ಹೊಸ ವರ್ಷದಲ್ಲಿ ಕರುನಾಡ ಮನೆಗಳಲ್ಲಿ “ಅಮ್ನೋರು” ಆಗಮನ

Published on

467 Views
Advertisement

ಉದಯ ಟಿವಿಯಲ್ಲಿ ಹೊಸ ಧಾರಾವಾಹಿ
ಜನವರಿ 20ರಿಂದ ಸೋಮವಾರದಿಂದ ಶನಿವಾರ ರಾತ್ರಿ 7ಕ್ಕೆ

ಉದಯ ಟಿವಿ ದಿನದಿಂದ ದಿನಕ್ಕೆ ಹೊಸ ಕಥಾನಕಗಳಿಂದ ಜನರಮನಸ್ಸನ್ನು ಗೆಲ್ಲಲು ಹೊಸ ಪ್ರಯತ್ನಗಳನ್ನು ನಿಮ್ಮ ಮುಂದೆ ಹೊತ್ತು ತರುತ್ತಿದೆ. ಪುಟಾಣಿ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಜನರಿಗೆ ಹತ್ತಿರವಾಗುವ ವಿನೂತನ ಕಾರ್ಯಕ್ರಮಗಳಿಂದ ಪ್ರತಿದಿನ ಮನರಂಜನೆ ನೀಡುತ್ತಾ, ಜನರನ್ನು ಸೆಳೆಯುತ್ತಿದೆ. ವೈವಿಧ್ಯಮಯ ಧಾರಾವಾಹಿಗಳಿಂದ ಕೌತುಕಗಳ ಜೊತೆ ಸೃಜನಾತ್ಮಕ ಥೀಮ್‍ಗಳಿಂದ ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿದೆ. ಜನಪ್ರಿಯ ಧಾರಾವಾಹಿಗಳಾದ ನಂದಿನಿ, ನಾನು ನನ್ನ ಕನಸು, ಕಸ್ತೂರಿ ನಿವಾಸ, ಸೇವಂತಿ, ನಾಯಕಿ, ಜೀವನದಿ, ಕಾವೇರಿ ಧಾರವಾಹಿಗಳಿಂದ ಪ್ರೇಕ್ಷಕರನ್ನು ಮನರಂಜಿಸುತ್ತಾ ಬಂದಿದೆ. ಇದೀಗ ದೇವಿಯ ಮಹಾತ್ಮೆ ಸಾರಿ, ಜನರ ಮನಗೆಲ್ಲಲು ತಯಾರಾಗಿರುವ ಹೊಸ ಸೂಪರ್ ನ್ಯಾಚುರಲ್ ಧಾರಾವಾಹಿಯೇ ‘ಅಮ್ನೋರು’.

Advertisement

ಹೊಸ ವರುಷಕ್ಕೆ ಹೊಸ ಹುರುಪಿನಿಂದ ಫ್ರೇಮ್ಸ್ ನಿರ್ಮಾಣ ಸಂಸ್ಥೆ ‘ಅಮ್ನೋರು’ ಎಂಬ ಶೀರ್ಷಿಕೆಯನ್ನು ಹೊತ್ತು ದೈವ ಮತ್ತು ದುಷ್ಟ ಶಕ್ತಿಯಾಧಾರಿತ ಧಾರಾವಾಹಿಯನ್ನು ಪ್ರೇಕ್ಷಕರೆದುರಿಡಲು ಸಜ್ಜಾಗಿದೆ.
ಈ ಕಥೆಯು ಅಮ್ನೋರ ಪರಮಭಕ್ತರಾದ ಶಂಕರ ಹಾಗೂ ದಾಕ್ಷಾಯಣಿ ಹಿಂದಿನ ಜನ್ಮದಲ್ಲಿ ಅಮ್ನೋರ ವಿಗ್ರಹ ಮತ್ತು ರುದ್ರಾಕ್ಷಿಯನ್ನು ದುಷ್ಟರಿಂದ ಕಾಪಾಡುವ ಸಲುವಾಗಿ, ಮಾಟಗಾತಿ ಧನಶೇಖರಿ ಮತ್ತು ಶಂಕರನ ಸಹೋದರ ವರದಪ್ಪನಿಂದಲೇ ಪ್ರಾಣವನ್ನು ಕಳೆದುಕೊಂಡಿರುವ ದಂಪತಿಗಳು. ರುದ್ರ ಎನ್ನುವ ಆತ್ಮ 27 ವರ್ಷಗಳಿಂದ ಕೊಳದಲ್ಲಿರುವ ರುದ್ರಾಕ್ಷಿಮಾಲೆ ಮತ್ತು ಅಮ್ನೋರ ವಿಗ್ರಹವನ್ನು ಕಾಪಾಡುತ್ತಾ, ಮತ್ತೆ ಪುನರ್ಜನ್ಮ ಪಡೆದುಕೊಂಡು ಬರುವ ಜೋಡಿಗಾಗಿ ಕಾಯುತ್ತಿರುತ್ತದೆ. ಘೋರ ಮಾಟಗಾತಿ ಧನಶೇಖರಿ ವರದಪ್ಪನ ಜೊತೆ ಸೇರಿ ರುದ್ರಾಕ್ಷಿ ಮಾಲೆ ಹಾಗೂ ಅಮ್ನೋರ ವಿಗ್ರಹವನ್ನು ತನ್ನದಾಗಿಸಿಕೊಳ್ಳಲು ಸಂಚು ರೂಪಿಸಿಕೊಳ್ಳುತ್ತಿರುವರು.
ಶಂಕರ ಹಾಗೂ ದಾಕ್ಷಾಯಣಿ ಅಮ್ನೋರ ವಿಗ್ರಹವನ್ನು ಪ್ರತಿμÁ್ಟಪಿಸಲು ಪುನಃ ಹುಟ್ಟಿ ಬರುತ್ತಾರಾ? 27 ವರ್ಷ–ಕಾಯುತ್ತಿರುವ ರುದ್ರಾಳ ಆಸೆಯು ನೆರವೇರುತ್ತಾ? ತದ್ವಿರುದ್ಧ ಆಲೋಚನೆಗಳನ್ನು ಹೊಂದಿರುವ ನಾಯಕ ಮತ್ತು ನಾಯಕಿ ಜೊತೆಯಾಗಿ ದೇವಸ್ಥಾನ ಪುನಃಶ್ಚೇತನಗೊಳಿಸುತ್ತಾರ? ಅನ್ನೋದೆ ಈ ಕಥೆಯ ತಿರುಳಾಗಿದೆ.

