flixOye
Buzz

ಮದಗಜ ಸಿನಿಮಾದ ಫಸ್ಟ್ ಲುಕ್ ರಿಲೀಸ್ ‌ಮಾಡಲಿದ್ದಾರೆ ಪ್ರಶಾಂತ್ ನೀಲ್

ಡಿ.17 ನಟ ಶ್ರೀಮುರಳಿಯವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ನಟನೆಯ ‘ಮದಗಜ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಶ್ರೀಮುರಳಿ ಯವರು ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹಂಚಿಕೊಂಡಿದ್ದು, ‘ನನ್ನ ಗಾಡ್ ಫಾದರ್ ಪ್ರಶಾಂತ್ ನೀಲ್. ಅವರಿಂದ ನನ್ನ ‘ಮದಗಜ’ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಿಸಲು ತುಂಬಾ ಖುಷಿಯಾಗುತ್ತಿದೆ.

ಟೀಸರ್ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿಯಿವೆ. ಎಂದು ಶ್ರೀಮುರಳಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡುವ ಮೂಲಕ ಪ್ರಶಾಂತ್ ನೀಲ್ ಭಾವನಿಗೆ ಸಾಥ್ ಕೊಡುತ್ತಿದ್ದಾರೆನ್ನಬಹುದು. ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ‘ಮದಗಜ’ ಸಿನಿಮಾವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡಿದ್ದು, ಉಮಾಪತಿಯವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಳ್ಳುತ್ತಿದ್ದಾರೆ.

ಸಂಬಂಧಿತ · Related