‘ಪಿಂಗಾರ’ ಕರ್ನಾಟಕಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟ ತುಳು ಚಿತ್ರ…!!

Published on

383 Views
Advertisement

ಬೆಂಗಳೂರು‌ 12ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಫೆಬ್ರವರಿ 26 ರಂದು ಉದ್ಘಾಟನೆಗೊಂಡು ನಿನ್ನೆ (ಮಾರ್ಚ್ 4) ವಿಧಾನಸೌದದ ಬ್ಯಾಂಕ್ವೆಟ್ ಹಾಲ್ ನಲ್ಲಿ ಪಶಸ್ತಿ ಪ್ರಧಾನ ಹಾಗೂ‌ ಸಮಾರೋಪ ‌ಸಮಾರಂಭ ನೆರವೇರಿತು. ಕನ್ನಡ ಸಿನಿಮಾಗಳ‌ ಪಟ್ಟಿಯಲ್ಲಿ ಅಂತರಾಷ್ಟ್ರೀಯ ತೀರ್ಪುಗಾರರ ವಿಶೇಷ ಮನ್ನಣೆಗೆ ಪಾತ್ರವಾಗಿದ್ದು ತುಳು ಚಿತ್ರ ‘ಪಿಂಗಾರ’. ಕರಾವಳಿಯ ಸೊಗಡು, ಸಂಸ್ಕೃತಿ ಹಾಗೂ ಅಲ್ಲಿ ಆಚರಿಸಿಕೊಂಡು ಬರುವಂತಹ ದೈವಾರಾಧನೆ, ನಾಗಾರಾಧನೆ, ಆಚಾರ-ವಿಚಾರ, ನಂಬಿಕೆ ಇದೆಲ್ಲವನ್ನೂ ತನ್ನ ‘ಪಿಂಗಾರ’ ಚಿತ್ರದ ಮೂಲಕ ಅಚ್ಚುಕಟ್ಟಾಗಿ ನಿರ್ದೇಶನ ಮಾಡಿದ ಪ್ರೀತಮ್ ಶೆಟ್ಟಿಯವರಿಗೆ ಇದು ಮೊದಲ‌ ಸಿನಿಮಾ. ಕಿರುತೆರೆ ನಿರ್ದೇಶನದಲ್ಲಿ ಜನಪ್ರಿಯವಾಗಿರುವ ಪ್ರೀತಮ್ ಶೆಟ್ಟಿಯವರ ‘ಪಿಂಗಾರ’ ಚಿತ್ರಕ್ಕೆ ಪವನ್ ಕುಮಾರ್ ರವರು ಛಾಯಾಗ್ರಹಣ ಮಾಡಿದ್ದಾರೆ. ಶಶಿರಾಜ್ ಕಾವೂರು ಸಂಭಾಷಣೆ ಬರೆದಿದ್ದಾರೆ. ಜನಾರ್ಧನ್ ರವರ ಕಲಾನಿರ್ದೇಶನವಿದೆ. ಅವಿನಾಶ್ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ‌ ಹೂಡಿದ್ದಾರೆ. ತಾರಾಗಣದಲ್ಲಿ ಗುರುಹೆಗ್ಡೆ, ಉಷಾಭಂಡಾರಿ, ನೀಮಾರೇ, ಸುನೀಲ್ ನೆಲ್ಲಿಗುಡ್ಡೆ, ಸಿಂಚನಾ ಹೀಗೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.


‘ಪಿಂಗಾರ’ ತುಳುನಾಡಿನಲ್ಲಿ ಹೆಚ್ಚಾಗಿ ನಾಗಾದೇವರಿಗೆ, ದೈವಸ್ಥಾನ, ದೇವಸ್ಥಾನಗಳಲ್ಲಿ ಬಳಸುವ ಹೂ ಪಿಂಗಾರ. ಇದು ಅಡಿಕೆ (ತೆಂಗು) ಮರದ ಹೂ. ತುಳುನಾಡಿನಲ್ಲಿ ಇದರ ವಿಶೇಷತೆಯೇ ಬೇರೆ, ದೈವ ದರ್ಶನ, ಭೂತ(ದೈವ) ಕೋಲಗಳಲ್ಲಿ ಪಾತ್ರಿಗಳು, ದೈವ ವೇಷಾಧಾರಿಗಳು ಪಿಂಗಾರ ಹೂವನ್ನು ಕೈಯಲ್ಲಿ ಹಿಡಿದುಕೊಂಡು ಕುಣಿದು ಭಕ್ತರಿಗೆ ಪ್ರಸಾದವಾಗಿ ಪಿಂಗಾರವನ್ನು‌ ನೀಡುತ್ತಾರೆ. ಈ ದೈವ ಪ್ರಸಾದದ ಕತೆಯೇ ‘ಪಿಂಗಾರ’.

Advertisement

Advertisement

More Buzz

Trailers 4 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 4 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com