‘ದಿಯಾ’ ಹೀರೋ ಪೃಥ್ವಿಗೆ ಪವರ್ ಸ್ಟಾರ್ ಕರೆ

Published on

250 Views

◆ ಯೋಗ ಮತ್ತು ಯೋಗ್ಯತೆ ಪರಸ್ಪರ ಕೂಡಿ ಬಂದಾಗ ಎಂಥಾ ಪವಾಡ ನಡೆಯುತ್ತದೆ ಎನ್ನುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ : ಇದು ‘ದಿಯಾ’ ಚಿತ್ರದ ಹೀರೋ ಪುನೀತನಾದ ಕಥೆ. ಇದಕ್ಕೆ ಯಾವ ಟ್ವಿಸ್ಟೂ ಇಲ್ಲ, ಎಲ್ಲವೂ ನೇರ, ದಿಟ್ಟ, ನಿರಂತರ!


ಇಷ್ಟಕ್ಕೂ ನಡೆದದ್ದು ಏನಪ್ಪಾ ಅಂದ್ರೆ : ಕೊರೊನಾ ಹಾವಳಿಯಿಂದ ತಪ್ಪಿಸಿಕೊಂಡು ತನ್ನ ಊರಾದ ಕಾಸರಗೋಡಿನ ಉಪ್ಪಳ ಸೇರಿಕೊಂಡಿದ್ದ ‘ದಿಯಾ’ ಚಿತ್ರದ ಹೀರೋ ಪೃಥ್ವಿ ಅಂಬಾರ್’ಗೆ ಅಚ್ಚರಿ ಕಾದಿತ್ತು. ಇದ್ದಕ್ಕಿದ್ದಂತೆಯೇ ನಿನ್ನೆ ಪುನೀತ್ ರಾಜಕುಮಾರ್ ಫೋನ್ ಮಾಡಿದ್ದರು! ನಂಬಲು ಸಾಧ್ಯವಿಲ್ಲ ಅಲ್ಲವೇ? ಆದರೆ ಇದು ನಿಜ. ಫೋನ್ ಮಾಡಿ ಪುನೀತ್ ಹೇಳಿದ್ದಾದರೂ ಏನನ್ನು? ಜಸ್ಟ್ ಹಿಯರ್ : ‘ನಾನು ಪುನೀತ್ ಮಾತಾಡ್ತಿದ್ದೀನಿ. ನೀವು ಅಮೋಘವಾಗಿ ನಟಿಸಿದ ‘ದಿಯಾ’ ಸಿನಿಮಾವನ್ನು ನೋಡಿದ ಮೇಲೆ ಖುದ್ದು ಮಾತಾಡದಿರುವುದು ಸಾಧ್ಯವಾಗಿಲ್ಲ. ಕಂಗ್ರಾಟ್ಸ್ ಹೇಳಲು ಕಾಲ್ ಮಾಡಿದ್ದು. ನೀವು ತುಂಬಾ ಅದ್ಭುತವಾಗಿ ನಟಿಸಿದ್ದೀರಿ. ಕೊರೊನಾ ಹಾವಳಿ ಮುಗಿದ ಮೇಲೆ ಬೆಂಗಳೂರಿಗೆ ಬನ್ನಿ. ಭೇಟಿಯಾಗೋಣ. ನಮ್ಮ ಪ್ರಾಜೆಕ್ಟ್’ಗಳಲ್ಲಿ ನಿಮಗೊಂದು ಜಾಗವಿರುತ್ತದೆ. ನಮ್ಮ ಜತೆ ಸೇರಿಕೊಳ್ಳಿ ಅಂತ ಆಮಂತ್ರಿಸುತ್ತಿದ್ದೇನೆ. ಆಲ್ ದಿ ಬೆಸ್ಟ್. ಸಧ್ಯದಲ್ಲೇ ಮೀಟ್ ಮಾಡೋಣ…’ – ಇದು ಪುನೀತ್ ಮಾತು.

ಕನ್ನಡ ಚಿತ್ರರಂಗದ ‘ಪವರ್ ಸ್ಟಾರ್’ವೊಬ್ಬರಿಂದ ಬಂದ ಈ ಆಹ್ವಾನದಿಂದ ಪೃಥ್ವಿ ಅಂಬಾರ್ ಥ್ರಿಲ್ ಆಗಿದ್ದಾರೆ. ಪುನೀತ್ ಇರುವುದೇ ಹಾಗೆ. ಇಷ್ಟವಾದರೆ ತಾವೇ ಫೋನ್ ಮಾಡಿ ಮಾತಾಡಿಸುತ್ತಾರೆ. ಆರೋಗ್ಯ ವಿಚಾರಿಸುತ್ತಾರೆ. ಅವಕಾಶ ಮಾಡಿಕೊಡುವುದಾಗಿ ಮಾತು ಕೊಡುತ್ತಾರೆ. ನೆನಪಿಡಿ : ಯೋಗ ಮತ್ತು ಯೋಗ್ಯತೆ ಕೂಡಿ ಬಂದಾಗ ಮಾತ್ರ ಇಂಥವೆಲ್ಲಾ ಸಾಧ್ಯವಾಗುತ್ತದೆ…

Copyright ©2024 . All Rights Reserved. privacy | terms Whatsapp: 9538193653 Email: hello@flixoye.com