ಮಾಸಾಂತ್ಯಕ್ಕೆ “ಪುಣ್ಯಾತ್ ಗಿತ್ತೀರು” ಆಗಮಿಸಲಿದ್ದಾರೆ

Published on

332 Views

ಪಾಸಿಬಲ್ ಮತ್ತು ಒನ್ ಟೈಂ ಚಿತ್ರಗಳನ್ನು ನಿರ್ದೇಶನ ಮಾಡಿದ್ದ
ನಿರ್ದೇಶಕ ರಾಜ್.ಬಿ.ಎನ್ ಅವರು ಕಥೆ ಚಿತ್ರಕಥೆ ಬರೆದು ನಿರ್ದೇಶನ
ಮಾಡಿರುವ “ಪುಣ್ಯಾತ್ ಗಿತ್ತೀರು” ಚಿತ್ರವು ಇದೇ ತಿಂಗಳ ಅಂತ್ಯಕ್ಕೆ ತೆರೆಗೆ
ಬರುತ್ತಿದೆ‌.‌ ಮಹಿಳಾ ಪ್ರಧಾನ ಪಾತ್ರಗಳೇ ಇರುವ “ಪುಣ್ಯಾತ್ ಗಿತ್ತೀರು”
ಚಿತ್ರದಲ್ಲಿ ಮಮತಾ ರಾವುತ್,ಐಶ್ವರ್ಯಾ,ದಿವ್ಯಶ್ರೀ(ಕಾಮಿಡಿ ಕಿಲಾಡಿಗಳು), ಸಂಭ್ರಮಶ್ರೀ ಅವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸತ್ಯ ಮೂವಿ ಬ್ಯಾನರ್ ಅಡಿಯಲ್ಲಿ ಸತ್ಯನಾರಾಯಣ ಮನ್ನೆ ಅವರು
ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವಿ.ನಾಗೇಂದ್ರ ಪ್ರಸಾದ್ ಅವರು
ಬರೆದಿರುವ ಈ ಚಿತ್ರದ ಹಾಡುಗಳಿಗೆ ರಾಮಾನುಜಂ ಅವರು ಸಂಗೀತ
ಸಂಯೋಜನೆ ಮಾಡಿದ್ದಾರೆ. ಶರತ್ ಕುಮಾರ್ ಜಿ. ಅವರ ಛಾಯಗ್ರಹಣವಿದೆ.
ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಈ ಚಿತ್ರದ ಟ್ರೈಲರ್ ನೋಡಿ

Copyright ©2024 . All Rights Reserved. privacy | terms Whatsapp: 9538193653 Email: hello@flixoye.com