
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣರವರ ಪುಷ್ಪ-1 ಚಿತ್ರ ಬಿಡುಗಡೆಗೊಂಡು ಬಹಳ ಯಶಸ್ಸು ಕಂಡಿತ್ತು ಹಾಗೂ ಪುಷ್ಪ-1 ಚಿತ್ರದ ಹಾಡುಗಳೂ ಬಹಳ ಯಶಸ್ಸು ಕಂಡಿದ್ದು, ಚಿತ್ರದ ಹಾಡುಗಳಿಗೆ ಅಭಿಮಾನಿಗಳು ಫಿದಾ ಆಗಿದ್ದರು.

ಇದೀಗ ಪುಷ್ಪ-2 ಚಿತ್ರದ ಹಾಡುಗಳನ್ನು ಚಿತ್ರತಂಡ ಬಿಡುಗಡೆ ಮಾಡುತ್ತಿದೆ. ಪುಷ್ಪ-2 ಚಿತ್ರದ ಪುಷ್ಪ ಪುಷ್ಪರಾಜ್ ಹಾಡು ಬಿಡುಗಡೆಯಾಗಿದ್ದು, ಈಗಾಗಲೇ ಬಹಳ ಯಶಸ್ಸನ್ನು ಕಂಡಿದೆ. ಅಭಿಮಾನಿಗಳು ಹಾಗೂ ನಟ, ನಟಿಯರು ಹಾಡಿಗೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ ಹಾಗೂ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿತ್ತು.

ಪುಷ್ಪ-2 ಚಿತ್ರದ ಎರಡನೇ ಹಾಡು- ಜೋಡು ಹಾಡನ್ನು ಮೇ 29, ಬೆಳಗ್ಗೆ 11:07 ಗಂಟೆಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಹಾಡಿನ ಬಿಡುಗಡೆ ಬಗ್ಗೆ ಚಿತ್ರತಂಡ ವಿಶಿಷ್ಟವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ರಶ್ಮಿಕಾ ಮಂದಣ್ಣರವರು ಜೋಡಿ ಹಾಡಿನ ಎರಡು ಸಾಲುಗಳನ್ನು ಹಾಡುವುದರ ಮೂಲಕ ಬಿಡುಗಡೆ ಮಾಡುವ ವಿಷಯವನ್ನು ಹಂಚಿಕೊಂಡಿದ್ದಾರೆ.
View this post on Instagram
Advertisement
ಪುಷ್ಪರಾಜ್ ಮತ್ತು ಶ್ರೀವಲ್ಲಿ ಯ ಜೋಡಿ ಹಾಡು 6 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ತೆಲುಗು, ಹಿಂದಿ, ತೆಮಿಳು, ಕನ್ನಡ, ಮಲಯಾಳಂ, ಮತ್ತು ಬೆಂಗಾಲಿ ಭಾಷೆಯಲ್ಲಿ ಹಾಡು ಬಿಡುಗಡೆಯಾಗಲಿದೆ. ಶ್ರೇಷ್ಠ ಸಿಂಗರ್ ಶ್ರೇಯಾ ಘೋಷಾಲ್ 6 ಭಾಷೆಗಳಲ್ಲಿಯೂ ಜೋಡಿ ಹಾಡನ್ನು ಹಾಡಿದ್ದಾರೆ.

ಪುಷ್ಪ-2 ಹಾಡನ್ನು ಚಿತ್ರತಂಡ 29ರಂದು ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಗ್ ಆಗಿದೆ. ಭಾರತದ ನೆಚ್ಚಿನ ಜೋಡಿಯ ಹಾಡು ಕಮಾಲ್ ಮಾಡಲಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಜೋಡಿ ಹಾಡಿಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಹಾಡು ಸೂಪರ್ ಹಿಟ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ http://flixoye.com ನ್ನು ಫಾಲೋ ಮಾಡಿ.








