’ರೂಪಾಯಿ’ ಕನ್ನಡ ಸಿನಿಮಾ ಹೊಸಬರ ಹೊಸ ಪ್ರಯತ್ನದ ಸಿನಿಮಾ. ಈಗಾಗಲೇ ಒಂದಿಷ್ಟು ಸಿನಿ ಪ್ರೇಕ್ಷಕರಿಗೆ ಭರವಸೆ ಮೂಡಿಸಿರುವ ಕನ್ನಡ ಸಿನಿಮಾ. ತುಂಬ ಜನ ಸಿನಿಪ್ರೇಕ್ಷಕರು ನಮ್ಮ ಸಿನಿಮಾವನ್ನು ಕಾತುರದಿಂದ ಎದುರು ನೋಡುತ್ತಿದ್ದಾರೆ. ಅದಕ್ಕೆಲ್ಲ ಕಾರಣ ಸಿನಿರಸಿಕರಿಗೆ ಭರವಸೆ ಮೂಡಿಸುವ ಸಲುವಾಗಿ ನಾವು ತಯಾರಿಸಿದ ’ರೂಪಾಯಿ’ ಸಿನಿಮಾದ ಸುಮಾರು ೨೦ ನಿಮಿಷಗಳ ಮನರಂಜಿಸುವ ಈ ’ರೂಪಾಯಿ’ ಪ್ರೊಮೋಷನಲ್ ವೀಡಿಯೋ.
https://www.youtube.com/watch?v=xtSfbSXbejg
ಬೇರೆ ಯೂಟ್ಯೂಬ್ ಚಾನಲ್ ನಿಂದ ಬಹಳ ಹಿಂದೆಯೇ ಪ್ರೊಮೋಷನಲ್ ವೀಡಿಯೋ ಬಿಡುಗಡೆಯಾದರು ಹೊಸಬರ ಸಿನಿಮಾಗೆ ಬರುವ ಅಡೆತಡೆಗಳನ್ನು ದಾಟಿ ’ರೂಪಾಯಿ’ ಚಿತ್ರ ಈಗಷ್ಟೆ ಚಿತ್ರೀಕರಣ ಶುರುಮಾಡಿಕೊಂಡಿದೆ. ಒಂದಷ್ಟು ಸಿನಿ ಪ್ರೇಕ್ಷಕರಿಗೆ ಭರವಸೆ ಮೂಡಿಸಿರುವ ಈ ವೀಡಿಯೋ ಇನ್ನಷ್ಟು ಸಿನಿ ರಸಿಕರಿಗೆ ತಲುಪಿಸುವ ಸಲುವಾಗಿ ನಮ್ಮದೇ ಪ್ರೊಡಕ್ಷನ್ ಕಂಪನಿ ’ವಿವಿಧ್ ಸಿನಿಮಾಸ್’ ಯೂಟ್ಯೂಬ್ ಚಾನಲ್ ಮೂಲಕ ಮತ್ತೆ ನಿಮ್ಮ ಬಳಿ ತರುತ್ತಿದ್ದೇವೆ. ದಯಮಾಡಿ ಈ ’ರೂಪಾಯಿ’ ಪ್ರೊಮೋಷನಲ್ ವೀಡಿಯೋ ನೋಡಿ ಲಿಂಕ್ ಶೇರ್ ಮಾಡುವ ಮೂಲಕ ಈ ಹೊಸ ತಂಡವನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ. ನಮ್ಮ ಎಲ್ಲ ಅಪ್ಡೇಟ್ಸ್ ಗಾಗಿ ನಮ್ಮ ಈ ಅಧಿಕೃತ ಯೂಟ್ಯೂಬ್ ಚಾನಲ್ ಅನ್ನು ಸಬ್ಸ್ ಕ್ರೈಬ್ ಮಾಡಿ. ಧನ್ಯವಾದಗಳು.









