flixOye
Buzz

ಪ್ರಜ್ವಲ್ ದೇವರಾಜ್ ಎದುರು ಖಳನಟನಾಗಿ ರಘು ಮುಖರ್ಜಿ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸುತ್ತಿರುವ
ಇನ್ಸ್ ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಪ್ರಜ್ವಲ್ ಎದುರು ಘರ್ಜಿಸುವ ಖಳನಟನಾಗಿ ರಘು ಮುಖರ್ಜಿ ಅವರು ಕಾಣಿಸಿಕೊಳ್ಳಲಿದ್ದಾರೆ.
ಶ್ರೀ ನರಸಿಂಹ ಅವರು ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ
ಪ್ರಜ್ವಲ್ ಅವರು ಪೋಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು
ಇವರ ಎದುರು ಖಳನಾಗಿ ರಘು ಅವರು ನಟಿಸಲಿದ್ದಾರೆ. ಇದುವರೆಗೂ ರಘು ಅವರು ನಾಯಕನಾಗಿ ಕಾಣಿಸಿಕೊಂಡಿದ್ದರು ಇದೇ ಮೊಲದ ಬಾರಿಗೆ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಹ ವಿಶೇಷಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಇನ್ಸ್ ಸ್ಪೆಕ್ಟರ್ ವಿಕ್ರಂ ಚಿತ್ರದಲ್ಲಿ ಖಳನಟನಾದರೂ ಈ ಪಾತ್ರ ಖಳನಟನಂತೆ ಇರುವುದುದಿಲ್ಲ ಇದೊಂದು ವಿಭಿನ್ನವಾದ ಪಾತ್ರ ಎಂಬುದಾಗಿ ರಘು ಮುಖರ್ಜಿ ಅವರು ಹೇಳುತ್ತಿದ್ದಾರೆ. ಈ ಹಿಂದೆ ಪುಷ್ಪಕವಿಮಾನ ಚಿತ್ರವನ್ನು ನಿರ್ಮಾಣ ಮಾಡಿದ್ದ ವಿಖ್ಯಾತ್ ಪ್ರೊಡಕ್ಷನ್ ಹೌಸ್ ನವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ‌.‌ ಟಗರು ಖ್ಯಾತಿಯ ಚರಣ್ ರಾಜ್ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಸಂಬಂಧಿತ · Related