flixOye
Buzz

ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಕ್ಷಿಪ್ರ’

ಬಣ್ಣ ಬಣ್ಣದ ಕನಸುಗಳನ್ನು ಇಟ್ಟುಕೊಂಡು ಹಲವಾರು ಪ್ರತಿಭೆಗಳು ಚಿತ್ರರಂಗಕ್ಕೆ ಬರುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ. ಈ ಸಾಲಿಗೆ ಹೊಸಬರೇ ಸೇರಿಕೊಂಡು ಸಿದ್ದಪಡಿಸುತ್ತಿರುವ ’ಕ್ಷಿಪ್ರ’ ಯಶಸ್ವಿಯಾಗಿ ಶೂಟಿಂಗ್ ಮುಗಿಸಿಕೊಂಡು ಕುಂಬಳಕಾಯಿ ಒಡೆದಿದ್ದಾರೆ. ಸೆಸ್ಪನ್ಸ್, ಥ್ರಿಲ್ಲರ್ ಮಹಿಳಾ ಪ್ರಧಾನ ಕತೆಯಾಗಿರುವುದರಿಂದ ಸಿನಿಮಾದ ಸಾರವನ್ನು ಬಿಟ್ಟುಕೊಟ್ಟಿಲ್ಲ. ದಕ್ಷ್ ನಾಯಕ.

ಜೊತೆ ಜೊತೆಯಲಿ’ ಧಾರವಾಹಿ ಖ್ಯಾತಿಯ ರಮ್ಯಪ್ರಿಯಾ ಶೀರ್ಷಿಕೆ ಹೆಸರಿನಲ್ಲಿ ಮತ್ತು ಪ್ರೀತಿಮೀರಜ್‌ಕರ್ ನಾಯಕಿಯರು. ಇವರೆಲ್ಲರಿಗೂ ಹೊಸ ಅನುಭವ. ಮಕ್ಕಳಿಗೆ ಅಂತಲೇ ಹಾಡು-ನೃತ್ಯ, ಯುವಜನಾಂಗವು ಇಷ್ಟಪಡುವ ಫೈಟ್ಸ್-ಹಾಸ್ಯ, ಮಹಿಳೆಯರು ಅರ್ಥ ಮಾಡಿಕೊಳ್ಳುವಂತಹ ಸಂದೇಶ ಇರುವುದು ವಿಶೇಷ. ಸತೀಶ್‌ಕೃಷ್ಣ ನಿರ್ದೇಶನದಲ್ಲಿ, ಪ್ಯೂರ್‌ವಿಷನ್ ಎಂಟರ್‌ಟೈನ್‌ಮೆಂಟ್ಸ್ ಹಾಗೂ ದಿನೇಶ್.ಕೆ.ರಾಮನ್ ಜಂಟಯಾಗಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ತಾರಗಣದಲ್ಲಿ ಮೋಹನ್‌ಜುನೇಜ, ನಾಗೇಂದ್ರಅರಸ್, ಕಾರ್ತಿಕ್‌ವೈಭವ್, ಅರಸು, ಚೇತನ್‌ಕೃಷ್ಣನ್, ಪ್ರಸನ್ನಮಾದವ್, ನಂದಗೋಪಾಲ್, ಯಶೋದ, ಲಕ್ಷೀ, ಪಾವನಿ, ಪ್ರಿಯಾಂಕದಿನೇಶ್, ಹರ್ಷಾ, ನಂದನ್, ಕಬಾಬ್‌ಮಂಜು, ಸುನಿಲ್.ಜೆ, ಚೇತನ್‌ದುರ್ಗಾ, ಧನ್‌ಲಾಲ್, ರವಿಲೀ ಮತ್ತು ವಿಕ್ರಾಂತ್ ನಟಿಸಿದ್ದಾರೆ. ವರದರಾಜ್-ಸಮರ್ಥ್-ಅಂಜಾನ್ ಸಾಹಿತ್ಯದ ಗೀತೆಗಳಿಗೆ ವಿಕ್ಟರ್‌ಲೋಗಿ ಸಂಗೀತವಿದೆ. ಅನನ್ಯಭಟ್,ರ‍್ಯಾಪಿಡ್‌ರಶ್ಮಿ, ಚೇತನ್‌ನಾಯಕ್, ಅಭಿಷೇಕ್‌ಕೋಡ್ಯಾಲ್, ಅರವಿಂದ್‌ಮುಕುಂದನ್ ಧ್ವನಿಯಲ್ಲಿ ಹಾಡುಗಳು ಮೂಡಿಬಂದಿದೆ.

ಛಾಯಾಗ್ರಹಣ ಸತೀಶ್‌ರಾಜೇಂದ್ರನ್, ಸಂಕಲನ ಮಣಿಯನ್, ಸಾಹಸ ಕುಂಗುಫುಚಂದ್ರು, ಕಿಶೋರ್-ನವೀನ್ ನೃತ್ಯ ನಿರ್ವಹಿಸಿದ್ದಾರೆ. ಬೆಂಗಳೂರು, ಕೋಲಾರ, ಕೆಜಿಎಫ್, ಬ್ಯಾಲಕೆರೆ ಕಡೆಗಳಲ್ಲಿ ವಿಜಯ್‌ಕುಮಾರ್.ಸಿ-ಭೂಪಾಲ್ ನೆರವಿನೊಂದಿಗೆ ಚಿತ್ರೀಕರಣ ನಡೆದಿದೆ. ಲಾಕ್‌ಡೌನ್ ವೇಳೆಯಲ್ಲಿ ಎಡಿಟಿಂಗ್, ಅನ್‌ಲಾಕ್ ಆದ ನಂತರ ಡಬ್ಬಿಂಗ್ ಮುಗಿದು, ಸದ್ಯ ಧನುಷ್ ಸ್ಟುಡಿಯೋ ಪೋಸ್ಟ್ ಪ್ರೊಡಕ್ಷನ್‌ದಲ್ಲಿ ಬ್ಯುಸಿ ಇದೆ. ಮುಂದಿನ ದಿನಗಳಲ್ಲಿ ಫಸ್ಟ್‌ಲುಕ್ ಬಿಡುಗಡೆ ಮಾಡಲು ತಂಡವು ಯೋಜನೆ ಹಾಕಿಕೊಂಡಿದೆ.

ಸಂಬಂಧಿತ · Related