flixOye
Buzz

ಸದ್ಯದಲ್ಲೇ ತಾಯಿಯಾಗುತ್ತಿರುವ ವಿಚಾರವನ್ನು ಹಂಚಿಕೊಂಡ ಸಂಜನಾ ಗಲ್ರಾನಿ

ಡ್ರಗ್ಸ್ ಕೇಸ್ ಮೇಲೆ ಜೈಲಿಗೆ ಹೋಗಿ ಬಂದ ಗಂಡ ಹೆಂಡತಿ ಖ್ಯಾತಿಯ ಸಂಜನಾ ಗಲ್ರಾನಿ ತಾವು ಮದುವೆಯಾಗಿರುವ ವಿಚಾರವನ್ನು ಮುಚ್ಚಿಟ್ಟಿದ್ದರು ನಂತರ ದಿನಗಳಲ್ಲಿ ಅವರ ಮದುವೆ ವಿಚಾರ ಸಾಕಷ್ಟು ವೈರಲ್ ಆಯಿತು. ವೃತ್ತಿಯಲ್ಲಿ ವೈದ್ಯರಾಗಿರುವ ಅಝೀಜ್ ಪಾಷಾ ಅವರನ್ನು ಮುಸ್ಲಿಂ ಸಂಪ್ರದಾಯದಂತೆ ವಿವಾಹವಾಗಿದ್ದರು ಸಂಜನಾ ಗಲ್ರಾನಿ. ನಂತರ ಸ್ವತಃ ಸಂಜನಾ ಇದನ್ನು ಒಪ್ಪಿಕೊಂಡರು.


ಗಂಡ- ಹೆಂಡತಿ ಇಬ್ಬರು ಚೆನ್ನಾಗಿದ್ದರು ಕೆಲವೊಂದು ಕಾಟ್ರವರ್ಸಿಗಳು ಇವರನ್ನು ಬಿಟ್ಟಿಲ್ಲ. ಇದರ ಬಗ್ಗೆ ಸಂಜನಾ ಗಲ್ರಾನಿಯವರು ಬೇಸಾರ ವ್ಯಕ್ತಪಡಿಸಿದ್ದಾರೆ. ಕಳೆದ ಕೊರೋನಾ ಸಮಯದಲ್ಲಿ ಸಮಾಜ ಸೇವಾ ಕಾರ್ಯಗಳನ್ನು ಮಾಡಿರುವ ಸಂಜನಾ ಅವರು ಸದ್ಯದಲ್ಲೇ ತಾಯಿಯಾಗುತ್ತಿರುವ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಬೇಬಿ ಬಂಪ್ ಪೋಟೋ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಿದ್ದೇನೆ ಎಂದಿದ್ದಾರೆ ಸಂಜನಾ.

ಸಂಬಂಧಿತ · Related