ಭರವಸೆ ಹೆಚ್ಚಿಸಿದ ನಿರೀಕ್ಷೆ ಹುಟ್ಟಿಸಿದ ಸವರ್ಣ ದೀರ್ಘ ಸಂಧಿ ಟ್ರೈಲರ್

Published on

471 Views
Advertisement

ಸೂಪರ್ ದಾಖಲೆ ಚಿತ್ರದ ಡೈರೆಕ್ಟರ್ ನ “ಸವರ್ಣ ದೀರ್ಘ ಸಂಧಿ” ಟ್ರೈಲರ್

ವ್ಯಾಕರಣದ ಆಟ “ಸವರ್ಣ ದೀರ್ಘ ಸಂಧಿ” ಟ್ರೈಲರ್ ಸೂಪರ್ ಚಿಂದಿ

Advertisement

ಸವರ್ಣ ದೀರ್ಘ ಸಂಧಿ… ಸ್ಯಾಂಡಲ್ ವುಡ್ ಅಂಗಳದಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿರೋ, ಭರವಸೆ ಹೆಚ್ಚಿಸಿರೋ ಸಿನಿಮಾ. ಸಾಹೋ ಚಿತ್ರದೊಂದಿಗೆ ಟ್ರೈಲರ್ ಲಾಂಚ್ ಮಾಡಿರೋ ಚಿತ್ರತಂಡ, ಸಿನಿಪ್ರಿಯರಿಂದ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿದೆ..

Advertisement

ಸವರ್ಣ ದೀರ್ಘ ಸಂಧಿ, ತುಳು ಭಾಷೆಯಲ್ಲಿ ಚಾಲಿಲೂ ಪೋಲಿಲೂ ಅನ್ನೋ ದಾಖಲೆಯ ಹಿಟ್ ಕೊಟ್ಟ ವೀರೇಂದ್ರ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿರೋ ಸಿನಿಮಾ. ವೀರೇಂದ್ರ ಶೆಟ್ಟಿ ನಿರ್ದೇಶನದ ಚಾಲಿಲೂ ಪೋಲಿಲು ಬರೊಬ್ಬರಿ 511ದಿನ ಮಲ್ಟಿಪ್ಲೆಕ್ಸ್ ನಲ್ಲಿ ಪ್ರದರ್ಶನಗೊಂಡು ದಾಖಲೆ ಬರೆದಂತಹ ಸಿನಿಮಾ.. 38ಲಕ್ಷ ಬಜೆಟ್ನ ಸಿನಿಮಾ 73ವಾರ ಪ್ರದರ್ಶನಗೊಂಡು, ಬರೊಬ್ಬರಿ 3.25ಕೋಟಿ ರೂಪಾಯಿಗಳನ್ನ ಗಳಿಸಿದೆ.. ಇದೀಗ ಬರೊಬ್ಬರಿ 5 ವರ್ಷದ ಗ್ಯಾಪ್ ನ ನಂತ್ರ, ಅದೇ ರೀತಿ ಔಟ್ ಅಂಡ್ ಔಟ್ ಕಾಮಿಡಿ ಟ್ರ್ಯಾಕ್ ನಲ್ಲಿ ವೀರೆಂದ್ರ ಶೆಟ್ಟಿ ಮಾಡಿರೋ ಕನ್ನಡ ಸಿನಿಮಾ ಸವರ್ಣ ದೀರ್ಘ ಸಂಧಿ… ಸವರ್ಣ ದೀರ್ಘ ಸಂಧಿ ವ್ಯಾಕರಣದ ಜೊತೆ ಜೊತೆಗೆ ಕಳ್ಳಪೋಲೀಸ್ ಆಟ ಆಡುವಂತಹ ಕಲರ್ಫುಲ್ ಸಿನಿಮಾ.. ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದು, ಈ ಚಿತ್ರದ ನಿರ್ಮಾಣದಲ್ಲೂ ಜೊತೆಯಾಗಿದ್ದಾರೆ. ವೀರು ಟಾಕೀಸ್, ಲೈಲಾಕ್ ಎಂಟ್ರಟೈನ್ಮೆಂಟ್ಸ್ ಬ್ಯಾನರ್ ನಲ್ಲಿ ಲುಷಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್, ವೀರೇಂದ್ರ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ಚಿತ್ರದಲ್ಲಿ, ವೀರೇಂದ್ರ ಶೆಟ್ಟಿ, ಕೃಷ್ಣ, ಪದ್ಮಜರಾವ್ ಸೇರಿದಂತೆ ಪ್ರತಿಭಾವಂತ ಕಲಾವಿದ್ರ ದಂಡೇ ಈ ಚಿತ್ರದಲ್ಲಿದೆ.. ಮೊಲದ ಫ್ರೇಮ್ ನಿಂದ ಕೊನೆಯ ಫ್ರೇಮ್ ವರೆಗೂ ಸಿನಿಮಾದಲ್ಲಿ ಸೀನ್ ಟು ಸೀನ್ ನಗಿಸುವಂತಿದೆ ಸವರ್ಣ ದೀರ್ಘ ಸಂಧಿ ಟ್ರೈಲರ್.. ಸವರ್ಣ ದೀರ್ಘ ಸಂಧಿ ಟ್ರೈಲರ್ ಎಲ್ಲಾ ಆಂಗಲ್ ನಿಂದ್ಲೂ ಇಂಪ್ರೆಸೀವ್ ಆಗಿದೆ.. ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರೋ ಈ ಸಿನಿಮಾ, ಅನ್ ಲೈನ್ ನಲ್ಲಿ ಮತ್ತು ಥಿಯೇಟರ್ ನಲ್ಲಿ ರಿಲೀಸ್ ಆಗಿರೋ ಈ ಚಿತ್ರದ ಟ್ರೈಲರ್ ನಲ್ಲಿರೋ ವಿಶಿಷ್ಠ ಎಂಟ್ರಟೈನಿಂಗ್ ಎಲಿಮೆಂಟ್ಸ್ ಸಿನಿಮಾ ಮೇಲೆ ನಿರೀಕ್ಷೆ ಮೂಡಿಸಿದೆ. ಅಂದ್ಹಾಗೆ ಸವರ್ಣ ದೀರ್ಘ ಸಂಧಿ ಸಿನಿಮಾ ಸದ್ಯದಲ್ಲೇ ಪ್ರೇಕ್ಷಕರೆದುರಿಗೆ ಬರ್ತಿದೆ..

Advertisement

More Buzz

Buzz 3 days ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 4 days ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 7 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 7 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 1 week ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 1 week ago

Mr. X: Kannada Cinema’s New Enigma Unfolds!

Buzz 1 week ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 1 week ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 1 week ago

Assi: ZEE5 Film Tackles Stark Reality with Urgent Voice

Buzz 1 week ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 1 week ago

Ustaad Bhagat Singh Hits Netflix: Kannada Fans Rejoice!

Buzz 1 week ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com