‘ವೃತ್ತ’ ಚಿತ್ರದ ಪೋಸ್ಟರ್ ನಲ್ಲಿ ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕ ಮಂದಣ್ಣ ರಕ್ಷಿತ್ ಶೆಟ್ಟಿ ಜೊತೆ ಬ್ರೇಕ್ ಅಫ್ ಅದ್ಮೇಲೆ ಆ ಚಿತ್ರದಿಂದ ಹೊರ ಬಂದರು. ಈ ಚಿತ್ರದ ಟೀಮ್ ರಕ್ಷಿತ್ ಶೆಟ್ಟಿಯದು ಆಗಿದ್ದರಿಂದ ರಶ್ಮಿಕಾ ಆ ಚಿತ್ರದ ಹೊರ ನಡೆದರು ಎಂಬ ಸುದ್ದಿ ಹಬ್ಬಿತ್ತು. ‘ಕಿರಿಕ್ ಪಾರ್ಟಿ’ ಚಿತ್ರದ ನಂತರ ತೆಲುಗು ಚಿತ್ರರಂಗದಲ್ಲಿ ಮಿಂಚಿದ ರಶ್ಮಿಕಾ ತಮಿಳು, ತೆಲುಗು, ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿದ್ದರಿಂದ ಡೇಟ್ ಸಮಸ್ಯೆ ಯಿಂದ ‘ವೃತ್ತ’ ಚಿತ್ರವನ್ನು ಕೈ ಬಿಟ್ಟರು ಎಂದು ಚಿತ್ರತಂಡ ಮತ್ತು ರಶ್ಮಿಕಾ ಮಂದಣ್ಣ ಕೂಡ ಅದೇ ಕಾರಣ ಕೊಟ್ಟರು.
ಈಗ ರಶ್ಮಿಕಾ ಮಂದಣ್ಣ ಜಾಗವನ್ನು ಹೊಸ ನಟಿ ತುಂಬಿದ್ದಾರೆ. ಗೌತಮ್ ಅಯ್ಯರ್ ನಿರ್ದೇಶನದ ‘ವೃತ್ತ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ನಿತ್ಯಾಶ್ರೀ ಮೂಲತಃ ಡ್ಯಾನ್ಸರ್ ಆಗಿರುವ ನಿತ್ಯಶ್ರೀ ಮಣಿರತ್ನಂ ಚಿತ್ರದಲ್ಲಿವೊಂದರಲ್ಲಿ ನಟಿಸಿದ್ದಾರೆ. ಮಲಯಾಳಂ ಚಿತ್ರದ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿರುವ ಅನುಭವವನ್ನು ಹೊಂದಿದ್ದಾರೆ. ಈ ಚಿತ್ರದಲ್ಲಿ ಇಂದಿರಾ ಅನ್ನೋ ಪೊಲೀಸ್ ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪಾತ್ರಕ್ಕಾಗಿ ಮಹಿಳಾ ಪೊಲೀಸ್ ಅಧಿಕಾರಿಯ ಜೊತೆ ಚರ್ಚೆ ಮಾಡಿ, ಪಾತ್ರಕ್ಕೆ ಏನು ಬೇಕು ಆ ತಯಾರಿಯನ್ನು ಮಾಡಿಕೊಂಡಿದ್ದಾರೆ. ಕಿರಣ್ ಬೇಡಿ ನಿತ್ಯಾಶ್ರೀ ಗೆ ಸ್ಫೂರ್ತಿಯಂತೆ.









