ಟಾಲಿವುಡ್​​​​ಗೆ ಎಂಟ್ರಿ ಕೊಟ್ಟ ವಸಿಷ್ಠ ಸಿಂಹ ಓದೆಲ ರೈಲ್ವೆ ಸ್ಟೇಷನ್’ ಚಿತ್ರದ ಪೋಸ್ಟರ್​​ ರಿಲೀಸ್

Published on

578 Views
Advertisement

ಕನ್ನಡದ ಖ್ಯಾತ ನಟ, ಕಂಚಿನ ಕಂಠದ ಕಲಾವಿದ, ಸ್ವೀಟ್ ವಿಲನ್ ವಸಿಷ್ಠ ಎನ್. ಸಿಂಹ ಕೂಡಾ ತೆಲುಗು ಚಿತ್ರರಂಗಕ್ಕೆ ಬಂದಿದ್ದಾರೆ. ‘ಓದೆಲ ರೈಲ್ವೆ ಸ್ಟೇಷನ್​’ ಎಂಬ ತೆಲುಗು ಸಿನಿಮಾ ಮೂಲಕ ಕನ್ನಡದ ಸಿಂಹ ಟಾಲಿವುಡ್​​​​ನಲ್ಲಿ ಅಬ್ಬರಿಸಲು ಹೊರಟಿದೆ. ಈಗಾಗಲೇ ಈ ಸಿನಿಮಾದ ಫಸ್ಟ್​​​​​​​​​​​​​​​​​​​​​​​​​​​​​​​​​​​​ಲುಕ್ ಕೂಡಾ ಬಿಡುಗಡೆಯಾಗಿದೆ. ವಸಿಷ್ಠ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಚಿತ್ರದ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಸಿಷ್ಠ, ತಿರುಪತಿ ಎಂಬ ಮುಗ್ಧ ಯುವಕನ ಪಾತ್ರದಲ್ಲಿ ನಟಿಸಲಿದ್ದಾರಂತೆ. ವಸಿಷ್ಠ ಸಿಂಹ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

Advertisement

ಓದೆಲ ರೈಲ್ವೆ ಸ್ಟೇಷನ್’ ಚಿತ್ರದ ಪೋಸ್ಟರ್​​ನಲ್ಲಿ ವಸಿಷ್ಠ ಸಿಂಹ ಬಟ್ಟೆ ಇಸ್ತ್ರಿ ಮಾಡುತ್ತಿದ್ದಾರೆ. ಇದರಲ್ಲಿ ವಸಿಷ್ಠ ಹಳ್ಳಿ ಯುವಕನ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ”ಇದು ನನ್ನ ಮೊದಲ ತೆಲುಗು ಸಿನಿಮಾ. ನಾನು ಇದುವರೆಗೂ ನೋಡಿರದ, ಮಾಡಿರದ ಬಹಳ ಅದ್ಭುತವಾದ ಪಾತ್ರ” ಎಂದು ವಸಿಷ್ಠ ತಮ್ಮ ಮೊದಲ ತೆಲುಗು ಸಿನಿಮಾ ಬಗ್ಗೆ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ವಸಿಷ್ಠ ಜೊತೆಯಾಗಿ ಹೆಬಾ ಪಟೇಲ್ ಹಾಗೂ ಪೂಜಿತಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ರಾಧಾಮೋಹನ್ ನಿರ್ಮಿಸುತ್ತಿದ್ದು, ಅಶೋಕ್ ತೇಜ ನಿರ್ದೇಶನ ಮಾಡುತ್ತಿದ್ದಾರೆ.

Advertisement

ವಸಿಷ್ಠ ಸಿಂಹ ಹುಟ್ಟಿ, ಬೆಳೆದದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ. ಚಿಕ್ಕಂದಿನಿಂದಲೇ ಸಿನಿಮಾ ಸೆಳೆತ ಇದ್ದ ವಸಿಷ್ಠ ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದರು. ಅವರಿಗೆ ಆಸಕ್ತಿ ಇದ್ದದ್ದು ಸಂಗೀತದಲ್ಲಿ. ಸಿನಿಮಾದಲ್ಲಿ ಹಿನ್ನೆಲೆ ಗಾಯಕನಾಗಬೇಕೆಂಬ ಕನಸು ಹೊತ್ತು ಹಂಸಲೇಖ ಅವರ ಬಳಿ ಕೆಲಸ ಮಾಡುವ ಉದ್ದೇಶದಿಂದ ಬೆಂಗಳೂರಿಗೆ ಬಂದರು. ಬಸವನ ಗುಡಿ ನ್ಯಾಷನಲ್​ ಕಾಲೇಜಿನಲ್ಲಿ ಪದವಿ ಪಡೆದ ಅವರು ಕಾಲೇಜು ಓದುವಾಗಲೇ ರಂಗಭೂಮಿಗೆ ಸೇರಿ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಇತ್ತೀಚೆಗೆ ನಿರಂಜನ್ ದೇಶಪಾಂಡೆ ಬಹಳ ವರ್ಷಗಳ ಹಿಂದೆ ವಸಿಷ್ಠ ಸಿಂಹ, ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಅವರೊಂದಿಗೆ ನಾಟಕವೊಂದನ್ನು ಅಭ್ಯಾಸ ಮಾಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿದ್ದರು.

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com