flixOye
Buzz

ಅಲ್ಲು ಅರ್ಜುನ್ ಗೆ‌ ನಾಯಕಿಯಾದ ರಶ್ಮಿಕಾ…!!!

ರಶ್ಮಿಕಾ ಮಂದಣ್ಣ ‘ಕಿರಿಕ್ ಪಾರ್ಟಿ’ ಸಿನಿಮಾದ ನಂತರ ಟಾಲಿವುಡ್ ನಲ್ಲಿ‌ ಹೆಸರು ಮಾಡಿದರು. ಕನ್ನಡದಲ್ಲಿ ರಕ್ಷಿತ್, ಪುನೀತ್, ಗಣೇಶ್ , ದರ್ಶನ್ ಜೊತೆ ನಟಿಸಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡ ರಶ್ಮಿಕಾ ಮಂದಣ್ಣ ತೆಲುಗು ಇಂಡಸ್ಟ್ರಿಯಲ್ಲೂ ದೊಡ್ಡ ಸ್ಟಾರ್ ನಟರ ಜೊತೆ‌ ನಟಿಸುವ ಅವಕಾಶ ವನ್ನು ಗಿಟ್ಟಿಸಿಕೊಂಡಿದ್ದಾರೆ. ಟಾಲಿವುಡ್ ನಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟ‌ ರಶ್ಮಿಕಾಗೆ‌ ಈಗ‌ ಅಲ್ಲು ಅರ್ಜುನ್ ‌ಗೆ ನಾಯಕಿಯಾಗಿ‌ ಕಾಣಿಸಿಕೊಳ್ಳಲಿದ್ದಾರೆ. ಸುಕುಮಾರ್ ನಿರ್ದೇಶನದ, ಅಲ್ಲು ಅರ್ಜುನ್ ನಾಯಕನಾಗಿ‌ ನಟಿಸಲಿರುವ ಚಿತ್ರದಲ್ಲಿ‌ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಈ ವಿಷಯವನ್ನು ರಶ್ಮಿಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಟ್ವಿಟ್ಟರ್ ನಲ್ಲಿ ಅಲ್ಲು ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸುತ್ತ, ಅಲ್ಲಿ‌ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ ರಶ್ಮಿಕಾ.

ಸಂಬಂಧಿತ · Related