Sada Nimmondige and Sawalige sai Reality show in Udaya Tv

Published on

432 Views
Advertisement

ಉದಯ ಟಿವಿಯಲ್ಲಿ ಡಬಲ್ ಧಮಾಕಾ
ಜುಲೈ 14ರಿಂದ “ಸವಾಲ್ ಗೆ ಸೈ” 15 ರಿಂದ “ಸದಾ ನಿಮ್ಮೋಂದಿಗೆ”
ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ

25ನೇ ವರ್ಷದಲ್ಲಿ ಕಾಲಿಟ್ಟ ಉದಯ ಟಿವಿ ಕರುನಾಡ ಜನತೆಯ ಹೆಮ್ಮೆಯ ಚಾನಲ್. ಮನಸೂರೆಗೋಂಡ ಧಾರಾವಾಹಿಗಳನ್ನು ಮತ್ತು ಮನ ಮೆಚ್ಚುವ ರಿಯಾಲಿಟಿ ಶೋಗಳನ್ನು ಅಂದಿನಿಂದ ಇಂದಿನ ವರೆಗೆ ವೀಕ್ಷಕರ ಮಡಿಲಲ್ಲಿ ಹಾಕಿ ಸೈ ಎನಿಸಿಕೊಂಡ ಏಕೈಕ ಕನ್ನಡದ ಮೊದಲ ವಾಹಿನಿ ಎಂದು ಹೇಳಬಹುದು.
ಇತ್ತಿಚಗಷ್ಟೆ “ಮಾಯಾ” ಎಂಬ ವಿಭಿನ್ನ ರೀತಿಯ ಧಾರಾವಾಹಿಯನ್ನು ಬಿತ್ತರಿಸಿದ ಬೆನ್ನ ಹಿಂದೆ ಈಗ ಅಧ್ಬುತ ಕಾನ್ಸೆಪ್ಟ್‍ನೊಂದಿಗೆ ಎರಡು ರೀಯಾಲಿಟಿ ಶೋವನ್ನು ವೀಕ್ಷಕರ ಮಡಲಿಗೆ ಹಾಕಲು ನಿರ್ಧರಿಸಿದೆ. ಎರಡೂ ಕೂಡಾ ಸೆಲೆಬ್ರಿಟಿಗಳಿಂದ ಕೂಡಿದ ಕಾರ್ಯಕ್ರಮವಾದರೂ ಒಂದು ಶೋ ಸೆಲಬ್ರಿಟಿಗಳಿಂದ ಮನರಂಜನೆ ಕೊಡುವ ಶೋ ಆದರೆ ಮತ್ತೊಂದು ಸೆಲಬ್ರಿಟಿಗಳಿಂದ ಸಮಾಜ ಕಳಕಳಿಯನ್ನು ಇಟ್ಟುಕೊಂಡ ಕಾರ್ಯಕ್ರಮ. ಇದೇ ಜುಲೈ 14ಕ್ಕೆ(ಶನಿವಾರ)”ಸವಾಲ್ ಗೆ ಸೈ” ಮತ್ತು 15ಕ್ಕೆ(ಭಾನುವಾರ)”ಸದಾ ನಿಮ್ಮೊಂದಿಗೆ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Advertisement

