ಮೆಷಿನ್‌ಕಾಡ್ ಫಿಲ್ಮ್ಸ್ ಬ್ಯಾನರ್‌ನ ಅಡಿ ನಿರ್ಮಾಣವಾದ ‘ರಕ್ತ ಗುಲಾಬಿ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. 2 ಗಂಟೆ 8 ನಿಮಿಷ ಅವಧಿಯ ಯಾವುದೇ ಕಟ್ ಇಲ್ಲದ ಚಿತ್ರ ಇದಾಗಿದ್ದು, ಥ್ರಿಲ್ಲರ್ ಕಥೆಯನ್ನು ಹೊಂದಿದೆ ಎನ್ನುತ್ತಾರೆ ನಿರ್ದೇಶಕ ರಾಬಿ. ಈಗಾಗಲೇ ಕನ್ನಡದಲ್ಲಿ ‘ದಕ್ಷ’ ಮತ್ತು ‘ಬಿಂಬ’ ಎಂಬ ಒನ್ ಟೇಕ್ ಸಿನಿಮಾಗಳು ಬಂದಿವೆ. ಈಗ ನಿರ್ದೇಶಕ ರಾಜೇಶ್ ಬಿ ಅಲಿಯಾಸ್ ರಾಬಿ ‘ರಕ್ತಗುಲಾಬಿ’ ಸಿನಿಮಾ ಮಾಡಿದ್ದಾರೆ.
Raktha Gulabi

ಈ ಸಿನಿಮಾದಲ್ಲಿ ಬ್ಯಾಂಕ್ ರಾಬರಿ, ಚೇಸಿಂಗ್, ಬಾಂಬ್ ಬ್ಲಾಸ್ಟ್ ಎಲ್ಲವೂ ಚಿತ್ರದಲ್ಲಿ ಇರಲಿದೆಯಂತೆ. ಸಮಾಜದಲ್ಲಿ ಕಾನೂನುಬದ್ಧ ನಾಗಿ ಬಾಳುತ್ತಿದ್ದ ವ್ಯಕ್ತಿ ನ್ಯಾಯಕ್ಕಾಗಿ ಹೇಗೆ ಬದಲಾಗಿ, ಅವನು ಆ ಪ್ರಪಂಚದಲ್ಲಿ ಹೇಗೆ ಬದುಕುತ್ತಾನೆ. ಮತ್ತೆ ಸಾಮಾನ್ಯ ಬದುಕಿಗೆ ಮರಳುತ್ತಾನೆ ಇಲ್ಲವೋ? ಎಂಬುದೇ ಕಥೆಯ ತಿರುಳು ಎಂದಿದ್ದಾರೆ ನಿರ್ದೇಶಕರು. ಕಡಿಮೆ ಬಜೆಟ್ ಈ ಸಿನಿಮಾ ತಯಾರಾಗಿದ್ದು, ಚಿತ್ರದ ಚಿತ್ರೀಕರಣವೂ 24ಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆದಿದೆ.









