ಟೆಕ್ಕಿಗಳೇ ಸೇರಿ ಮಾಡ್ತಿರೋ ಸಿನಿಮಾ ‘ರತ್ನಮಂಜರಿ’

Published on

612 Views
Advertisement

ಟೆಕ್ಕಿಗಳೇ ಸೇರಿ ಮಾಡ್ತಿರೋ ಟೆಕ್ನಿಕಲಿ ಅದ್ದೂರಿಯಾಗಿರೋ ಸಿನಿಮಾ ರತ್ನಮಂಜರಿ. ಪ್ರಸಿದ್ಧ್​​ ಆಕ್ಷನ್​ ಕಟ್​ ಹೇಳ್ತಿರೋ ರತ್ನಮಂಜರಿ ಪಕ್ಕಾ ಕ್ರೈಂ ಥ್ರಿಲ್ಲರ್​ ಸಿನಿಮಾ. ಚಿತ್ರದ ಪೋಸ್ಟರ್​​ ಹಾಗೂ ಟೀಸರ್​ನ ನೋಡಿದಾಗ್ಲೆ ಸಿನಿಮಾದ ಬಗ್ಗೆ ಒಂದು ಕುತೂಹಲ ಕ್ರಿಯೇಟ್​ ಮಾಡ್ತಿದೆ. ಎನ್​​​ಆರ್​ಐ ಗಳಾದ ನಟರಾಜ್​ ಹಳೇಬೀಡು ಹಾಗೂ ಸಂದೀಪ್​ ಕುಮಾರ್​​​ ನಿರ್ಮಾಣ ಮಾಡ್ತಿರೋ ರತ್ನಮಂಜರಿ ಸಿನಿಮಾ ಇದೇ ಜೂನ್​​ನಿಂದ ಶೂಟಿಂಗ್​ ಶುರುವಾಗಲಿದೆ. ಸಿನಿಮಾದ ಶೇ.70 ಭಾಗ ಅಮೇರಿಕಾದಲ್ಲಿ ಶೂಟ್​ ಆಗಲಿದ್ದು, ಉಳಿದ ಭಾಗದ ಸಿನಿಮಾ ಮಡಿಕೇರಿಯಲ್ಲಿ ಶೂಟ್​ ಆಗಲಿದೆ. 2007-08ರಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ ರತ್ನಮಂಜರಿ. ನೈಜ ಘಟನೆಯ ಎಳೆಯನ್ನಿಟ್ಟುಕೊಂಡು ಅದಕ್ಕೆ ಕಮರ್ಶಿಯಲ್​​​​​​​​​​​​ ಟಚ್​ ಕೊಟ್ಟು ಕಥೆಯೊಂದನ್ನ ಹೆಣೆದಿದ್ದಾರೆ ನಿರ್ದೇಶಕ ಪ್ರಸಿದ್ಧ್​​​ ಹಾಗು ನಿರ್ಮಾಪಕ ನಟರಾಜ್​.

ಸಿನಿಮಾದಲ್ಲಿ ನಾಗತಿಹಳ್ಳಿ ಚಂದ್ರಶೇಖರ್​ ಗರಡಿಯಲ್ಲಿ ತಯರಾಗಿರೋ ರಾಜ್​ ಚರಣ್​ ಹಾಗೂ ಅಖಿಲಾ ಪ್ರಕಾಶ್​ ಲೀಡ್​​ ರೋಲ್​ನಲ್ಲಿ ಮಿಂಚಿದ್ದಾರೆ, ಇವ್ರ ಜೊತೆಗೆ ಇನ್ನೂ ಇಬ್ಬರು ನಾಯಕಿಯರು ಈ ಸಿನಿಮಾದ ಲೀಡ್​ನಲ್ಲಿ ಇರಲಿದ್ದು, ಇಬ್ಬರು ಸ್ಟಾರ್​ ಹೀರೋಯಿನ್​​ಗಳನ್ನ ಕರೆತರೋ ಪ್ಲಾನ್​ ಇದೆ. ಸಿನಿಮಾಕ್ಕೆ ಹೊಸ ಸಂಗೀತ ನಿರ್ದೇಶಕ ಹರ್ಷವರ್ಧನ್​ ರಾಜ್​​​ ಮ್ಯೂಸಿಕ್​ ಕಂಪೋಸ್​ ಮಾಡ್ತಿದ್ದಾರೆ. ಪ್ರೀತಂ ತೆಗ್ಗಿನ ಮನೆ ಕ್ಯಾಮರಾ ಕೈ ಚಳಕ ತೋರಲಿದ್ದಾರೆ. ರತ್ನಮಂಜರಿಯ ಎಲ್ಲ ಹಾಡುಗಳನ್ನ ಕೆ.ಕಲ್ಯಾಣ್​ ಬರೆದಿದ್ದಾರೆ. ಹಾಡುಗಳ ಕಂಪೋಸಿಂಗ್​ ಕೂಡ ಕಂಪ್ಲೀಟ್​ ಆಗಿದೆ. ಸುಮಾರು 2 ತಿಂಗಳುಗಳ ಕಾಲ ಸಿನಿಮಾದ ಚಿತ್ರೀಕರಣ ನಡೆಯಲಿದ್ದು, ವರ್ಷಾಂತ್ಯಕ್ಕೆ ರತ್ನಮಂಜರಿ ತೆರೆಗೆ ಬರಲಿದೆ. ಸಿನಿಮಾ ಶೂಟಿಂಗ್​​ ಆರಂಭಕ್ಕೂ ಮುನ್ನ ಟೀಸರ್​ ಒಂದನ್ನ ರಿಲೀಸ್​ ಮಾಡಲಾಗಿದ್ದು, ಈ ಟೀಸರ್ರೇ ಈಗ ಎಲ್ಲರ ಗಮನ ಸೆಳೀತಾ ಇದೆ.

Advertisement

More Buzz

Buzz 6 hours ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 6 hours ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 6 hours ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 8 hours ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 8 hours ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 8 hours ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 days ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 days ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 days ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Trailers 2 days ago

Patriot ಕನ್ನಡ ಟ್ರೇಲರ್: Mammootty-Mohanlal ಡಬಲ್ ಧಮಾಕಾ ZEE5 ನಲ್ಲಿ!

Short Films 2 days ago

ಅನುಪಮ ಕನ್ನಡ ಕಿರುಚಿತ್ರ: ಸಸ್ಪೆನ್ಸ್ ಭರಿತ ಪೂರ್ಣ ಸರಣಿ ಈಗ ಲಭ್ಯ!

Short Films 2 days ago

ಗದಗ ಜವಾರಿ ಮಂದಿ ಕಾಮಿಡಿ: ಹಳ್ಳಿ ಹೆಂಗಸರ ಜಗಳ ವೈರಲ್! | Flixoye

Copyright ©2026 . All Rights Reserved. privacy | terms Whatsapp: 9538193653 Email: hello@flixoye.com