ಪೈರೆಸಿ ತಡೆಗೆ ಪುನೀತ್‌ರಾಜ್‌ಕುಮಾರ್ ಚಾಲನೆ

Published on

336 Views
Advertisement

ಹೊಸ ತಂತ್ರಜ್ಘಾನದಲ್ಲಿ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉಳಿಯೋದು ಒಂದು ವಾರ ಮಾತ್ರವೆಂದು ಪುನೀತ್‌ರಾಜ್‌ಕುಮಾರ್ ಅಭಿಪ್ರಾಯ ಪಟ್ಟರು. ಕಾಂಟ್ರಫೈನ್ ಸಂಸ್ಥೆಯ ದುರ್ಗಾಪ್ರಸಾದ್ ಮತ್ತು ರಾಹುಲ್‌ರೆಡ್ಡಿ ತಂಡದವರು ಸೇರಿಕೊಂಡು ಪೈರೆಸಿ ತಡೆಗಟ್ಟುವ ನೂತನ ತಂತ್ರಜ್ಘಾನ ’ಪಂಡೆ’ಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಪೈರೆಸಿ ಎನ್ನುವುದು ವಿಡಿಯೋ ಬಂದಾಗಿನಿಂದಲೂ ಇದೆ. ಈಗ ಎಲ್ಲರು ಸಿನಿಮಾ ಮೇಕರ‍್ಸ್ ಆಗಿದ್ದಾರೆ. ತಮ್ಮ ಜೇಬಿನಲ್ಲಿ ರೆಕಾರ್ಡ್ ಮಾಡಿಕೊಂಡು ಅದನ್ನು ಹೊರಗೆ ಬಿಟ್ಟಾಗ ಅದು ಪೈರೆಸಿ ಆಗುತ್ತದೆ. ಟಾಕೀಸ್ ನಂತರ ಚಿತ್ರಗಳು ಓಟಿಟಿ, ಚಾನಲ್‌ಗಳಿಗೆ ಹೋಗುತ್ತದೆ. ಯುವಕರು ಕಂಡುಹಿಡಿದಿರುವ ಸಾಫ್ಟ್‌ವೇರ್ ಎಲ್ಲರಿಗೂ ಉಪಯೋಗವಾಗಲಿ. ಚಿತ್ರೀಕರಣ ಶುರುವಾಗಿರುವುದು ಸಂತಸದ ವಿಷಯ. ಚಿತ್ರಮಂದಿರಗಳಲ್ಲಿ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಆದಷ್ಟು ಬೇಗನೆ ಎಲ್ಲಾ ಚಿತ್ರಗಳು ಹೊರಗೆ ಬರುವಂತಾಗಲಿ. ಭಾರತೀಯ ಎಲ್ಲಾ ಸಿನಿಮಾಗಳು ಶುರುವಾಗಲಿ ಎಂದು ಪವರ್ ಸ್ಟಾರ್ ಹೇಳಿದರು.

Advertisement

ದೇಶದ ಬೆನ್ನಲುಬು ರೈತ ಅಂತಾರೆ. ಆತನ ಉಳಿವಿಗಾಗಿ ನಾವೆಲ್ಲಾ ಪ್ರಯತ್ನ ಮಾಡುತ್ತೇವೆ. ಅದರಂತೆ ಚಿತ್ರರಂಗದ ಅನ್ನದಾತ ನಿರ್ಮಾಪಕ. ಅವರ ಉಳುವಿಗಾಗಿ ಈ ತರಹದ ತಂತ್ರಜ್ಘಾನವು ಅವಶ್ಯಕವಾಗಿದೆ. ನಿಜಕ್ಕೂ ಚಿತ್ರರಂಗದ ಕಲಾವಿದೆ, ಕನ್ನಡತಿಯಾಗಿ ತುಂಬಾ ಖುಷಿಯಾಗುತ್ತದೆ. ನೀವುಗಳು ಕನಸುಗಳನ್ನು ಕಟ್ಟಿಕೊಂಡು ಕಷ್ಟಪಟ್ಟು ಪೈರೆಸಿ ನಿರ್ಮೂಲನ ಮಾಡಲು ಪಣ ತೊಟ್ಟಿದ್ದೀರಾ. ಭಾರತದಲ್ಲಿ ಎಲ್ಲೂ ಸಾದ್ಯವಾಗದ ಸಾಧನೆಯನ್ನು ಮಾಡಿದ್ದೀರಾ. ಅದರಲ್ಲೂ ನಮ್ಮ ಕನ್ನಡಿಗರು ಸಿದ್ದಪಡಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಚಿತ್ರರಂಗ ಗೆಲ್ಗೆ, ಚಿತ್ರಗಳು ಗೆಲ್ಗೆ, ಕನ್ನಡ ಚಿತ್ರರಂಗ ಬಾಳ್ಗೆ ಎಂದು ನಟಿ ಮತ್ತು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮದ ಅಧ್ಯಕ್ಷೆ ಶೃತಿ ಮಾತಿಗೆ ವಿರಾಮ ಹಾಕಿದರು.

