flixOye
Buzz

ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ ಚಿತ್ರತಂಡದಿಂದ “ರೂಪಾಂತರ”

ಕನ್ನಡ ಚಿತ್ರರಂಗದ ನಾಯಕ ಹಾಗೂ ನಿರ್ದೇಶಕ ರಾಜ್‌ ಬಿ ಶೆಟ್ಟಿ ಅಭಿನಯದ ರೂಪಾಂತರ ಸಿನಿಮಾ ತೆರೆಯಮೇಲೆ ಬರಲು ಸಜ್ಜಾಗಿದೆ. ರಾಜ್‌ ಬಿ ಶೆಟ್ಟಿಯವರು ಸ್ಯಾಂಡಲ್ ವುಡ್ ಗೆ ಹಾಗೂ ಪ್ರೇಕ್ಷಕರಿಗೆ ಪರಿಚಯವಾಗಿದ್ದೇ ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ. ಇದೀಗ ರಾಜ್‌ ಬಿ ಶೆಟ್ಟಿಯವರು ಒಂದು ಮೊಟ್ಟೆಯ ಕಥೆ ಹಾಗೂ ಗರುಡ ಗಮನ ವೃಷಭ ವಾಹನ ಚಿತ್ರತಂಡದೊಂದಿಗೆ ರೂಪಾಂತರ ಸಿನಿಮಾವನ್ನು ಮಾಡಿದ್ದಾರೆ.

ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಅನಾವರಣ ಮಾಡಿತ್ತು ಹಾಗೂ ಪೋಸ್ಟರ್‌ ಪ್ರೇಕ್ಷಕರ ಗಮನವನ್ನು ಸೆಳೆದಿತ್ತು.

ರೂಪಾಂತರ ಚಿತ್ರಕ್ಕೆ ರಾಜ್‌ ಬಿ ಶೆಟ್ಟಿ ರವರು ಡೈಲಾಗ್‌ ಜೊತೆ ಚಿತ್ರಕಥೆಯಲ್ಲೂ ಕೈಜೋಡಿಸಿದ್ದಾರೆ. ಈ ಚಿತ್ರವನ್ನು ಮಿಥಿಲೇಶ್‌ ಎಡವಲತ್‌ ರವರು ನಿರ್ದೇಶನ ಮಾಡಿದ್ದಾರೆ ಹಾಗೂ ಚಿತ್ರಕ್ಕೆ ಮಿಧುನ್‌ ಮುಕುಂದನ್‌ ರವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಭುವನೇಶ್‌ ಮಣಿವಣ್ಣನ್‌ ಅವರು ಸಂಕಲನ ಮಾಡಿದ್ದು, ಚಿತ್ರಕ್ಕೆ ಪ್ರವೀಣ್‌ ಮತ್ತು ಅರ್ಷದ್‌ ನಾಕ್ಕೋತ್‌ ಅವರು ನಿರ್ಮಾಣ ವಿನ್ಯಾಸವಿದೆ.

‘ಒಂದು ಮೊಟ್ಟೆಯ ಕಥೆ’ ಸಿನಿಮಾದ ನಿರ್ಮಾಪಕರಾದ ಸುಹಾನ್‌ ಪ್ರಸಾದ್‌ ರವರು ರೂಪಾಂತರ ಚಿತ್ರವನ್ನು ನಿರ್ಮಿಸಿದ್ದಾರೆ, ಪ್ರವೀಣ್‌ ಶ್ರೀಯಾನ್ ಛಾಯಗ್ರಹಣವನ್ನು ಮಾಡಿದ್ದು, ಮಿಧುನ್‌ ಮುಕುಂದನ್‌ ರವರು ಸಂಗೀತದ ಜೊತೆ ಒಂದು ಮೊಟ್ಟೆಯ ಕಥೆ ಚಿತ್ರದ ನಂತರ ಮತ್ತೇ ಎಲ್ಲರೂ ಒಂದು ಸಿನಿಮಾದಲ್ಲಿ ಒಟ್ಟಿಗೇ ಕೆಲಸ ಮಾಡಿದ್ದಾರೆ.

ರೂಪಾಂತರ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ರವರ ಜೊತೆ ಸೋಮಶೇಖರ್‌ ಬೋಲೇಗಾಂವ್, ಹನುಮಕ್ಕ ಲೇಖಾ ನಾಯ್ಡು, ಭರತ್‌ ಜಿ ಬಿ, ಅಂಜನ್‌ ಭಾರಧ್ವಾಜ್‌ ಹಾಗೂ ಮುಂತಾದವರು ನಟಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಕಿತ್ತಾಳೆ ಹಾಡು ಪ್ರೇಕ್ಷಕರಿಗೆ ಮೋಡಿ ಮಾಡಿದೆ. ಈ ಹಾಡಲ್ಲಿ ಚೈತ್ರ ಜೆ ಆಚಾರ್‌ ನಟಿಸಿದ್ದು, ಕಿತ್ತಾಳೆ ತೋಟದ ಹುಡುಗಿಯ ಕಥೆ ಹೇಳಿದ್ದಾರೆ. ಇನ್ನೂ ರೂಪಾಂತರ ಚಿತ್ರ ಜುಲೈ 26 ರಂದು ಬಿಡುಗಡೆಯಾಗಲಿದ್ದು, ಚಿತ್ರವನ್ನು ಕೆಲವೇ ಕೆಲವು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ, ಏಕೆಂದರೆ ಚಿತ್ರ ಅತಿ ಹೆಚ್ಚು ಮಲ್ಟಿಪ್ಲೆಕ್ಸ್‌ ನಲ್ಲಿ ಬಿಡುಗಡೆಯಾಗಲಿದೆ.

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.

ಸಂಬಂಧಿತ · Related