ಚೊಚ್ಚಲ ತಮಿಳು ಚಿತ್ರದಲ್ಲಿ ಕಾರ್ತಿ ಗೆ ಜೊತೆಯಾದ ರಶ್ಮಿಕಾ‌ ಮಂದಣ್ಣ…

Published on

393 Views
Advertisement

ಕನ್ನಡ ಮತ್ತು ತೆಲುಗು ಚಿತ್ರೋದ್ಯಮಗಳಲ್ಲಿ ತಮ್ಮದೇ ಆದ ಸ್ಥಾನ ಪಡೆದಿರುವ ನಟಿ ರಶ್ಮಿಕಾ ಮಂದಣ್ಣ. ರಶ್ಮಿಕಾ ಶೀಘ್ರದಲ್ಲೇ ತಮಿಳು ಚಿತ್ರ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ. ತಮ್ಮ ಚೊಚ್ಚಲ ತಮಿಳು ಚಿತ್ರದ ಶೂಟಿಂಗ್ ಮುಗಿಸಿರುವ ವಿಷಯವನ್ನು ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. “ಸುಲ್ತಾನ್” ಎಂಬ ಹೆಸರಿನ ಈ ಚಿತ್ರದಲ್ಲಿ ಕಾರ್ತಿ‌ಗೆ‌ ಜೊತೆಯಾಗಿರು ವುದನ್ನು ರಶ್ಮಿಕಾ ಹೇಳಿಕೊಂಡಿದ್ದಾರೆ. ಕಳೆದ ವರ್ಷವೇ ಚಿತ್ರದ ಶೂಟಿಂಗ್ ಪ್ರಾರಂಭಿಸಿದ್ದರು. ಅದರೆ ಕೊರೋನಾದಿಂದ ಸಿನಿಮಾದ ಚಿತ್ರೀಕರಣವೂ ವಿಳಂಬವಾಗಿತ್ತು. ಈಗ ರಶ್ಮಿಕಾ ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ರಶ್ಮಿಕಾರವರು “ಇದು ನನ್ನ ಮೊದಲ ತಮಿಳು ಚಿತ್ರವಾಗಿದ್ದು, ನಾನು ಕೆಲಸ ಮಾಡಿದ ಚಿತ್ರತಂಡವೂ ಚೆನ್ನಾಗಿತ್ತು.

Advertisement

ಎಲ್ಲರೂ ಒಂದೇ ಫ್ಯಾಮಿಲಿಯಂತೆ ಪ್ರೀತಿಯಿಂದ ಇದ್ದೇವು. ‘ಸುಲ್ತಾನ್’ ದಲ್ಲಿ ಉತ್ತಮವಾಗಿ ಅಭಿನಯ ಮಾಡಿದ್ದೇನೆ ಎಂದು ನಾನು ಭಾವಿಸುತ್ತೇನೆ .. ಜೈಸುಲ್ತಾನ್” ಎಂದು‌ ಹೇಳಿಕೊಂಡಿದ್ದಾರೆ. ಇದರ ಮಧ್ಯೆ ಕನ್ನಡದಲ್ಲಿ, ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ. ಕೊರೋನಾದಿಂದ ಚಿತ್ರದ ಚಿತ್ರೀಕರಣ ಮತ್ತು ಬಿಡುಗಡೆಯನ್ನು ವಿಳಂಬ ಮಾಡಿದ್ದರಿಂದ ಚಿತ್ರವು ಪೂರ್ಣಗೊಳ್ಳುವ ಕೊನೆಯ ಹಂತದಲ್ಲಿದೆ. ಧ್ರುವ ಮತ್ತು ರಶ್ಮಿಕಾರವರ ಈ ಚಿತ್ರದ ‘ಕರಬು…’ ಎಂಬ ಹಾಡು ದೊಡ್ಡ ಹಿಟ್ ಆಗಿದ್ದು, ಈಗಲೂ ಸದ್ದು ಮಾಡುತ್ತಿದೆ.

ಕನ್ನಡದಲ್ಲಿ ಮುಂದಿನ ಚಿತ್ರಕ್ಕೆ ಸಹಿ ಹಾಕದ ರಶ್ಮಿಕಾ ತೆಲುಗಿನಲ್ಲಿ ಹಲವಾರು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತಮಿಳು ಭಾಷೆಯ ಚಿತ್ರಕ್ಕಾಗಿ ಮಾತುಕತೆ ನಡೆಸುತ್ತಿರುವ ಬಗ್ಗೆ ವರದಿಗಳು ಬಂದಿದ್ದವು ಆದರೆ ಇತ್ತೀಚೆಗೆ ಅದರ ಬಗ್ಗೆ ಏನೂ ಮಾತನಾಡದ ರಶ್ಮಿಕಾ, ಹಿಂದಿ ಚಿತ್ರರಂಗದಲ್ಲೂ‌ ಅಭಿನಯಿಸುತ್ತಿದ್ದಾರೆ ಎಂಬ‌ ವರದಿಗಳು‌ ಬಂದಿದ್ದವು‌ ಅದರೆ‌ ಅದೆಲ್ಲಾ ಸುಳ್ಳು ಎಂದು‌ ಹೇಳಿದ್ದಾರೆ. ಅಭಿನಯಿಸುವ ಅವಕಾಶ ಬಂದರೆ ಅಭಿನಯಿಸುತ್ತೇನೆ. ಅದಕೋಸ್ಕರ ಕಾಯುತ್ತಿದ್ದೇನೆ‌ ಎಂದು‌ ಹೇಳಿಕೊಂಡಿದ್ದಾರೆ. ಅವರು ಶೀಘ್ರದಲ್ಲೇ ಹಿಂದಿ ಚಿತ್ರಕ್ಕೆ ಸಹಿ ಹಾಕುತ್ತಾರೆಯೇ…?

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com