ಇದೇ ಸೋಮವಾರದಿಂದ ಉದಯ ಟಿವಿಯಲ್ಲಿ ಸಂಕ್ರಾಂತಿ ವಿಶೇಷ “ಮಹಾಸಂಚಿಕೆಗಳ” ಮಹಾಸಂಭ್ರಮ

Published on

665 Views
Advertisement

ಇದೇ ಸೋಮವಾರದಿಂದ ಉದಯ ಟಿವಿಯಲ್ಲಿ
ಸಂಕ್ರಾಂತಿ ವಿಶೇಷ “ಮಹಾಸಂಚಿಕೆಗಳ” ಮಹಾಸಂಭ್ರಮ

 

Advertisement

ಈ ಸಂಕ್ರಾಂತಿ ಹಬ್ಬಕ್ಕೆ ಮನರಂಜನೆಯ ಪಾಕವನ್ನೇ ಉಣಬಡಿಸುತ್ತಿದೆ ಉದಯ ಟಿವಿ. ಮನರಂಜನೆÀ ಕಾರ್ಯಕ್ರಮಗಳಲ್ಲಿ ಸದಾ ವಿಭಿನ್ನರೂಪವನ್ನು ಅಳವಡಿಸಿಕೊಂಡು, ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಹೆಚ್ಚಿಸುವ ನಿಟ್ಟಿನಲ್ಲಿ ಉದಯ ಟಿವಿ ತನ್ನ ಧಾರಾವಾಹಿಗಳ ಮಹಾಸಂಚಿಕೆ ಪ್ರಸಾರ ಮಾಡುತ್ತಿದೆ. ಸಂಕ್ರಾಂತಿ ಹಬ್ಬದ ಕೊಡುಗೆಯಾಗಿ ಮಹಾಸಂಚಿಕೆಯ ರೂಪದಲ್ಲಿ ವೀಕ್ಷಕರಿಗೆ ರಸದೌತಣ ನೀಡಲಿರುವ ಧಾರಾವಾಹಿಗಳು ಕಾವೇರಿ ಮತ್ತು ದೊಡ್ಮನೆಸೊಸೆ.

ದೊಡ್ಮನೆ ಸೊಸೆ:

Advertisement

 

ಸೂರ್ಯ ಮತ್ತು ಶೃತಿ ಈಗಾಗಲೇ ದೊಡ್ಡಮ್ಮನ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿರುತ್ತಾರೆ. ತಾನು ಪ್ರೀತಿಸ್ತಿರೋ ಹುಡುಗ ಸೂರ್ಯ ಈಗ ಶೃತಿಯ ಪಾಲಾದನೆಂಬ ಹೊಟ್ಟೆ ಕಿಚ್ಚು ಚಾಂದಿನಿಗಿದೆ. ಹಾಗಾಗಿ ಶೃತಿ ಸೂರ್ಯಇಬ್ಬರಿಗೂ ದೊಡ್ಡಮ್ಮ ಮತ್ತು ಚಾಂದಿನಿಯಿಂದ ಆತಂಕವಿರುತ್ತದೆ. ಹಾಗೆಯೇ ಹಬ್ಬಕ್ಕೆ ಮನೆಯವರೆಲ್ಲ ಸೇರಿ ಸಂಕ್ರಾಂತಿ ಆಚರಿಸುತ್ತಿರುವಾಗ, ಶೃತಿ ಕೈಯಿಂದ ಪೂಜೆಯ ಪ್ರಧಾನ ಹಸುವಿಗೆ ವಿಷ ಉಣಿಸುವ ಮಸಲತ್ತನ್ನು ದೊಡ್ಡಮ್ಮ ಮತ್ತು ಚಾಂದಿನಿ ಸೇರಿ ಮಾಡಿರುತ್ತಾರೆ.

Advertisement

 

Advertisement

ದೊಡ್ಮನೆಯ ಆಚಾರ ಸಂಪ್ರದಾಯದಲ್ಲಿ ಹಸುವನ್ನು ಕೊಂದಿರುವ ಅಪವಾದ ಶೃತಿ ಮೇಲೆ ಬರುತ್ತದೆ. ಈ ಸಮಯಲ್ಲಿ ಶೃತಿ ಮನೆಯಿಂದ ಹೊರ ಹೋಗುತ್ತಾಳೋ ಅಥವಾ ಆಗಿರೋ ಅನ್ಯಾಯಕ್ಕೆ ತಾನು ಹೊಣೆಯಲ್ಲವೆಂಬುವುದನ್ನು ಶೃತಿ ಹೇಗೆ ಸಾಬೀತು ಮಾಡುತ್ತಾಳೆ? ಎಂಬುವುದನ್ನು ದೊಡ್ಮನೆ ಸೊಸೆ ಮಹಾಸಂಚಿಕೆಯಲ್ಲೇ ಕಾದು ನೋಡಬೇಕು.

