1 ಕೋಟಿ ಸಂಭಾವನೆ ಪಡೆದ ರಾಧಿಕಾ ಕುಮಾರಸ್ವಾಮಿ…!!!

Published on

527 Views
Advertisement

‘ದಮಯಂತಿ’ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿಯವರು ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇದೊಂದು ‌ಹೈ ಬಜೆಟ್ ಸಿನಿಮಾವಾಗಿದು, ರಾಧಿಕಾರವರು ಈ ಸಿನಿಮಾಕ್ಕೆ ಬರೋಬ್ಬರಿ 1 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಎಲ್ಲ ಕಡೆ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಚಿತ್ರ ತಂಡ 40 ಲಕ್ಷ ಸಂಭಾವನೆ ಕೊಟ್ಟಿದ್ದು, ಚಿತ್ರದ ಚಿತ್ರೀಕರಣವೂ 80ರಷ್ಟು ಮುಗಿದಿದೆ. ಈಗ ಕೊನೆಯ ಹಂತದ ಚಿತ್ರೀಕರಣ ಕ್ಕೆ ಚಿತ್ರತಂಡ ಸಿದ್ಧತೆ ನಡೆಸಿದ್ದು, ಹೊಸ ವರುಷದಲ್ಲಿ ಚಿತ್ರವನ್ನು ತೆರೆಗೆ ತರುವ ಚಿಂತನೆ ಚಿತ್ರತಂಡದ್ದು. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ತೆಲುಗಿನ ‘ಅರುಂಧತಿ’, ‘ಭಾಗಮತಿ’ ಚಿತ್ರಗಳಂತೆ ಕನ್ನಡದಲ್ಲಿ ‘ಧಮಯಂತಿ’ ಚಿತ್ರವನ್ನು ತೆರೆಗೆ ತರಲು ತಯಾರಿ ನಡೆಸುತ್ತಿದ್ದಾರೆ.

ಮಾಹಿತಿಯ ಪ್ರಕಾರ ಇದು ಎಂಭತ್ತರ ದಶಕದ ಕತೆ ಹಾಗೂ ಇವತ್ತಿನ ವಾಸ್ತವೂ ಕತೆಯೊಳಗೆ ಮಿಶ್ರಣವಾಗಿದೆ ಎನ್ನುತ್ತಾರೆ ನವರಸನ್ . ನವರಸನ್ ನಿರ್ಮಾಣದ ಜತೆಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರ ‘ದಮಯಂತಿ’ ಈ ಚಿತ್ರಕ್ಕೆ ಮೊದಲು ಆಯ್ಕೆ ಮಾಡಿದು ಅನುಷ್ಕಾ ಶೆಟ್ಟಿ ಯನ್ನು , ಪಾತ್ರಕ್ಕೆ ಅನುಷ್ಕಾ ಶೆಟ್ಡಿ ಸಣ್ಣಗಾಗಬೇಕಿತ್ತು, ಡಿಸೆಂಬರ್ ನಲ್ಲಿ ಚಿತ್ರೀಕರಣ ಮುಗಿಸಬೇಕಿತ್ತು. ಈ ಬೇಡಿಕೆಯನ್ನು ಒಪ್ಪದೆ ಮತ್ತು 2 ವರ್ಷ ಕಾಲ್ ಶೀಟ್ ಇಲ್ಲವೆಂದು ಹೇಳಿದಾಗ, ನೇರವಾಗಿ ಚಿತ್ರತಂಡ ಬಂದು ಭೇಟಿ ಮಾಡಿದು ರಾಧಿಕಾ ಕುಮಾರಸ್ವಾಮಿ ಅವರನ್ನು. ಮೊದಲು ರಾಧಿಕಾ ಕುಮಾರಸ್ವಾಮಿಯವರು ಒಪ್ಪಿಗೆ ಕೊಟ್ಟಿಲ್ಲ, ಚಿತ್ರತಂಡ ಈ ಪಾತ್ರಕ್ಕೆ ನೀವೇ ಬೇಕು ಎಂದು ಒತ್ತಾಯ ಮಾಡಿದಾಗ, ರಾಧಿಕಾ ಕುಮಾರಸ್ವಾಮಿಯವರು ತಮ್ಮ ಸಂಭಾವನೆಯನ್ನು ಜಾಸ್ತಿ ಮಾಡಿದ್ದಾರೆ ಎಂಬ ಮಾತು ಮೂಲಗಳಿಂದ ಕೇಳಿ ಬರುತ್ತಿದ್ದೆ. ಒಂದು ವೇಳೆ ರಾಧಿಕಾ ಕುಮಾರಸ್ವಾಮಿ 1 ಕೋಟಿ ಸಂಭಾವನೆ ಪಡೆದಿರುವುದೇ ನಿಜವಾದ್ರೆ ಅದು ದಾಖಲೆಯಾಗುತ್ತದೆ. ಸ್ಯಾಂಡಲ್ ವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ರಮ್ಯ. ನಂತರ ಸುದ್ಧಿ ಮಾಡಿದವರು ರಶ್ಮಿಕಾ ಮಂದಣ್ಣ. ಈಗ ರಾಧಿಕ ಕುಮಾರಸ್ವಾಮಿಯವರು ಅತೀ ಹೆಚ್ಚು ಸಂಭಾವನೆ ಪಡೆದಿರುವ ಸುದ್ದಿ ಕೇಳಿ ಬರುತ್ತಿದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com