ರೈತನ ಬದುಕು ಜೊತೆಗೆ ನವಿರಾದ ಪ್ರೇಮಕಥೆಯ ‘ರಣಹೇಡಿ’

Published on

483 Views
Advertisement

ಈ ಹಿಂದೆ ‘ಡೇಸ್ ಆಫ್ ಬೋರಾಫುರ’ , ‘ತಾರಕಾಸುರ’ ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವವಿರುವ ಮನು.ಕೆ ಶೆಟ್ಟಿಹಳ್ಳಿ ಯವರು ‘ರಣಹೇಡಿ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ. ನಿರ್ದೇಶನದ ಜೊತೆಗೆ ಕಥೆ-ಚಿತ್ರಕಥೆ, ಸಾಹಿತಿವನ್ನು ಮಾಡಿದ್ದಾರೆ. ‘ಪ್ರಯಾಣಿಕರ ಗಮನಕ್ಕೆ’ ಚಿತ್ರ ನಿರ್ಮಾಣ ಮಾಡಿದ ನಿರ್ಮಾಪಕ ಸುರೇಶ್ ರವರು ತಮ್ಮ ಸೃಷ್ಟಿ ಎಂಟರ್ ಪ್ರೈಸಸ್ ಮೂಲಕ ‘ರಣಹೇಡಿ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

‘ರಣಹೇಡಿ’ ಇದು ರೈತನ ಬದುಕು-ಬವಣೆಗಳನ್ನು ಕಟ್ಟಿಕೊಂಡಿರುವ ಚಿತ್ರ. ‘ರಣಹೇಡಿ’ ಟೈಟಲ್ ಗೂ ರೈತನಿಗೂ ಏನು ಸಂಬಂಧ ಎಂದು ಯೋಚನೆಗಳು ಬರುವುದು ಸಹಜ ಅದರೆ ಚಿತ್ರದ ಕಥೆ ಹೇಳುವಂತೆ ಚಿತ್ರದ ನಾಯಕ ರೈತ ರಣಹೇಡಿಯಲ್ಲ. ಅವನು‌ ನಿಜವಾದ ಯೋಧ ಎನ್ನುವ ಸಂದೇಶವನ್ನು ಸಾರುವಂತಹ‌ ಚಿತ್ರ ರಣಹೇಡಿ. ‘ರಣಹೇಡಿ’ ಶೀರ್ಷಿಕೆಯ ಅಡಿಬರಹದಲ್ಲಿ ಬಲರಾಮನ ಕಡೆ ನೋಡಿ ಎನ್ನುವ ಈ ಚಿತ್ರದಲ್ಲಿ ರೈತನ ಬದುಕು ಅದರ ಜೊತೆ ರಗಡ್ ಲವ್ ಸ್ಟೋರಿ, ನವಿರಾದ ಸಂಸಾರದ ಬಾಂಧವ್ಯ ವನ್ನು ಹೊಂದಿದೆ. ರಣಹೇಡಿ ನವೆಂಬರ್ 29ರಂದು ತೆರೆಗೆ ಬರಲಿದೆ.

Advertisement

Advertisement

ಪೋಷಕ ಪಾತ್ರದ ಮೂಲಕ ಸಾಕಷ್ಟು ಸಿನಿಮಾಗಳಲ್ಲಿ‌ ಕಾಣಿಸಿಕೊಂಡಿದ್ದ ಮಂಡ್ಯದ ಬಸುಕುಮಾರ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕರ್ಣಕುಮಾರ್ ಎಂದು ಹೆಸರು ಬದಲಾಯಿಸಿಕೊಂಡಿರುವ ಬಸುಕುಮಾರ್ ನಾಯಕನಾಗಿ ತೆರೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
‘ಬಡ್ಡಿ ಮಗನ್ ಲೈಫ್’, ‘ರವಿ ಹಿಸ್ಟರಿ’ ಚಿತ್ರದಲ್ಲಿ ನಟಿಸಿದ್ದ ಐಶ್ವರ್ಯ ಈ‌ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಬಳ್ಳಾರಿಯಿಂದ ಮಂಡ್ಯಕ್ಕೆ ಕಬ್ಬು ಕಡಿಯಲು ಬಂದ ಹಳ್ಳಿ‌ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ವಿ.ಮನೋಹರ್ ಚಿತ್ರಕ್ಕೆ ಸಂಗೀತ ನೀಡಿದ್ದು, ಕುಮಾರ್ ಗೌಡ ಛಾಯಾಗ್ರಹಣ ಮಾಡಿದ್ದು, ನಾಗೇಂದ್ರ ಅರಸ್ ಸಂಕಲನ ಮಾಡಿದ್ದಾರೆ. ಜಾನಪದ ಗಾಯಕ ಮಳವಳ್ಳಿಯ ನಾಗೇಂದ್ರ, ರಘಪಾಂಡೆ, ಸತೀಶ್, ಅಚ್ಯುತ್ಕುಮಾರ್, ಆಶಾಲತಾ, ಬೇಬಿ ಚೈತನ್ಯ ತಾರಾಗಣದಲ್ಲಿದ್ದಾರೆ.

Advertisement

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com