ವಾರ್ಡ್ ನಂ . 11ರಲ್ಲಿ ರಾಘಣ್ಣ ರಾಜಕಾರಣಿ

Published on

798 Views
Advertisement

ಪೊಲಿಟಿಕಲ್ ಥ್ರಿಲ್ಲರ್ ಕಥಾನಕ ಹೊಂದಿರುವ ವಾರ್ಡ್ ನಂ.11 ಚಿತ್ರಕ್ಕೆ ಯುವ ನಿರ್ದೇಶಕ ಶ್ರೀಕಾಂತ್ ಆಕ್ಷನ್ ಕಟ್ ಹೇಳಿದ್ದಾರೆ. ಬ್ಲೂಬೇಲ್ ಎಂಟರ್ಟೈನ್‍ಮೆಂಟ್ಸ್ ಮೂಲಕ ಸಂದೀಪ್ ಶಿವಮೊಗ್ಗ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಎ. ಗುರುರಾಜ್ ಹಾಗೂ ಹೇಮಂತ್ ಕುಮಾರ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಈಗಾಗಲೇ ಶೇ.80ರಷ್ಟು ಭಾಗದ ಚಿತ್ರೀಕರಣ ಮುಗಿದಿದ್ದು, ಒಂದು ಹಾಡು, ಫೈಟ್ ಹಾಗೂ ಕ್ಲೈಮ್ಯಾಕ್ಸ್ ಭಾಗದ ಶೂಟ್ ಮಾಡಿದರೆ ಶೂಟಿಂಗ್ ಮುಕ್ತಾಯವಾಗುತ್ತದೆ. ಇದೇ ಮೊದಲಬಾರಿಗೆ ನಟ ರಾಘವೇಂದ್ರ ರಾಜ್‍ಕುಮಾರ್ ಒಬ್ಬ ರಾಜಕಾರಣಿಯಾಗಿ ಕಾಣಿಸಿಕೊಂಡಿದ್ದು, ರಾಘಣ್ಣ, ಸುಮನ್ ನಗರಕರ್ ಹಾಗೂ ಕಬೀರ್ ಸಿಂಗ್ ಈ ಮೂರು ಪಾತ್ರಗಳ ಸುತ್ತ ಸುತ್ತುವ ಕಥೆಯೇ ಈ ಚಿತ್ರದ ಪ್ರಮುಖ ಅಂಶ.

ಚಿತ್ರದ ಬಹುತೇಕ ಕಥೆ ನಡೆಯುವುದು ಒಂದು ವಾರ್ಡ್‍ನಲ್ಲಿ. ಹಾಗಾಗಿ ಚಿತ್ರಕ್ಕೆ ವಾರ್ಡ್ ನಂ.11 ಎಂಬ ಶೀರ್ಷಿಕೆ ಇಡಲಾಗಿದೆ. ಆ ಏರಿಯಾದ ನಾಲ್ವರು ಸ್ನೇಹಿತರಲ್ಲಿ ಒಬ್ಬನ ಕೊಲೆಯಾಗುತ್ತದೆ. ಅದರ ಹಿಂದಿನ ಸತ್ಯವನ್ನು ಪತ್ತೆಹಚ್ಚಲು ಹೋದಾಗ ಒಂದಷ್ಟು ರಹಸ್ಯಗಳು ಬಹಿರಂಗ ಆಗುತ್ತವೆ. ಅದೇನೆನ್ನುವುದೇ ಚಿತ್ರದ ಎಳೆ. ಚಿತ್ರದಲ್ಲಿ ರಾಜಕಾರಣ, ಲವ್, ಫ್ರೆಂಡ್‍ಷಿಪ್ ಹೀಗೆ ಎಲ್ಲಾ ರೀತಿಯ ಕಮರ್ಷಿಯಲ್ ಅಂಶಗಳಿವೆ. ಚಿತ್ರದಲ್ಲಿ ರಾಜಕಾರಣಿಗಳ ಸಂಘರ್ಷದ ಜೊತೆಗೆ ಒಂದು ನವಿರಾದ ಪ್ರೇಮಕಥೆಯನ್ನೂ ನಿರ್ದೇಶಕರು ಹೇಳಿದ್ದಾರೆ. ಬೆಂಗಳೂರು ಸುತ್ತಮುತ್ತ 45 ದಿನಗಳ ಕಾಲ ಈ ಚಿತ್ರದ ಶೂಟಿಂಗ್ ಮಾಡಲಾಗಿದ್ದು, ಇನ್ನು ಹತ್ತು ದಿನಗಳ ಚಿತ್ರೀಕರಣವಷ್ಟೇ ಬಾಕಿಯಿದೆ. ಕಳೆದ ವರ್ಷವೇ ಆರಂಭವಾಗಿದ್ದ ಈ ಚಿತ್ರಕ್ಕೆ ಲಾಕ್‍ಡೌನ್‍ಗೂ ಮುನ್ನ ಶೇ.30ರಷ್ಟು ಶೂಟಿಂಗ್ ನಡೆಸಲಾಗಿತ್ತು.

Advertisement

ಹೊಸ ಹುಡುಗ ರಕ್ಷಿ ಈ ಚಿತ್ರದಲ್ಲಿ ನಾಯಕನಾಗಿದ್ದು, ನಾಯಕಿ ಮೇಘಶ್ರೀ ಕಾಲೇಜು ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದ ಪಾತ್ರಗಳಲ್ಲಿ ಅಚ್ಯುತ್‍ಕುಮಾರ್, ಪ್ರಮೋದ್ ಶೆಟ್ಟಿ, ಉಗ್ರಮ್ ಮಂಜು, ಗೋವಿಂದೇಗೌಡ(ಕಾಮಿಡಿ ಕಿಲಾಡಿಗಳು), ಪ್ರಕಾಶ್ ತುಮಿನಾಡು, ಸುಧಾ ಬೆಳವಾಡಿ ಇನ್ನು ಮುಂತಾದವರು ನಟಿಸಿದ್ದಾರೆ. ಇನ್ನು ರಾಕೇಶ್ ಸಿ.ತಿಲಕ್ ಅವರ ಛಾಯಾಗ್ರಹಣ, ವಿಕ್ರಂಮೋರ್ (ಕೆಜಿಎಫ್) ಹಾಗೂ ಅರ್ಜುನ್ (ಮದಗಜ) ಅವರ ಸಾಹಸ ನಿರ್ದೇಶನ, ಹೈಟ್ ಮಂಜು ಅವರ ನೃತ್ಯ, ಸುರೇಂದ್ರನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಜಯಂತ್ ಕಾಯ್ಕಿಣಿ, ವಿ.ನಾಗೇಂದ್ರಪ್ರಸಾದ್ ಅವರ ಸಾಹಿತ್ಯದ ಹಾಡುಗಳಿಗೆ ಅರ್ಮಾನ್ ಮಲಿಕ್, ಅನುರಾಧಾ ಭಟ್, ಮೆಹಬೂಬ್‍ಸಾಬ್, ಶಿವಂ(ವಿಕ್ರಂ ವೇದಂ) ದನಿಯಾಗಿದ್ದಾರೆ.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com