flixOye
Buzz

‘ಕೆಜಿಎಫ್’ ‌ನ ಮೀರಿಸಲಿರುವ ‘ಭೈರತಿರಣಗಲ್’

‘ಕೆಜಿಎಫ್’ ಚಿತ್ರದ ನಂತರ ಕೆಲವು ಕನ್ನಡ ಸಿನಿಮಾಗಳು ದಾಖಲೆ ಮಾಡಲು ಹೊರಟಿದೆ. ಕನ್ನಡ ಚಿತ್ರರಂಗವು ಉಳಿದ ಚಿತ್ರರಂಗಗಳಿಗೆ ಪೈಪೋಟಿ ‌ನೀಡಲು ಸಿದ್ಧವಾಗಿದೆ ಎಂದರೆ ತಪ್ಪಾಗಲಾರದು. ಈಗ ಶಿವರಾಜ್ ಕುಮಾರ್ ಅಭಿನಯದ ‘ಭೈರತಿರಣಗಲ್’ ಸಿನಿಮಾದಲ್ಲಿ ಮಫ್ತಿ ಸಿನಿಮಾ ಪ್ರೀಕ್ವೆಲ್ನಲ್ಲಿ ಹಲವು‌ ವಿಶೇಷತೆಗಳು ಇರಲಿದ್ದು, ತೆಲುಗು ಖ್ಯಾತ ನಟ ಬಾಲಣ್ಣ ಈ ಚಿತ್ರದಲ್ಲಿ ಅಭಿನಯಿಸುವ ಸಾಧ್ಯತೆ ಇದೆಯಂತೆ. ಬೇರೆ ಭಾಷೆಯ ನಟಿಯನ್ನು ಕರೆತರುವ ಸಾಧ್ಯತೆಗಳಿವೆ.

ಹಲವು ವರ್ಷಗಳ ನಂತರ ಶಿವರಾಜ್ ಕುಮಾರ್ ಜೊತೆ ರಮೇಶ್ ಅರವಿಂದ್ ಬಣ್ಣ ಹಚ್ಚಲ್ಲಿದ್ದಾರೆ ಎಂದು‌ ಮೂಲಗಳಿಂದ ಕೇಳಿ ಬರುತ್ತಿದೆ. ಈ ಹಿಂದೆ ಮಫ್ತಿ ಚಿತ್ರವನ್ನು ನಿರ್ದೇಶಿಸಿ ಸೈ ಎನಿಸಿಕೊಂಡ ನರ್ತನ್ ಈ ಬಾರಿ ‘ಭೈರತಿರಣಗಲ್’ ಚಿತ್ರಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಶಿವರಾಜ್ ಕುಮಾರ್ ರವರ 125 ನೇ ಸಿನಿಮಾ ಸಾಕಷ್ಟು ವಿಶೇಷತೆಗಳೊಂದಿಗೆ ಇತಿಹಾಸವನ್ನು ಸೃಷ್ಟಿಸುವ ಮುನ್ಸೂಚನೆ ನೀಡಿದೆ.

ಸಂಬಂಧಿತ · Related