flixOye
Buzz

‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದ‌ ಮೂಲಕ ಗಾಯನ ಶುರು ಮಾಡಿದ ಪೃಥ್ವಿ ಅಂಬರ್

‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯಿಸುತ್ತಿರುವ ‌ದಿಯಾ‌ ಖ್ಯಾತಿಯ ಪೃಥ್ವಿ ಅಂಬರ್ ಈ‌ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಗಾಯಕರು‌ ಆಗಿದ್ದಾರೆ. ಹೌದು, ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾದ ಹಾಡೊಂದನ್ನು ಹಾಡಿರುವ ಪೃಥ್ವಿ ಅಂಬರ್ ” ಇದೇ ಮೊದಲ ಬಾರಿಗೆ ಸಿನಿಮಾಕ್ಕೆ‌ ಹಾಡಿದ್ದೇನೆ. ಈ ಮೂಲಕ‌ ನನ್ನ ಬಹುದಿನಗಳ‌ ಕನಸು ನನಸಾಗಿದೆ” ಎಂದರು. ರೆಕಾರ್ಡಿಂಗ್‌ ಮುಗಿಸಿರುವ ‘ಲೈಫ್ ಈಸ್ ಬ್ಯೂಟಿಫುಲ್’ ಚಿತ್ರವನ್ನು ಜಾಹೀರಾತು ಲೋಕದಲ್ಲಿ ಹೆಸರು‌ ಮಾಡಿರುವ ಮಲಯಾಳಂ ನಿರ್ದೇಶಕ ಅರುಣ್ ಕುಮಾರ್ ಮತ್ತು ಸಾಬು ಅಲೋಷಿಯಸ್ ಜೊತೆಯಾಗಿ ಈ‌ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಫ್ರೈಡೆ ಫಿಲ್ಮ್ಸ್‌ ಮತ್ತು ಸಿಲ್ವರ್ ಟ್ರೈನ್ ಇಂಟರ್ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು, ‘ಮಮ್ಮಿ’ ಮತ್ತು ‘ದೇವಕಿ’ ಸಿನಿಮಾ ನಿರ್ದೇಶಿಸಿದ ಲೋಹಿತ್ ಈ ಚಿತ್ರಕ್ಕೆ ಸಹ‌ ನಿರ್ಮಾಪಕರಾಗಿದ್ದಾರೆ. ಚಿತ್ರಕ್ಕೆ‌ ನೊಬಿನ್ ಪೌಲ್ ಸಂಗೀತ ನಿರ್ದೇಶನವಿದ್ದು, ಪೃಥ್ವಿ ಅಂಬರ್ ಜೊತೆಗೆ ಪ್ರಿಯಾಂಕಾ ಉಪೇಂದ್ರ, ಲಾಸ್ಯಾ ನಾಗರಾಜ್‌ ಅಭಿನಯಿಸಿದ್ದಾರೆ. ‘ಫ್ರೆಂಚ್‌ ಬಿರಿಯಾನಿ’ ಚಿತ್ರದಲ್ಲಿ ಮಸಲ್‌ ಮಣಿ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದ ನಟ ಮಹಾಂತೇಶ್‌ ‘ಲೈಫ್‌ ಈಸ್‌ ಬ್ಯೂಟಿಫುಲ್‌’ ಚಿತ್ರದಲ್ಲಿ ಒಂದು ಮುಖ್ಯ ಪಾತ್ರ ಮಾಡುತ್ತಿದ್ದಾರೆ.

ಸಂಬಂಧಿತ · Related