ಸೆಲಬ್ರಿಟಿಗಳಿಂದ ಪಕ್ಕಾ ಮನರಂಜನೆಯ ಶೋ “ಸವಾಲ್‍ಗೆ ಸೈ”
ಇದೇ ಶನಿವಾರದಿಂದ ರಾತ್ರಿ 9ಕ್ಕೆ

ಮನರಂಜನೆಯೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸವಾಲು ಜವಾಬುಗಳ ಜುಗಲ್ಬಂದಿಯಾಗಿ ತೆರೆಯಮೇಲೆ ಇದೊಂದು ಹೊಸ ರೀತಿಯ, ವಿನೂತನ ರಿಯಾಲಿಟಿ ಶೋ ಆಗಿ ಮೂಡಿಬರಲಿದೆ. ಸವಾಲ್ ಗೆ ಸೈ ಕಾರ್ಯಕ್ರಮದಲ್ಲಿ ಹಿರಿತೆರೆ ಮತ್ತು ಕಿರುತೆರೆಯ ತಾರೆಯರ ದಂಡು ಭಾಗವಹಿಸಲಿದ್ದಾರೆ.
ಆಟದಲ್ಲಿ ಎರಡು ತಂಡವಿದ್ದು, ಪ್ರತಿ ತಂಡದಿಂದ ನಾಲ್ಕು ಜನ ಸ್ಪರ್ಧಿಸುತ್ತಾರೆ. ಸವಾಲುಗಳಿಗೆ ಜವಾಬು ಕೊಡಲು ತಾರೆಯರ ಪರದಾಟ, ಸೆಣೆಸಾಟ, ಜೊತೆಗೆ ಒಂದಿಷ್ಟು ಹುಡುಗಾಟವನ್ನೂ ನಾವು ನೋಡಬಹುದು. ಜವಾಬು ನೀಡಲಾಗದಿದ್ದರೆ ಅನಿರೀಕ್ಷಿತವಾದರೂ ಮಜ ನೀಡುವಂತ ಸಜೆಗಳನ್ನು ನೀಡಲಾಗುವುದು. ಗೆಲುವು ಸೋಲಿಗಿಂತ ಇಲ್ಲಿ ಕೊಡುವ ಕ್ರಿಯಾಶೀಲ ಸವಾಲುಗಳನ್ನು ಎದುರಿಸಲು ತಾರೆಯರು ಬರುತ್ತಿರುವುದು ಒಂದು ವಿಶೇಷ. ಹಿರಿಯರಿಂದ ಕಿರಿಯರವರೆಗೂ ಮನೆಮಂದಿಯೆಲ್ಲಾ ಕೂತು ನೋಡುವಂತ ಶೋ “ಸವಾಲ್ ಗೆ ಸೈ”.
ಹಿರಿತೆರೆ ಮತ್ತು ಕಿರುತೆರೆ, ಎರಡರಲ್ಲೂ ತನ್ನ ನಟನೆಯಿಂದ ಮನೆಮಾತಾಗಿರೋ ನಿತ್ಯ ರಾಂ, ಇದೇ ಮೊದಲ ಬಾರಿಗೆ “ಸಾವಲ್ ಗೆ ಸೈ” ಕಾರ್ಯಕ್ರಮದಿಂದ ನಿರೂಪಕಿಯಾಗಲಿದ್ದಾರೆ. ಜೊತೆಗೆ ತನ್ನ ಮಾತಿನಿಂದಲೇ ನಗುವಿನ ಹೊಳೆ ಹರಿಸುವ ನಿರಂಜನ್ ದೇಶಪಾಂಡೆ ಸಹ ನಿರೂಪಕನಾಗಿ ಕಾರ್ಯ ವಹಿಸಲಿದ್ದಾರೆ.
ವಾರಾಂತ್ಯದಲ್ಲಿ ಪ್ರಸಾರವಾಗುವ ಈ ಶೋನಲ್ಲಿ ಜನಕ್ಕೆ ತಮ್ಮ ನೆಚ್ಚಿನ ತಾರೆಯರ ಪರಿಚಯ, ಮತ್ತಷ್ಟು ಹತ್ತಿರದಿಂದ ಆಗುವುದರಲ್ಲಿ ಅನುಮಾನವೇ ಇಲ್ಲ. ಹಾಗೆ ಮಸ್ತಿ ಮತ್ತು ಮನರಂಜನೆ ಅನಿಯಮಿತವಾಗಿ ದೊರೆಯಲಿದೆ ಎಂಬುದು ಉದಯ ಟಿವಿಯ ಆಶಯ.

