ವೀಡಿಯೋ ನೋಡಿ – ರಿಷಭ್ ಶೆಟ್ಟಿಗೆ ಸೆಲ್ಯೂಟ್ ಮಾಡಿ ಸಂಭ್ರಮಿಸಿದ ಆರ್.ಸಿ.ಬಿ ಯ ಸ್ಟಾರ್ ಬೌಲರ್ ಸಿರಾಜ್!!

Published on

804 Views
Advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಭಾರತದ ಸ್ಟಾರ್ ಬೌಲರ್ ಸಿರಾಜ್ ರಿಷಬ್ ಶೆಟ್ಟಿಗೆ ಸೆಲ್ಯೂಟ್ ಮಾಡಿ ಸಂಭ್ರಮಿಸಿದ್ದಾರೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!!

Advertisement

 

Advertisement

18ನೇ ತಾರೀಕಿನಂದು ನಡೆದ ಆರ್.ಸಿ.ಬಿ ಮ್ಯಾಚ್ ಮಾಡು ಇಲ್ಲವೆ ಮಡಿ ಪಂದ್ಯವಾಗಿತ್ತು. ಇದು ಆರ್.ಸಿ.ಬಿ ಗೆ ಮಾತ್ರವಲ್ಲದೆ ಪೈನಲ್ ಗೆ ಆಯ್ಕೆಯಾಗಲು ಸಿ.ಎಸ್.ಕೆ ಗೂ ಮಾಡು ಇಲ್ಲವೆ ಮಡಿ ಪಂದ್ಯವಾಗಿತ್ತು. ಈ ಎರಡು ತಂಡಗಳಲ್ಲಿ ಒಬ್ಬರು ಮಾತ್ರ ಫ್ಲೇ ಆಫ್ ಗೆ ತಲುಪಲು ಸಾಧ್ಯವಾಗಿತ್ತು.

Advertisement

ಇದು 2024ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡಯುವ ಕೊನೆಯ ಪಂದ್ಯ ಹಾಗು ಮುಖ್ಯ ಪಂದ್ಯವಾಗಿರುವುದರಿಂದ ಸ್ಯಾಂಡಲ್ವುಡ್ ಕಲಾವಿದರು ಹಾಗು ಕರ್ನಾಟಕದ ಪ್ರಮುಖ ವ್ಯಕ್ತಿಗಳು ಪಂದ್ಯ ವೀಕ್ಷಿಸಲು ಬಂದಿದ್ದರು ಹಾಗೂ ಆರ್‌.ಸಿ.ಬಿಯ ಮಹಿಳಾ ಕ್ರಿಕೆಟ್‌ ತಂಡದ ಆಟಗಾರ್ತಿಯರು ಪಂದ್ಯ ವೀಕ್ಷಿಸಲು ಬೆಂಗಳೂರಿಗೆ ಆಗಮಿಸಿದ್ದರು.

ನಟ ನಟಿಯರಲ್ಲಿ ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌, ರಿಷಭ್‌ ಶೆಟ್ಟಿ, ಅನುಷ್ಕಾ ಶರ್ಮಾ ಹಾಗೂ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಹಾಗು ಸಚಿವರು ಪಂದ್ಯ ನೋಡಲು ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದರು. ಆರ್‌.ಸಿ.ಬಿ ಯ ಪ್ರಮುಖ ಹಾಗೂ ಹಳೆಯ ಅಟಗಾರ ಕ್ರಿಸ್‌ ಗೇಲ್ ಹಾಗೂ ಸ್ಮೃತಿ ಮಂದಾನ, ಶ್ರೇಯಾಂಕ ಪಾಟೀಲ್‌ ಕೂಡ ಬಂದಿದ್ದರು.

Advertisement

ಆರ್.ಸಿ.ಬಿ ಪಂದ್ಯವನ್ನು ಗೆದ್ದು ಪ್ಲೇ ಆಫ್ ಗೆ ಆಯ್ಕೆಯಾದಾಗ ನಟ/ನಟಿಯರು, ರಾಜಕಾರಣಿಗಳು ಸಂಭ್ರಮಿಸಿದರು. ಪಂದ್ಯ ಗೆದ್ದ ನಂತರ ಆಟಗಾರರು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಸ್ಟೇಡಿಯಂನ ಸುತ್ತ ಚಪ್ಪಾಳೆ ತಟ್ಟುತ್ತಾ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.

ಕೃತಜ್ಞತೆಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಆರ್‌.ಸಿ.ಬಿ ಯ ಸ್ಟಾರ್ ಆಟಗಾರ ಮೊಹಮ್ಮದ್ ಸಿರಾಜ್ ಗ್ರೌಂಡ್ ನಿಂದ ರಿಷಭ್‌ ಶೆಟ್ಟಿಗೆ ಸೆಲ್ಯೂಟ್‌ ಮಾಡಿ ಸಂಭ್ರಮಿಸಿದರು. ಅದರ ವಿಡಿಯೋ‌ ಇಲ್ಲಿದೆ.

 

ಇದಕ್ಕೆ ರಿಷಭ್ ಶೆಟ್ಟಿ ಸಿರಾಜ್‌ ಗೆ ಲವ್‌ ಯು ಮಿಯಾ ಎಂದು ಹೇಳಿದರು ಹಾಗೂ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಫೋಟೋ ಮತ್ತು ವೀಡಿಯೋವನ್ನು ರಿಷಭ್ ಶೆಟ್ಟಿ ಶೇರ್ ಮಾಡಿ ಇದು ಇತಿಹಾಸವಾಗಿದೆ!!
ಕ್ರೀಡಾಂಗಣದಲ್ಲಿ ಇದು ನನ್ನ ಮೊದಲ ಪಂದ್ಯವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

https://www.instagram.com/p/C7HuFIDPvqR/?utm_source=ig_web_copy_link&igsh=MzRlODBiNWFlZA==

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ flixoye.com ನ್ನು ಫಾಲೋ ಮಾಡಿ.

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com