Advertisement

’ಪಂಡೆ’ ಇದೊಂದು ಪೈರೆಸಿ ತಡೆಯುವ ತಂತ್ರಜ್ಘಾನವಾಗಿದೆ. ಇದನ್ನು ಚಿತ್ರಮಂದಿರದಲ್ಲಿ ಅಳವಡಿಸಿದಲ್ಲಿ, ಪ್ರೇಕ್ಷಕ ಮೊಬೈಲ್‌ನಿಂದ ಸೆರೆಹಿಡಿಯುವ ದೃಶ್ಯಗಳು ರೆಕಾರ್ಡ್ ಆಗುತ್ತದೆ. ಆದರೆ ಧ್ವನಿಯು ಆಗುವುದಿಲ್ಲ. ಆತ ಯಾವ ಸೀಟ್‌ದಲ್ಲಿ ಕುಳಿತುಕೊಂಡಿದ್ದಾನೆ ಎಂಬುದನ್ನು ತಿಳಿಸುತ್ತದೆ. ಪ್ರದರ್ಶನ ನಡೆಯುವಾಗ ಕಾನೂನುಬಾಹಿರ ಚಟುವಟಿಕೆ ನಡೆದರೆ ತಕ್ಷಣವೇ ಮಾಲೀಕ ಮತ್ತು ಆಯಾ ಪೋಲೀಸ್ ಠಾಣೆಗೆ ಸಂಸ್ಥೆಯು ಮಾಹಿತಿ ನೀಡುತ್ತದೆ. ವಿಡಿಯೋ ತೆಗೆಯಲು ಆಗದಿರುವ ಸಾಫ್ಟ್‌ವೇರ್ ಮುಂದಿನ ತಿಂಗಳುಗಳಲ್ಲಿ ಹೊರಗೆ ಬರುತ್ತದೆಂದು ಸಂಸ್ಥೆಯ ಪ್ರತಿನಿಧಿಗಳು ಒಂದಷ್ಟು ವಿಷಯಗಳನ್ನು ಹಂಚಿಕೊಂಡರು.

Advertisement

ರಾಜೇಂದ್ರಸಿಂಗ್‌ಬಾಬು, ದಿನಕರತೂಗದೀಪ ಮತ್ತು ಶೃತಿ ಮೊಬೈಲ್‌ದಲ್ಲಿ ರೆಕಾರ್ಡ್ ಮಾಡಿ ನೋಡಿದಾಗ ಕೇವಲ ವಿಡಿಯೋ ಕಂಡುಬಂದು, ಆಡಿಯೋದಲ್ಲಿ ಕರ್ಕಶ ಧ್ವನಿ ಕೇಳಿಸಿತು. ಇದರಿಂದ ’ಪೆಂಡಿ’ ತಂತ್ರಜ್ಘಾನ ಪ್ರಯೋಗವು ಯಶಸ್ವಿ ಅಂತ ಖಾತರಿ ಆಯಿತು. ಸಮಾರಂಭದಲ್ಲಿ ನಿರ್ಮಾಪಕ ಸಂಘದ ಅಧ್ಯಕ್ಷ ಡಿ.ಕೆ.ರಾಮಕೃಷ್ಣ, ಕೆ.ಸಿ.ಎನ್.ಚಂದ್ರಶೇಖರ್, ಬಾ.ಮ.ಹರೀಶ್, ಆರ್.ಎಸ್.ಗೌಡ, ಎನ್.ಎಂ.ಸುರೇಶ್, ನವರಸನ್ ಮುಂತಾದವರ ಉಪಸ್ತಿತಿ ಇತ್ತು.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com