flixOye
Buzz

ರಶ್ಮಿಕಾ ಮಂದಣ್ಣಗೆ ಶುಭಹಾರೈಸಿದ ರಕ್ಷಿತ್ ಶೆಟ್ಟಿ

ಕಿರಿಕ್ ಪಾರ್ಟಿ ಸಿನಿಮಾದ ‘ಬೆಳಗೆದ್ದು ಯಾರ ಮುಖವಾ ನಾನು ನೋಡಲಿ…’ ಹಾಡು 10 ಕೋಟಿ‌ ಜನ ವೀಕ್ಷಣೆ ಮಾಡಿದ್ದಾರೆ. ರಶ್ಮಿಕಾ ಮಂದಣ್ಣಗೆ ಹಿಟ್‌ ಕೊಟ್ಟ‌ ಅವರ ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’. ಈ‌ ಸಿನಿಮಾದ‌ ನಂತರ ಪ್ರೀತಿಯಲ್ಲಿ ಬಿದ್ದಿದ್ದ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಅವರ ಎಂಗೇಜ್ಮೆಂಟ್ ಕುಟುಂಬದ‌ ಸಮ್ಮುಖದಲ್ಲಿ ನಡೆಯಿತು.


ನಂತರ‌ ಇಬ್ಬರ‌ ಸಂಬಂಧ ಕಾರಣಾಂತರಗಳಿಂದ ಮುರಿದು‌‌ ಬಿತ್ತು. ಇಬ್ಬರ ಸಂಬಂಧ ಮುರಿದು ಬಿದ್ದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ‌ಒಬ್ಬರನ್ನೊಬ್ಬರು ಆನ್‌ ಫಾಲೋ ಮಾಡಿಕೊಂಡರು. ಅದರೆ‌ ಈಗ ‘ಕಿರಿಕ್ ಪಾರ್ಟಿ’ ಸಿನಿಮಾದ ಹಾಡು 10ಕೋಟಿ ವೀಕ್ಷಣೆ ಪಡೆದಿರುವ ಖುಷಿಯನ್ನು ರಶ್ಮಿಕಾ‌ ಮಂದಣ್ಣ ಟ್ವೀಟ್ ಮಾಡಿ ರಕ್ಷಿತ್‌ ಶೆಟ್ಟಿಯನ್ನು‌ ಟ್ಯಾಗ್‌ ಮಾಡಿ ಅಚ್ಚರಿ ಮೂಡಿಸಿದ್ದಾರೆ. ರಕ್ಷಿತ್‌ ಶೆಟ್ಟಿ ‘ರಶ್ಮಿಕಾ‌ ನೀನು ಬೆಳೆಯಬೇಕು. ನಿನ್ನ ‌ಕನಸುಗಳೆಲ್ಲ ನಿಜವಾಗಲಿ’ ಎಂದು ರಕ್ಷಿತ್‌ ‌ಶೆಟ್ಟಿ ರಶ್ಮಿಕಾ ಮಂದಣ್ಣಗೆ ಹಾರೈಸಿದ್ದಾರೆ. ಈ‌ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಈಗ ಸದ್ದು ಮಾಡುತ್ತಿದೆ.

ಸಂಬಂಧಿತ · Related