಲ್ ಪೋಸ್ಟರ್ ನ ರಿಲೀಸ್ ಮಾಡಿರೋ ಚಿತ್ರತಂಡ..

Advertisement

ಇದು ಶಿವಣ್ಣನ ನೆಕ್ಸ್ಟ್ ರಿಲೀಸ್ ಅನ್ನೋ ನ್ಯೂಸ್ ಕೊಟ್ಟಿದೆ.. ಈ ಸಿನಿಮಾ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು, ಸದ್ಯದಲ್ಲೇ ಒಂದೊಂದೇ ವಿಚಾರವನ್ನ ಬಿಟ್ಟುಕೊಡಲಿದ್ದೇವೆ ಅಂತ ಚಿತ್ರತಂಡ ಹೇಳಿಕೊಂಡಿದೆ..

Advertisement

ದ್ರೋಣ ಸಿನಿಮಾವನ್ನ ಡಾಲ್ಫಿನ್ ಮಿಡಿಯಾ ಹೌಸ್ ಬ್ಯಾನರ್ ನಲ್ಲಿ ಬಿ.ಮಹದೇವ್, ಸಂಗಮೇಶ್.ಬಿ, ಶೇಷು ಚಕ್ರವರ್ತಿ ನಿರ್ಮಿಸಿದ್ದಾರೆ.. ಪ್ರಮೋದ್ ಚಕ್ರವರ್ತಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.. ಅನುಭವಸ್ಥ ತಂತ್ರಜ್ಞನರೊಂದಿಗೆ ಪ್ರಮೋದ್ ಚಕ್ರವರ್ತಿ ದ್ರೋಣ ಸಿನಿಮಾವನ್ನ ತುಂಬಾ ಕ್ವಾಲಿಟಿಯಾಗಿ ತೆರೆಗೆ ತರೋ ಪ್ರಯತ್ನವನ್ನ ಮಾಡಿದ್ದು, ಶಿವಣ್ಣನ ವೃತ್ತಿ ಬದುಕಿನಲ್ಲಿ ಈ ಚಿತ್ರ ಮತ್ತೊಂದು ಭಿನ್ನ ಸಿನಿಮಾವಾಗಿ ಉಳಿಯಲಿದೆ ಅನ್ನೋ ನಂಬಿಕೆಯಲ್ಲಿದೆ ಚಿತ್ರತಂಡ.

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com