Advertisement


ಸೆಲಬ್ರಿಟಿಗಳಿಂದ ಸಮಾಜಿಕ ಕಳಕಳಿ “ಸದಾ ನಿಮ್ಮೊಂದಿಗೆ”
ಮೊದಲ ಸಂಚಿಕೆಯಲ್ಲಿ ಬಹದ್ದೂರ್ ಎಂಟ್ರಿ
ಇದೇ ಭಾನುವಾರದಿಂದ ರಾತ್ರಿ 9ಕ್ಕೆ

ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಸಮಾಜ ಕಾಳಜಿ ಇಟ್ಟುಕೊಂಡು ಸಾಮಾನ್ಯ ಜನರಿಗೆ ಅನಕೂಲವಾಗಲು ಸೆಲಬ್ರಿಟಿಗಳು ಸಾಮನ್ಯ ಜನರಂತೆ ಕೆಲಸವನ್ನು ಮಾಡಿ ನೊಂದ ಮನಸ್ಸಿಗೆ ಸಹಾಯ ಮಾಡುವ ಏಕೈಕ ಶೋ “ಸದಾ ನಿಮ್ಮೊಂದಿಗೆ” ಇದೇ ಭಾನುವಾರದಿಂದ ರಾತ್ರಿ 9ಕ್ಕೆ ಉದಯಟಿವಿಯಲ್ಲಿ ಪ್ರಸಾರವಾಗುತ್ತಿದೆ.

Advertisement

ಪ್ರತಿ ಒಂದು ವಾರ ಅಸಹಾಯಕರಿಗೆ ಅವರ ಅವಶ್ಯಕತೆಗೆ ಚಿತ್ರರಂಗದ ದಿಗ್ಗಜರು ಸಾಮಾನ್ಯ ಜನರಂತೆ ಸಾರ್ವಜನಿಕರ ಮುಂದೆ ಕೆಲಸವನ್ನು ಮಾಡಿ ಹಣವನ್ನು ಸಂಗ್ರಹಿಸುತ್ತಾರೆ. ಆ ಸಂದರ್ಭದಲ್ಲಿ ಬಂದ ಹಣಕ್ಕೆ ಉದಯ ಟಿವಿ ಆ ಒಟ್ಟು ಹಣಕ್ಕೆ 100ರಷ್ಟು ಸೆರಿಸಿ ಅವರ ಜೀವನಕ್ಕೆ ಅನುಕೂಲವನ್ನು ಮಾಡಿಕೊಡುವ ಸಮಾಜ ಕಳಕಳಿಯ ಕಾರ್ಯಕ್ರಮ ಇದಾಗಿದೆ. ಹೂವು ಮಾರುವುದು, ಏಳೆನೀರು ಮಾರುವುದು, ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡುವುದು,ಆಟೋ ಓಡಿಸುವುದು, ಗೋಲಿ ಸೋಡಾ ಮಾರುವುದು,ಸೊಪ್ಪು ಮಾರುವುದು ಪಾನಿ ಪುರಿ,ಕಬ್ಬಿನ ಹಾಲು ಮಾರುವುದು ಹೀಗೆ ಇನ್ನೂ ಅನೇಕ ಕೆಲಸವನ್ನು ಸಾರ್ವಜನಿಕರ ನಡುವೆ ಮಾಡಿ ಈ ಶೋಗೆ ಕೈ ಜೋಡಿಸಿದ್ದಾರೆ ಸ್ಯಾಂಡಲ್‍ವುಡ್ ತಾರೆಯರು.

“ಸದಾ ನಿಮ್ಮೊಂದಿಗೆ” ಯ ಮುಂಚುಣಿಯನ್ನು ಪಂಚಭಾಷಾ ತಾರೆ, ಕನ್ನಡದ ಹೆಸರಾಂತ ನಟಿ, ಚಿತ್ರರಂಗದಲ್ಲಿ 50 ವರ್ಷವನ್ನು ಯಶಸ್ವಿಯಾಗಿ ಪೂರೈಸಿದ “ಜೂಲಿಲಕ್ಮೀ”ಯವರು ವಹಿಸಿಕೊಂಡಿದ್ದಾರೆ. ಲಕ್ಷ್ಮೀಯವರು ಈ ಕಾರ್ಯಮದಲ್ಲಿ ತಮ್ಮ ಜೀವನಾನುಭವದಲ್ಲಿ ನೋಡಿರುವ ಘಟನೆಗಳನ್ನು ಉದಾಹರಣೆಗೆ ತೆಗೆದುಕೊಂಡು ಬಹಳ ಘನತೆಯಿಂದ ನಡೆಸಿಕೊಡುತ್ತಿದ್ದಾರೆ.