ಈ ಧಾರಾವಾಹಿಯು ಮೇಲುಕೋಟೆ ಹಾಗೂ ಇನ್ನಿತರ ಸುತ್ತಮುತ್ತಲಿನ ಪ್ರಸಿದ್ಧ ಸ್ಥಳಗಳಲ್ಲಿ ಹಾಗೂ ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಹೊಸ ಬಗೆಯ ಅಉ ಮತ್ತು ತಂತ್ರಜ್ಞಾನ ಈ ಧಾರಾವಾಹಿಯಲ್ಲಿ ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದಾಗಿದೆ.
ಹಲವಾರು ಖ್ಯಾತ ದೇವಿ ಮಹಾತ್ಮೆ ಸಾರುವ ಧಾರಾವಾಹಿಗಳನ್ನು ನೀಡಿರುವ ರಮೇಶ್ ಇಂದ್ರ ನಿರ್ಮಾಣ ಮತ್ತು ನಿರ್ದೇಶನ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನುಪ್ ಸೀಲಿಯನ್ ಕಥೆಗೆ ತಕ್ಕಂತೆ ಸಂಗೀತ ಸಂಯೋಜನೆ ಮಾಡಿದ್ದಾರೆ. ದಯಾಕರ್ ಛಾಯಾಗ್ರಹಣದಲ್ಲಿ ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ. ನಾಯಕಿಯಾಗಿ ಹೊಸ ಪ್ರತಿಭೆ ಅಕ್ಷರ ನಟಿಸುತ್ತಿದ್ದು, ನಾಯಕನಾಗಿ ಶಶಿ ನಟಿಸುತ್ತಿದ್ದಾರೆ. ಕನ್ನಡ ಚಲನಚಿತ್ರರಂಗದ ಖ್ಯಾತ ಖಳನಾಯಕರಾದ ಕೀರ್ತಿರಾಜ್ ತಮ್ಮ ವಿಭಿನ್ನ ಪಾತ್ರದಿಂದ ಜನರ ಮನಸ್ಸಲ್ಲಿ ನೆಲೆಸುವುದರಲ್ಲಿ ಸಂಶಯವೇ ಇಲ್ಲ.

ರೇಖಾ ರಾವ್, ಹರ್ಷಿತಾ, ಸಂಗೀತ ಭಟ್, ಅನಂತ್ ವೇಲು, ಶರ್ಮಿಳಾ, ಮಧು ಹೆಗಡೆ, ರೋಹಿಣಿ, ವಿಜಯಲಕ್ಷ್ಮಿ, ವಿಕ್ರಮ್ ಹೀಗೆ ಹಲವಾರು ಕಲಾವಿದರನ್ನು ಒಳಗೊಂಡ ಧಾರಾವಾಹಿ ಅಮ್ನೋರು.
ಸುಂದರವಾಗಿ ಚಿತ್ರಿಸಲಾದ “ಅಮ್ನೋರು” ಧಾರಾವಾಹಿಯು ನೋಡುಗರ ಮನಸೆಳೆದು ಮನರಂಜಿಸುವುದಕ್ಕೆ ಇದೇ ಜನವರಿ 20 ರಿಂದ, ಸೋಮವಾರದಿಂದ ಶನಿವಾರ ರಾತ್ರಿ 7 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com