ಪ್ರಾರ್ಥನಾ ಸಿನಿಮಾ ಆದರೆ ಕಿರುಚಿತ್ರ!

Published on

327 Views
Advertisement

ಕತೆಯಲ್ಲಿ ನಾಯಕ, ನಾಯಕಿ, ಪೋಷಕಪಾತ್ರಗಳು, ಹಾಡು, ಹಾಸ್ಯ, ಸಾಹಸ, ಸುಂದರ ತಾಣಗಳು ಇವೆಲ್ಲವು ಸೇರಿಕೊಂಡರೆ ಒಂದು ಸಿನಿಮಾ ಆಗುತ್ತದೆ ಎಂದು ಹೇಳುವುದುಂಟು. ಇದೆಲ್ಲಾವನ್ನು ಕೇವಲ ಹದಿನೈದು ನಿಮಿಷದಲ್ಲಿ ಹೇಳಬಹುದೆಂದು ‘ಪ್ರಾರ್ಥನ’ ಎನ್ನುವ ಕಿರುಚಿತ್ರದಲ್ಲಿ ತೋರಿಸುವ ಪ್ರಯುತ್ನ ಮಾಡಿದ್ದಾರೆ. ಶೀರ್ಷಿಕೆ ಹೆಸರಿನ ಮುಖ್ಯ ಪಾತ್ರಧಾರಿಗೆ ಪುಕ್ಕಲ ಪ್ರೇಮಿ ಇರುತ್ತಾನೆ. ಪ್ರೀತಿಸುವ ವಿಷಯವನ್ನು ಮನೆಯಲ್ಲಿ ಹೇಳಲು ಹೆದರುತ್ತಾನೆ. ಆಕೆ ಧೈರ್ಯ ಮಾಡಿ ಯಾರಿಗೂ ಹೇಳದೆ ದೂರದ ಊರಿಗೆ ಪ್ರಯಾಣ ಬೆಳಸಿ, ಆತನ ಅಪ್ಪನ ಬಳಿ ಎಲ್ಲವನ್ನು ತಿಳಿಸಿ ಮದುವೆ ಮಾಡಿಕೊಡಿ ಎಂದು ಕೇಳಿಕೊಳ್ಳುತ್ತಾಳೆ. ಈಕೆಯ ಮನೆಯಲ್ಲಿ ತಂಗಿಯು ಬೇರೆ ಜಾತಿಯವನನ್ನು ಮದುವೆ ಆದರೆ ಆಸ್ತಿ ಹೋಗುತ್ತದೆಂಬ ಅಣ್ಣನಿಗೆ ಚಿಂತೆ. ಮನೆಗೆ ಬಾರದಿರುವುದನ್ನು ನೋಡಿ ದೂರು ಕೊಡುತ್ತಾನೆ. ಮತ್ತೋಂದು ಕಡೆ ಅಪ್ಪನ ಬಳಿ ಹೋಗದಂತೆ ತಡೆಯಲು ಗೆಳತಿಯ ಜೊತೆ ಸೇರಿಕೊಂಡು ಉಪಾಯ ಮಾಡುತ್ತಾನೆ. ಇಷ್ಟರಲ್ಲೆ ಆಕೆ ನಿಗೂಡವಾಗಿ ಕೊಲೆಯಾಗುತ್ತಾಳೆ. ಪೋಲೀಸ್ ಅಧಿಕಾರಿ ತನಿಖೆ ನಡೆಸಿ ಹುಡುಗನ ಅಪ್ಪನ ಮೇಲೆ ಅನುಮಾನ ಪಡುತ್ತಾನೆ. ಪೇದೆಗಳು ಆಸ್ತಿ ಸಲುವಾಗಿ ಆಕೆಯ ಅಣ್ಣ ಕೊಲೆ ಮಾಡಿರಬಹುದೆಂದು ಹೇಳುತ್ತಾರೆ. ಅಧಿಕಾರಿಯು ಚರ್ಚ್‍ನಲ್ಲಿ ಪಾಪವನ್ನು ನಿವೇದನೆ ಮಾಡಿಕೊಳ್ಳುತ್ತಾನೆ. ಆದರೆ ಕೊಲೆ ಮಾಡಿದ್ದು ಯಾರು, ಕಾರಣವಾದರೂ ಏನು? ಎಂಬುದರ ಸೆಸ್ಪನ್ಸ್, ಥ್ರಿಲ್ಲರ್ ಚಿತ್ರವನ್ನು ಯು ಟ್ಯೂಬ್‍ನಲ್ಲಿ ನೋಡಿ ತಿಳಿಯಬಹುದು.

Advertisement

ಅಭಿಷೇಕ್‍ದಾಸ್ ನಾಯಕನಾಗಿ ಹೊಸ ಅನುಭವ. ಎರಡು ಚಿತ್ರಗಳಲ್ಲಿ ನಟಿಸಿರುವ ಅನುಷಾರೈ ನಾಯಕಿ. ಇವರೊಂದಿಗೆ ಗಿರೀಶ್‍ಜತ್ತಿ, ಯಮುನಾಶ್ರೀನಿಧಿ, ಸುನಿಲ್, ಅರಸಿಕೆರೆರಾಜು ತಾರಬಳಗದಲ್ಲಿ ಇದ್ದಾರೆ. ಕತೆ ಬರೆದು ನಿರ್ದೇಶನ, ನಿರ್ಮಾಣ ಮಾಡಿರುವುದು ಕೆ.ಎಲ್.ಪ್ರಭಾಕರ್. ಚಿತ್ರಕತೆ ಕಾರ್ತಿಕ್‍ಮೂನಿ, ಸಂಭಾಷಣೆ ಶ್ರೀನಿಧಿ.ಡಿ.ಎಸ್., ಸಂಕಲನ ಗಣಪತಿಭಟ್, ಛಾಯಗ್ರಹಣ ಸಂತೋಷ್‍ಖಾರ್ವಿ, ಸಂಗೀತ ಸುನಾದ್‍ಗೌತಂ ನಿರ್ವಹಿಸಿದ್ದಾರೆ. ಚಿಕ್ಕಮಗಳೂರು, ಬೆಂಗಳೂರು ಕಡೆಗಳಲ್ಲಿ ಏಳು ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಕಿರುಚಿತ್ರವು ಚೆನ್ನಾಗಿ ಮೂಡಿಬಂದಿರುವ ಕಾರಣ ಇದನ್ನೆ ವಿಸ್ತರಿಸಿಕೊಂಡು ಸಿನಿಮಾ ಮಾಡುವ ಬಗ್ಗೆ ನಿರ್ಮಾಪಕರು ಚಿಂತನೆ ನಡೆಸಿದ್ದಾರೆ. ಇತ್ತೀಚೆಗಷ್ಟೆ ಮಾದ್ಯಮದವರಿಗೆಂದು ವಿಶೇಷ ಪ್ರದರ್ಶನವನ್ನು ಏರ್ಪಾಟು ಮಾಡಲಾಗಿತ್ತು.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com