flixOye
Buzz

ಸದ್ದಿಲ್ಲದೆ ಸಾಗುತ್ತಿದೆ ದೋಸ್ತಿ ಆನಂದ್ ಅವರು ನಿರ್ದೇಶನ ಮಾಡುತ್ತಿರುವ “ಪಂಖುರಿ” ಚಿತ್ರದ ಚಿತ್ರೀಕರಣ

ದೋಸ್ತಿ ಹಾಗೂ *121# ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ
ನಿರ್ದೇಶಕನಾಗಿ ಭರವಸೆ ಮೂಡಿಸಿರುವ ಆನಂದ್ ಅವರು ಹೊಸ
ಚಿತ್ರವೊಂದನ್ನು ಸದ್ದಿಲ್ಲದೆ ಶುರುಮಾಡಿದ್ದರೆ. ಚಿತ್ರಕ್ಕೆ ಪಂಖುರಿ ಎಂಬ
ವಿಭಿನ್ನವಾದ ಶೀರ್ಷಿಕೆಯನ್ನು ಇಟ್ಟಿದ್ದಾರೆ. ಆನಂದ್ ಅವರೇ ಕಥೆ ಚಿತ್ರಕಥೆ
ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಮೂಲಕ ಶಾರದ ರೆಡ್ಡಿ
ಹಾಗೂ ಶಶಿ ಶೇಖರ್ ಎಂಬುವವರು ನಾಯಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಾಯಕಿಯಾಗಿ ನಟಿಸುವ ಜೊತೆಗೆ ಶಾರದ ರೆಡ್ಡಿ ಅವರು ಪಕೃತಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ, ಕನ್ನಡ ಚಿತ್ರರಂಗದ ಸಿನಿಮಾ ರಂಗದ ಸುದ್ದಿ ಸಮಾಚಾರಗಳನ್ನು
ತಿಳಿಸುತ್ತಿರುವ ಸೂಪರ್ ಸ್ಟಾರ್ ಮಾಸ ಪತ್ರಿಕೆಯ ಸಂಪಾದಕರಲ್ಲಿ
ಒಬ್ಬರಾದ ಎಂ.ಡಿ ಅಫ್ಜಲ್ ಅವರ ಸೂಪರ್ ಸ್ಟಾರ್ ಮ್ಯಾಗಜೀನ್ ಸಹಯೋಗದೊಂದಿಗೆ ಈ ಚಿತ್ರವು ನಿರ್ಮಾಣ ವಾಗಲಿದೆ. ಈ ಚಿತ್ರಕ್ಕೆ ಚಂದ್ರು ಓಬಯ್ಯ ಅವರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಿತ್ರದ ಚಿತ್ರೀಕರಣ ಸಾಗುತ್ತಿದ್ದು ನೆನ್ನೆ ಸ್ವಾತಂತ್ರ್ಯ ದಿನಾಚರಣೆ ವಿಶೇಷವಾಗಿ ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಚಿತ್ರದ ಫಸ್ಟ್ ಲುಕ್ ಸದ್ಯದಲ್ಲೇ ಬಿಡುಗಡೆಯಾಗಲಿದೆ.

ಸಂಬಂಧಿತ · Related