ಪ್ರಥ್ವಿ ಅಂಬರ್ ನಟನೆಯ ಚೌಕಿದಾರ್ʼಗೆ ಮುಹೂರ್ತ!!!

Published on

548 Views
Advertisement

ದಿಯಾ ಚಿತ್ರದ ಖ್ಯಾತಿಯ ಪೃಥ್ವಿ ಅಂಬರ್‌ ಹಾಗೂ ಧನ್ಯಾ ರಾಮ್‌ಕುಮಾರ್‌ರವರು ನಟಿಸುತ್ತಿರುವ ಮುಂದಿನ ಚಿತ್ರ ಚೌಕಿದಾರ್ ಸಿನಿಮಾ ಸೆಟ್ಟೇರಿದೆ. ಶ್ರೀಮುರಳಿ ಯವರ ಹಿಟ್‌ ಚಿತ್ರ ರಥಾವರಕ್ಕೆ ಆಕ್ಷನ್‌ ಕಟ್ ಹೇಳಿದ್ದ ಚಂದ್ರಶೇಖರ್‌ ಬಂಡಿಯಪ್ಪ ಈಗ ಚೌಕಿದಾರ್‌ ಚಿತ್ರಕ್ಕೂ ಆಕ್ಷನ್ ಕಟ್‌ ಹೇಳುತ್ತಿದ್ದಾರೆ.

Advertisement

ಪೃಥ್ವಿ ಅಂಬರ್‌ ಹಾಗೂ ಧನ್ಯ ರಾಮ್‌ಕುಮಾರ್‌ ಇದೇ ಮೊದಲನೇ ಬಾರಿಗೆ ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಹಾಗೂ ಈ ಚಿತ್ರದಲ್ಲಿ ಡೈಲಾಗ್‌ ಕಿಂಗ್‌ ಸಾಯಿಕುಮಾರ್‌ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Advertisement

 

ಚೌಕಿದಾರ್‌ ಸಿನಿಮಾದ ಮುಹೂರ್ತ ಇತ್ತೀಚೆಗೆ ಬಂಡಿ ಮಹಾಕಾಳಿ ದೇವಸ್ಥಾನದಲ್ಲಿ ನಡೆಯಿತು ಹಾಗೂ ದೇವಸ್ಥಾನದಲ್ಲಿ ಇಡೀ ಚಿತ್ರತಂಡ ಸೇರಿತ್ತು. ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ಈ ಚಿತ್ರವನ್ನು ಡಾ. ಕಲ್ಲಹಳ್ಳಿ ಚಂದ್ರಶೇಖರ್‌ ನಿರ್ಮಾಣ ಮಾಡುತ್ತಿದ್ದಾರೆ.

Advertisement

ಈ ಚಿತ್ರಕ್ಕೆ ಸಚಿನ್‌ ಬಸ್ರೂರ್‌ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ.ನಾಗೇಂದ್ರ ಪ್ರಸಾದ್‌ ಹಾಗೂ ಪ್ರಮೋದ್‌ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಚೌಕಿದಾರ್‌ ಚಿತ್ರವು ಬಹುಭಾಷೆಗಳಲ್ಲಿ ಮೂಡಿಬರುತ್ತಿದ್ದು, ಪ್ರಥ್ವಿ ಅಂಬರ್‌ರವರು ಚಿತ್ರಗಳಲ್ಲಿ ಲವರ್‌ ಬಾಯ್ ಲುಕ್‌ನಲ್ಲಿ ಮತ್ತು ಮಾಸ್ ಹಾಗೂ ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ಸೆಟ್ಟೇರಿದ ಖುಷಿಯಲ್ಲಿ ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ, ಚಿತ್ರದ ನಟ ಪೃಥ್ವಿ ಅಂಬರ್‌, ನಟಿ ಧನ್ಯಾ ರಾಮ್‌ಕುಮಾರ್ ಹಾಗೂ ಡೈಲಾಗ್‌ ಕಿಂಗ್‌ ಸಾಯಿಕುಮಾರ್‌ರವರು ಖುಷಿಯನ್ನು ಹಂಚಿಕೊಂಡಿದ್ದಾರೆ. ಪೃಥ್ವಿ ಹಾಗೂ ಧನ್ಯಾ ಜೋಡಿಯನ್ನು ತೆರೆಯ ಮೇಲೆ ಮೊದಲನೇ ಬಾರಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

 

ಚಲನಚಿತ್ರಗಳ ಕುರಿತ ಹೆಚ್ಚಿನ ಮಾಹಿತಿಗಾಗಿ https://flixoye.com ನ್ನು ಫಾಲೋ ಮಾಡಿ.

More Buzz

Buzz 2 hours ago

ಅಣ್ಣ ಫ್ರಂ ಮೆಕ್ಸಿಕೋ ಟೀಸರ್: ಡಾಲಿ ಧನಂಜಯ್‌ರಿಂದ ವಿಶ್ವವಿಖ್ಯಾತ ಅಸ್ತ್ರ!

Buzz 23 hours ago

KD ಟ್ರೇಲರ್ ಬಿಡುಗಡೆ: ಧ್ರುವ ಸರ್ಜಾ, ಸಂಜಯ್ ದತ್ ರಬ್ಬರ್ smashing!

Buzz 4 days ago

ರುದ್ರತಾಂಡವ: ‘Ruthless’ ಕನ್ನಡ ಕಿರುಚಿತ್ರ | ಧನು ಹರ್ಷರ ವೀರೋಚಿತ ನಟನೆ!

Buzz 4 days ago

ದೇವ್ ದಾಸ್ ನಾ ಲೀಲಾ: ತುಳು ಚಿತ್ರದ ಟ್ರೇಲರ್ ಬಿಡುಗಡೆ!

Buzz 5 days ago

ಮಿಸ್ಟರ್ ಎಕ್ಸ್: 90ರ ದಶಕದ ಮರೆಯಲಾಗದ ಥ್ರಿಲ್ಲರ್!

Buzz 5 days ago

Mr. X: Kannada Cinema’s New Enigma Unfolds!

Buzz 6 days ago

ಅಚ್ಯುತ ಅವತಾರಂ: ಮೂರನೇ ಲುಕ್ ಬಿಡುಗಡೆ, 2026ರ വിഷುಗೆ ಸ್ಯಾಂಡಲ್‌ವುಡ್‌ಗೆ ಲಗ್ಗೆ!

Buzz 7 days ago

ಸೀತಾರಾಮ್’ ಎರಡನೇ ಪ್ರಕರಣ: ಥ್ರಿಲ್ಲರ್ ಸಿನೆಮಾ ಈಗ OTTಯಲ್ಲಿ!

Buzz 7 days ago

Assi: ZEE5 Film Tackles Stark Reality with Urgent Voice

Buzz 7 days ago

ಕೆಂಡದ ಸೆರಗು: ನಾಳೆ ತೆರೆಗೆ, ಮನಸ್ಸಲ್ಲಿ ಉಳಿಯುವ ಕಥೆಯಿದು!

Buzz 7 days ago

Ustaad Bhagat Singh Hits Netflix: Kannada Fans Rejoice!

Buzz 7 days ago

Do Deewane Seher Mein: Netflix Date Set!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com