 

ಕಾವೇರಿ:

ಅನುಭವಿ ಪಾತ್ರವರ್ಗ ಹಾಗೂ ಕುತೂಹಲಭರಿತ ಕಥಾಹಂದರವನ್ನು ಹೊಂದಿರುವ ಕಾವೇರಿ ಈಗಾಗಲೇ ಕನ್ನಡ ಕುಲಕೋಟಿಯ ಮನಸುಗಳಲ್ಲಿ ಅಚ್ಚೊತ್ತಿ ಕುಳಿತಿದೆ. ಮಡದಿಯೂ, ತಾಯಿಯೂ ಆಗಿರುವ ಕಾವೇರಿ ತನ್ನ ತ್ಯಾಗಮಯೀ ಸ್ವಭಾವದಿಂದಲೇ ಹೆಂಗಳೆಯರ ಮನಸೂರೆಗೊಂಡಿದ್ದಾಳೆ. ತನ್ನ ಬದುಕಿನಲ್ಲಿ ನಡೆದ ಅನಿರೀಕ್ಷಿತ ಘಟನೆಯ ನಂತರ ಮನೆ ಸೇರಿರುವ ಕಾವೇರಿ ಅವನು ಸಾಕುತ್ತಿರುವ ಮಕ್ಕಳಿಗೆ ತಾಯಿಯಾಗಿ ನಟಿಸುತ್ತಿದ್ದಾಳೆ. ಸಂತೋಷ್‍ನ ಅಪ್ಪ ಮಾಡಿದ ತಪ್ಪನ್ನು ಬಯಲು ಮಾಡಿ, ಆ ಮಕ್ಕಳಿಗೆ ನ್ಯಾಯಕೊಡಿಸುವುದು ಕಾವೇರಿಯ ಬದುಕಿನ ಉದ್ದೇಶವೇ ಆಗಿ ಬದಲಾಗಿದೆ. ಹೀಗಿರುವಾಗ ಕಾವೇರಿಗೆ ಬಾಲ್ಯದ ಗೆಳತಿ ರಾಧಾ (ಜೋಜೋ ಲಾಲಿ) ಭೇಟಿಯಾಗ್ತಾಳೆ. ಅವಳ ಜೀವನದಲ್ಲಿ ನಡೆದ ಘಟನೆಗಳನ್ನು ಕೇಳಿ ಮರುಗುವ ಕಾವೇರಿ,ರಾಧಾ ಹಾಗೂ ಅವಳ ಪ್ರೇಮಿ ಪ್ರೀತಂನನ್ನು ಒಂದಾಗಿಸುವ ನಿರ್ಧಾರ ಮಾಡುತ್ತಾಳೆ. ಸಂಕ್ರಾಂತಿಯ ಶುಭಮುಹೂರ್ತದಲ್ಲಿ ಅವರನ್ನು ಒಂದುಗೂಡಿಸೋ ಪ್ರಯತ್ನದಲ್ಲಿ ಯಶಸ್ವಿಯಾಗ್ತಾಳಾ? ಮಹಾ ಸಂಚಿಕೆ ನೋಡಿ ತಿಳಿದುಕೊಳ್ಳಬೇಕು.

ಜನವರಿ 15ರಂದು ಸೋಮವಾರ ಸಂಜೆ 6 ರಿಂದ 7:30ರವರೆಗೆ ಕಾವೇರಿ ಜೊತೆ ಜೋಜೋ ಲಾಲಿಯ ಪಾತ್ರಗಳು ಜೊತೆಯಾಗಿ ಒಂದುವರೆ ಗಂಟೆಗಳ ಕಾಲ “ಕಾವೇರಿ ಮಹಾಸಂಚಿಕೆ”ಯಾಗಿ ಪ್ರಸಾರವಾಗಲಿದೆ. ಹಾಗೂ ರಾತ್ರಿ 9:30 ರಿಂದ 10:30 ರವರೆಗೂ “ದೊಡ್ಮನೆ ಸೊಸೆ ಮಹಾಸಂಚಿಕೆ”É ಸಂಕ್ರಾಂತಿ ವಿಶೇಷವಾಗಿ ಬರಲಿದೆ.

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com