ಪವನ್ ಕುಮಾರ್ ರವರ ಮೂಕಿ ಕಿರುಚಿತ್ರ “ಅಸ್ಮಿತೆ”…

Published on

466 Views
Advertisement

ನಿರ್ದೇಶಕ ಪವನ್ ಕುಮಾರ್ ‘ಅಸ್ಮಿತೆ’ ಎಂಬ 19 ನಿಮಿಷದ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪವನ್ ಕುಮಾರ್ ರವರ ಈ‌ ಚಿತ್ರವೂ ಭಾವನಾತ್ಮಕವಾಗಿ ಹಾಗೂ ಬಹಳ ಆಪ್ತವಾಗಿ ಮೂಡಿಬಂದಿದೆ. ಇದು ಮೂಕಿ‌ ಕಿರುಚಿತ್ರವಾಗಿದ್ದು, ಪರಭಾಷಿಗರಿಗೂ‌ ಇದು‌ ಅರ್ಥವಾಗಲಿ ಎಂದು‌ ಯಾವುದನ್ನು ನೇರವಾಗಿ ಹೇಳದೆ ನೋಡುಗನ‌ ದೃಷ್ಟಿಗೆ ಬಿಟ್ಟಿದ್ದಾರೆ. ಈ ಚಿತ್ರದ‌‌ ಕಥಾವಸ್ತು ‘ಹಿಂದಿ‌ ಹೇರಿಕೆ ಹಾಗೂ ನನ್ನ ಭಾಷೆಯಲ್ಲಿ ಸೇವೆ ಒದಗಿಸಿ’ ಎಂಬ ಹೇಳಿಕೆ ನೀಡುವುದು. ಅದನ್ನು ಪವನ್ ‌ಕುಮಾರ್ ತಾಯಿ‌ ಮಗನ ಪ್ರೀತಿಯ ಮೂಲಕ‌ ತೋರಿಸಿದ್ದಾರೆ.

ಮಲತಾಯಿ ಹೊರಗಿನವಳು‌ ಎಂದು ಹಿಂದಿ ಹೇರಿಕೆಗೆ ಹೋಲಿಕೆ‌ ಮಾಡಿ‌ ತೋರಿಸಿದ್ದಾರೆ. ಈ ಕಿರುಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಸಮಿಕ್ ಶೆಣೈ, ಸೂರಜ್ ಕಿಶೋರ್, ಸುಷ್ಮಾ ನಿರ್ಮಲ್ ಅಚ್ಚುಕಟ್ಟಾಗಿ ಅಭಿನಯ ಮಾಡಿದ್ದಾರೆ. ವಿಶೇಷವೆಂದರೆ ಈ ಚಿತ್ರದಲ್ಲಿ ಪವನ್ ಕುಮಾರ್ ಪತ್ನಿ ಸೌಮ್ಯ‌ ಜಗನ್ ಮೂರ್ತಿ ಹಾಗೂ ಪುತ್ರಿ ಲಾಸ್ಯ ಪಸೌ ಕೂಡ ಅಭಿನಯ ಮಾಡಿದ್ದಾರೆ.

Advertisement

ಗೊಮ್ಟೇಶ್ ಉಪಾಧ್ಯೆಯವರ ಛಾಯಾಗ್ರಹಣವಿದ್ದು, ಸುರೇಶ್ ಅರುಮುಗಂ ಸಂಕಲನ ನೀಡಿದ್ದಾರೆ. ಚಿತ್ರದ ಕೊನೆಯಲ್ಲಿ ಕಣ್ಣಲ್ಲಿ ನೀರು‌ ಭರಿಸುತ್ತದೆ. ಪೂರ್ಣ ಚಂದ್ರ ತೇಜಸ್ವಿಯವರ ಸಂಗೀತ ಕಿರುನಗೆಯನ್ನು ಮೂಡಿಸುತ್ತ ಈ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮನಸ್ಸಿನಲ್ಲಿ ‌ಉಳಿಯುತ್ತದೆ.

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com