OTT ಸಿನಿಮಾಗಳ ಖರೀದಿ ಹೇಗೆ?

Published on

415 Views
Advertisement

“OTT” ಯಲ್ಲಿ ಸಿನಿಮಾ ಖರೀದಿ ಮಾಡಲು ಮೂರು ವಿಧಾನಗಳಿವೆ. ಮೊದಲ ವಿಧಾನದಡಿ ಸ್ಟಾರ್‌ ನಟ ಮತ್ತು ನಟಿಯರ ಸಿನಿಮಾಗಳನ್ನು ಔಟ್‌ರೇಟ್‌ ಲೆಕ್ಕಾಚಾರದಲ್ಲಿ ಒಂದೇ ಬಾರಿಗೆ ಹಣ ಪಾವತಿಸಿ ಖರೀದಿಸಲಾಗುತ್ತದೆ. ಸ್ಟಾರ್‌ ನಟ, ನಟಿಯರ ಸಿನಿಮಾಗಳಿಗಷ್ಟೇ ಈ ವಿಧಾನ ಮೀಸಲು. ಹೊಸಬರ ಚಿತ್ರಗಳನ್ನು ಈ ಮಾದರಿಯಲ್ಲಿ ಖರೀದಿಸುವುದು ವಿರಳ.

ಎರಡನೇ ವಿಧಾನದಲ್ಲಿ ಕಂತುಗಳ ರೂಪದಲ್ಲಿ ಸಿನಿಮಾ ಖರೀದಿಸಲಾಗುತ್ತದೆ. ಉದಾಹರಣೆಗೆ 1 ಕೋಟಿಯ ಮೊತ್ತಕ್ಕೆ ಸಿನಿಮಾವೊಂದನ್ನು ಖರೀದಿಸಿದರೆ ಹತ್ತು ಕಂತುಗಳಲ್ಲಿ ಸಂಬಂಧಪಟ್ಟ ನಿರ್ಮಾಪಕರಿಗೆ ಹಣ ನೀಡಲಾಗುತ್ತದೆ. ಒಟಿಟಿ ವೇದಿಕೆಯು ಎಷ್ಟು ಕಂತುಗಳನ್ನಾದರೂ ನಿಗದಿಪಡಿಸಬಹುದು. ಕನ್ನಡದ ‘ನಾತಿಚರಾಮಿ’ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಖರೀದಿಸಿದ್ದು ಇದೇ ವಿಧಾನದಲ್ಲಿಯೇ. ಈ ಎರಡೂ ವಿಧಾನದಡಿ ವೇದಿಕೆಗಳು ಖರೀದಿಸಿದ ಸಿನಿಮಾಗಳಿಂದ ಎಷ್ಟು ಬೇಕಾದರೂ ದುಡಿದುಕೊಳ್ಳಬಹುದು. ಆ ಲಾಭದಲ್ಲಿ ನಿರ್ಮಾಪಕರಿಗೆ ಪಾಲು ಸಿಗುವುದಿಲ್ಲ.

Advertisement

ಮೂರನೇ ವಿಧಾನವೇ ‘ಪೇಪರ್‌ ವೀವ್‌’. ಈ ವಿಧಾನದಡಿ ನಿಮಿಷಗಳದ್ದೆ ಪ್ರಧಾನ ಪಾತ್ರ. ಸಿನಿಮಾವೊಂದನ್ನು ಆಯಾ ಒಟಿಟಿ ವೇದಿಕೆಯ ಚಂದಾದಾರರು ನೋಡುವ ನಿಮಿಷಗಳ ಆಧಾರದಡಿ ಲೆಕ್ಕಹಾಕಿ ನಿರ್ಮಾಪಕರಿಗೆ ಹಣ ಸಂದಾಯ ಮಾಡಲಾಗುತ್ತದೆ. ಸ್ಟ್ರೀಮಿಂಗ್‌ ನಿಮಿಷಗಳನ್ನು ಗಂಟೆಯ ಲೆಕ್ಕಾಚಾರಕ್ಕೆ ಸೀಮಿತಗೊಳಿಸಲಾಗುತ್ತದೆ. ಅಂದರೆ ಆ ಸಿನಿಮಾವನ್ನು ಚಂದಾದಾರರು ಎಷ್ಟು ಗಂಟೆ ವೀಕ್ಷಿಸಿದ್ದಾರೆ ಎಂದು ಲೆಕ್ಕ ಹಾಕಿ ಹಣ ನೀಡಲಾಗುತ್ತದೆ.

ಈ ಹಿಂದೆ 1 ಗಂಟೆಗೆ 7 ರೂಪಾಯಿ ನೀಡಲಾಗುತ್ತಿತ್ತಂತೆ. ಈಗ ಇದು 2 ರಿಂದ 3ಕ್ಕೆ ಇಳಿದಿದೆ. ಕನ್ನಡದ ‘ಅಮ್ಮಚ್ಚಿಯೆಂಬ ನೆನಪು’, ‘ಅಳಿದು ಉಳಿದವರು’, ‘ಬೀರ್‌ಬಲ್‌’ ಸಿನಿಮಾಗಳನ್ನು ಒಟಿಟಿ ವೇದಿಕೆಗಳು ಖರೀದಿಸಿರುವುದು ಈ ಲೆಕ್ಕಾಚಾರದಲ್ಲಿಯೇ. ಹಾಗಾಗಿ ಸಿನಿಮಾಗಳ ಸ್ಟ್ರೀಮಿಂಗ್‌ ಇಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಸದ್ಯಕ್ಕೆ ಕನ್ನಡ ಸಿನಿಮಾಗಳ ಖರೀದಿಗೆ ಇದೇ ವಿಧಾನವನ್ನೇ ಈ ವೇದಿಕೆಗಳು ಅನುಸರಿಸುತ್ತಿವೆ (‘ಲಾ’ ಮತ್ತು ‘ಫ್ರೆಂಚ್‌ ಬಿರಿಯಾನಿ’ ಮಾತ್ರ ಔಟ್‌ರೇಟ್‌ ಲೆಕ್ಕಾಚಾರದಲ್ಲಿ ಖರೀದಿಯಾಗಿವೆಯಂತೆ). ಇದರಿಂದ ನಿರ್ಮಾಪಕರಿಗೆ ಲಾಭವಾಗುವುದು ಕಡಿಮೆ. ಮತ್ತೊಂದೆಡೆ ಈ ವೇದಿಕೆಯಲ್ಲಿ ಬಿಡುಗಡೆಯಾಗುವ ಸಿನಿಮಾಗಳು ಅಂದೇ ಸಾಮಾಜಿಕ ಜಾಲತಾಣಗಳಲ್ಲಿಯೂ ಸೋರಿಕೆಯಾಗುವುದು ಮಾಮೂಲು.

Advertisement

More Buzz

Buzz 1 day ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 days ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 days ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 days ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 days ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 days ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 days ago

Massa Massa Lyrical Video Drops: Ram Charan & Janhvi Ignite Screens for Peddi

Short Films 4 days ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 4 days ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 4 days ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Trailers 4 days ago

Patriot ಕನ್ನಡ ಟ್ರೇಲರ್: Mammootty-Mohanlal ಡಬಲ್ ಧಮಾಕಾ ZEE5 ನಲ್ಲಿ!

Short Films 4 days ago

ಅನುಪಮ ಕನ್ನಡ ಕಿರುಚಿತ್ರ: ಸಸ್ಪೆನ್ಸ್ ಭರಿತ ಪೂರ್ಣ ಸರಣಿ ಈಗ ಲಭ್ಯ!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com