“ಎಷ್ಟೋ ಸಲ ನಮಗೆ ಅಸಹಾಯಕರಿಗೆ ಸಹಾಯ ಮಾಡಬೇಕು ಅನಿಸುತ್ತೆ ಆದರೆ ಯಾವುದೋ ಸಂದರ್ಭದಲ್ಲಿ ಅದನ್ನು ನಾವು ಮರೆತು ಬಿಡುತ್ತೇವೆ. ಆದರೆ ಉದಯ ಟಿವಿ ಈ ಕಾರ್ಯವನ್ನು ಕರ್ತವ್ಯ ಎಂದು ಭಾವಿಸಿ ದುರ್ಬಲರಿಗೆ ಬಲವನ್ನು ಕೊಡುವ ಅದ್ಭುತ ಕಾರ್ಯವನ್ನು ಮಾಡುತ್ತಿದೆ.ಇದಕ್ಕೆ ಸ್ಯಾಂಡಲ್‍ವುಡ್‍ನ ನಟನಟಿಯರು ಕೈ ಜೋಡಿಸಿದ್ದಾರೆ ಎಂಬುದು ಸಂತಸದ ವಿಷಯ. ಕನ್ನಡ ಕಿರುತೆರೆಯ ಇತಿಹಾದಲ್ಲಿಯೇ ಮೊದಲ ಬಾರಿಗೆ ಉದಯ ಟಿವಿ ಇಂತಹ ಕಾರ್ಯಕ್ರಮವನ್ನು ನಡೆಸಸುತ್ತಿರುವುದು ಅಭಿನಂದನಾರ್ಹ” ಎಂದು ಜುಲಿ ಲಕ್ಷ್ಮೀ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

Advertisement

“ಸದಾ ನಿಮ್ಮೊಂದಿಗೆ” ಕಾರ್ಯಕ್ರಮದಲ್ಲಿ ಮೊದಲ ಸಂಚಿಕೆಯಲ್ಲಿ ಅದ್ಧೂರಿಯಾಗಿ ಎಂಟ್ರಿ ಕೊಟ್ಟು ಬಹದ್ದೂರ್ ಆಗಿ ಮಿಂಚಿರೋ ಸರ್ಜಾ ಫ್ಯಾಮಿಲಿಯ ಭರ್ಜರಿ ಹುಡ್ಗ ಧ್ರುವ ಸರ್ಜಾ. ಇವರು ನರೇಂದ್ರ ಕುಮಾರ್ ಎಂಬ ಒಬ್ಬ ಆಟೋ ಡ್ರೈವರ್‍ಗೆ ಸಹಾಯ ಮಾಡಿದ್ದಾರೆ. ಧ್ರುವ ಸರ್ಜಾ ಅವರು ನರೇಂದ್ರ ಕುಮಾರ್‍ರ ಹಾಗೆ ಆಟೋ ಓಡಿಸಿ ಅವರಿಗೆ ಸಹಾಯವನ್ನು ಮಾಡಿದ್ದಾರೆ.

