flixOye
Buzz

ಜೇಮ್ಸ್‌ ಚಿತ್ರೀಕರಣದಲ್ಲಿ‌ ಪಾಲ್ಗೊಂಡ ಪವರ್‌ ಸ್ಟಾರ್…

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ‌ ಕಮಲಾಪುರದ ಆರೆಂಜ್ ಕೌಂಟಿಯಲ್ಲಿ ‘ಜೇಮ್ಸ್’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು,‌ ನಿನ್ನೆ ಸಂಜೆ ಹೊತ್ತಿಗೆ ಪುನೀತ್ ರಾಜ್ ಕುಮಾರ್ ಕಮಲಾಪುರದ ಬಳಿಯ ಆರೇಂಜ್ ಕೌಂಟಿಗೆ ಆಗಮಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟಿಸುತ್ತಿರುವ ‘ಜೇಮ್ಸ್’ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಪುನೀತ್ ರಾಜ್ ಕುಮಾರ್, ಹಾಗೂ ಹಲವು ಕಲಾವಿದರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ‘ಜೇಮ್ಸ್’ ಚಿತ್ರೀಕರಣ ಹಿನ್ನೆಲೆ ಹತ್ತು ದಿನಗಳವರೆಗೆ ಹೊಸಪೇಟೆಯಲ್ಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಾಸ್ತವ್ಯ ಹೂಡಲಿದ್ದು, ಇನ್ನು ಪುನೀತ್ ರಾಜ್ ಆಗಮಿಸಿರುವ ಸುದ್ದಿ ತಿಳಿದ ಅಭಿಮಾನಿಗಳು ನೆಚ್ಚಿನ ನಟನಿಗೆ ಉಡುಗೊರೆ ನೀಡಿ ಸಂತಸ ಪಟ್ಟರು.

ಜೇಮ್ಸ್ ಚಿತ್ರದ ಚಿತ್ರೀಕರಣಕ್ಕಾಗಿ ಗಂಗಾವತಿಯಲ್ಲಿ ಭವ್ಯ ಸೆಟ್ ಹಾಕಲಾಗಿದ್ದು, ಅಲ್ಲಿ ತೆಲುಗು ನಟ ಶ್ರೀಕಾಂತ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೇಮ್ಸ್ ಸಿನಿಮಾದ ಮೂಲಕ ಇದೇ‌ ಮೊದಲ ಬಾರಿಗೆ‌ ಅನುಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಲಿದ್ದಾರೆ.

Advertisement

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೇಮ್ಸ್ ಗೆ ಪ್ರಿಯ ಆನಂದ್ ಆಯ್ಕೆಯಾಗಿದ್ದು ‘ರಾಜಕುಮಾರ’ ಸಿನಿಮಾದ ಈ ಜೋಡಿ ಮತ್ತೆ ಇಲ್ಲಿ ಒಂದಾಗಿದ್ದಾರೆ. ತೆಲುಗಿನ ಖ್ಯಾತ‌ ಫೈಟ್ ಮಾಸ್ಟರ್ ಗಳಾದ ರಾಮ್ – ಲಕ್ಷ್ಮಣ್ ‌ಜೇಮ್ಸ್‌ಗೆ‌ ಎಂಟ್ರಿಯಾಗಿದ್ದು, ಆಕ್ಷನ್‌ ದೃಶ್ಯಗಳನ್ನು ನಿರ್ದೇಶಿಸಲಿದ್ದಾರೆ.‌ ಪವರ್ ಸ್ಟಾರ್ ಜೊತೆ ರಾಮ್‌-ಲಕ್ಷ್ಮಣ್‌ ರವರು ನಿಂತಿರುವ‌ ಪೋಟೋ ಈಗಾಗಲೇ ಸಾಮಾಜಿಕ ‌ಜಾಲತಾಣದಲ್ಲಿ ವೈರಲ್ ಆಗಿದೆ. ಚೇತನ್ ಕುಮಾರ್ ನಿರ್ದೇಶನದ ಚಿತ್ರವನ್ನು ನಿರ್ಮಾಪಕ ಕಿಶೋರ್ ಪತ್ತಿಕೊಂಡ ನಿರ್ಮಿಸುತ್ತಿದ್ದಾರೆ. ಕಿಶೋರ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರ ಇದಾಗಿದ್ದು, ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ.

ಸಂಬಂಧಿತ · Related