flixOye
Buzz

‘ಪುಟ್ಟಗೌರಿ ಮದುವೆ’ ಯಿಂದ ಹೊರ ಬಂದ ಗೌರಿ

‘ಪುಟ್ಟಗೌರಿ ಮದುವೆ’ ಸೀರಿಯಲ್ ಮೂಲಕ ಮನೆಮಾತಾಗಿರುವ ‘ಪುಟ್ಟಗೌರಿ’ ರಂಜನಿ ರಾಘವನ್ ಆ ಸೀರಿಯಲ್ ನಿಂದ ನೇಮು- ಫೇಮು ಪಡೆದಿದ್ದರು. ಈಗ ಸಡನ್ನಾಗಿ ಪುಟ್ಟಗೌರಿ ಮದುವೆ ಸೀರಿಯಲ್ ನಿಂದ ಹೊರಬರುವ ಮೂಲಕ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ. ಕೆಲವು‌ ಮೂಲಗಳ ಪ್ರಕಾರ ‘ಪುಟ್ಟಗೌರಿ ಮದುವೆ’ ಸೀರಿಯಲ್ ನಲ್ಲಿ ಗೌರಿ ಪಾತ್ರಕ್ಕಿಂತ ಮಂಗಳ ಗೌರಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ, ರಂಜನಿ ಸೀರಿಯಲ್ ನಿಂದ ಹೊರ‌ ಬಂದಿದ್ದಾರೆ‌ ಎಂಬ ಸುದ್ದಿ ಹಬ್ಬಿದೆ. ಇನ್ನೊಂದು‌ ಕಡೆ ನೋಡಿದ್ರೆ ರಂಜನಿ ರಾಘವನ್‌ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಸಿನಿಮಾದಲ್ಲಿ ಅವಕಾಶಗಳಿರುವುದರಿಂದ ಸೀರಿಯಲ್ ನಿಂದ ಹೊರ ಬಂದಿದ್ದಾರೆ ಎಂಬ ಸುದ್ದಿಯೂ ಇದೆ. ಈ‌ ಹಿಂದೆ ‘ಪುಟ್ಟಗೌರಿ ಮದುವೆ’ ಸೀರಿಯಲ್ ನಲ್ಲಿ ಅಭಿನಯಿಸುತ್ತಿರುವಾಗಲೇ ‘ರಾಜಹಂಸ’ ಸಿನಿಮಾದಲ್ಲಿ ನಟಿಸಿದ್ದಾರೆ. ಅದ್ರೆ ಇಲ್ಲಿ..,

‘ನಮಸ್ತೆ, ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಇಲ್ಲಿಂದ ನಾನು ‘ ಪುಟ್ಟಗೌರಿ ಮದುವೆ’ ಸೀರಿಯಲ್ ನೊಂದಿಗೆ ನನ್ನ ಸಂಬಂಧವನ್ನು ಅಂತ್ಯಗೊಳಿಸುತ್ತಿದ್ದೇನೆ ಎಂದು ತಿಳಿಸಲು ನಾನು‌ ಬಯಸುತ್ತೇನೆ. ಈ‌ ಸ್ಮರಣೀಯ ಪ್ರಯಾಣದಲ್ಲಿ ನನ್ನನ್ನು ಬೆಂಬಲಿಸಿದವರಿಗೆಲ್ಲರಿಗೂ ತುಂಬು ಧನ್ಯವಾದಗಳು. ಅಭಿನಂದನೆಗಳು.’
*ರಂಜನಿ ರಾಘವನ್*
ಹೇಳಿಕೊಂಡಿದ್ದಾರೆ.

ಸಂಬಂಧಿತ · Related