ಅಟೋ ಓಡಿಸುವ ಮೊದಲು ಆಟೋರಾಜ ಶಂಕ್ರಣ್ಣನ ಪ್ರತಿಮೆಗೆ ಹೂವಿನಹಾರ ಹಾಕಿ ನಮಸ್ಕರಿಸಿ ಶ್ರದ್ಧೆಯಿಂದ ಆಟೋ ಹತ್ತಿದರು. ಇವರಿಗೆ ಸಿಕ್ಕ ಮೊಟ್ಟ ಮೊದಲ ಕಸ್ಟಮರ್ ಗರ್ಭಿಣಿ ಅವರನ್ನು ಕರೆದುಕೊಂಡು ಹೋಗಿ ಶ್ರೀನಗರ ಆಸ್ಪತ್ರೆಗೆ ಬಿಟ್ರು. ಆ ಗರ್ಭಿಣಿ ಹತ್ರ ದುಡ್ಡು ತೆಗೆದುಕೊಳ್ಳದೇ ತಾವೇ ಆ ದುಡ್ಡನ್ನ ತಮ್ಮ ಜೇಬಿನಿಂದ ಕೊಟ್ಟಿದ್ದಾರೆ. ನಂತರ ವಿದ್ಯಾರ್ಥಿಗಳನ್ನು ವಾಸವಿ ಕಾಲೇಜ್‍ಗೆ ಬಿಟ್ಟು ಅಲ್ಲಿ ಸ್ಟೂಡೆಂಟ್ಸ್ ಜೊತೆ ಕುಣಿದು ಕುಪ್ಪಳಿಸಿ, ಮೋಜು ಮಸ್ತಿ ಮಾಡಿ ಮತ್ತೆ ಆಟೋ ಹತ್ತಿದರು. ಹೀಗೆ ದಿನ ಪೂರ್ತಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧ ದಂಪತಿಗಳ ವರೆಗೂ ಬೆಂಗಳೂರಿನಾದ್ಯಂತ ಎಲ್ಲ ಕಡೆ ಆಟೋ ಓಡಿಸಿದರು ಬಂದ ಹಣದಿಂದ ನರೇಂದ್ರ ಕುಮಾರ್ ಅವರ ಸ್ವಂತ ಆಟೋ ಮಾಡಿಕೊಳ್ಳೋ ಆಸೆಯನ್ನು ಪೂರೈಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಶೋನಲ್ಲಿ ಪ್ರತಿ ವಾರವೂ ಒಬ್ಬೊಬ್ಬ ಸೆಲಬ್ರಿಟಿಗಳು ಬಂದಿದ್ದಾರೆ ಅವರುಗಳಲ್ಲಿ ಶ್ರೀ ಮುರಳಿ,ಲವ್ಲಿ ಸ್ಟಾರ್ ಪ್ರೇಮ್,ಪ್ರೀಯಾಂಕ ಉಪೇಂದ್ರ,ಪಾರೂಲ್ ಯಾದವ್,ವಿಜಯ ರಾಘವೇಂದ್ರ,ಸೃಜನ್ ಲೋಕೇಶ್,ಮಾನ್ವಿತಾ ಹರೀಶ್,ಪ್ರೀಯಾಮಣಿ,ರಶ್ಮೀಕಾ ಮಂದಣ್ಣ,ರ್ಧನಂಜಯ್,ಚಿರಂಜೀವಿ ಸರ್ಜಾ, ಹೀಗೆ ಇನ್ನೂ ಅನೇಕರು ಭಾಗವಹಿಸಿದ್ದಾರೆ.

ಇನ್ನು ಈ ಕಾರ್ಯಕ್ರಮ ಸೃಜನ್ ಲೋಕೇಶ್ ನೇತೃತ್ವದ ಪ್ರತಿಷ್ಠಿತ”ಲೋಕೇಶ್ ಪ್ರೊಡಕ್ಷನ್” ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗುತ್ತಿದೆ.

ಆರ್ಥಿಕ ದುರ್ಭಲರಿಗೆ ಬೆಂಬಲ ನೀಡಿ, ಬಲಹೀನರಿಗೆ ದೈರ್ಯತುಂಬುವ ಶಕ್ತಿ ನೀಡುವ, ಕಷ್ಟದ ಕಗ್ಗತ್ತಲೆಯಲ್ಲಿ ಮುಳಗಿದವರಿಗೆ ಬೆಳಕಿನ್ನು ಕೊಡುವ, ನೊಂದ ಬೆಂದ ಮನಸ್ಸಿಗೆ ಸೆಲಬ್ರಿಟಿಗಳಿಂದ ಸಾಂತ್ವನ ಹೆಳುವ ಉದಯ ಟಿವಿಯ ರೀಯಾಲಿಟಿ ಅಲ್ಲ್ಲ ರೀಯಲ್ ಶೋ “ಸದಾ ನಿಮ್ಮೊಂದಿಗೆ” ಪ್ರತಿ ಭಾನುವಾರ(15.7.2018) 9ಕ್ಕೆ ಪ್ರಸಾರವಾಗಲಿದೆ.

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com