ಜೂಲೈ 9ರಿಂದ ಉದಯ ಟಿವಿ ಯಲ್ಲಿ ಹೊಸ ಅದ್ದೂರಿ ಧಾರಾವಾಹಿ “ಮಾಯಾ”

Published on

590 Views
Advertisement

ಸೋಮವಾರದಿಂದ ಶುಕ್ರವಾರ ರಾತ್ರಿ 07.30ಕ್ಕೆ

24ವರ್ಷಗಳ ಹಿಂದೆ ಪ್ರಪ್ರಥಮ ಬಾರಿಗೆ ಧಾರಾವಾಹಿಗಳನ್ನ ಕನ್ನಡದ ಪ್ರೇಕ್ಷಕರಿಗೆ ಉಣಬಡಿಸಿ, ಅನೇಕ ಮನರಂಜನಾ ಕಾರ್ಯಕ್ರಮಗಳು ಮತ್ತು ವಿಭಿನ್ನ ಹೊಸ ಧಾರಾವಾಹಿಗಳನ್ನ ನೀಡುತ್ತಾ ಬಂದಿರುವ ಉದಯ ಟಿವಿ ಈಗಾಗಲೇ ಜನಮನ Uದ್ದ ಚಾನಲ್, ನಂದಿನಿ, ಕಾವೇರಿ, ಮಾನಸ ಸರೋವರ,ಜೋ ಜೋ ಲಾಲಿ, ಕಣ್ಮಣಿ ಅಂಥಹ ಧಾರಾವಾಹಿಗಳನ್ನು ನೀಡಿ ಈಗ ಉದಯ ಟಿವಿ ಮತ್ತೊಂದು ವಿನೂತನ ರೀತಿಯ ಧಾರಾವಾಹಿಯನ್ನು ಕರುನಾಡ ಮಡಿಲಿಗೆ ಹಾಕಲು ಸಿದ್ಧವಾಗಿದೆ. “ಮಾಯಾ” ಜುಲೈ 9ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.
“ಪುನರಪಿ ಮರಣಂ.. ಪುನರಪಿ ಜನನಂ” ಎನ್ನುವುದು ನಮ್ಮ ಭಾರತೀಯ ಸಂಸ್ಕøತಿಯಲ್ಲಿನ ಆಳವಾದ ನಂಬಿಕೆ. ದೇಹ ನಾಶವಾದರೂ ಆತ್ಮಕ್ಕೆ ವಿನಾಶವಿಲ್ಲಾ ಎನ್ನುವುದು ಆಧ್ಯಾತ್ಮದ ಸಾರ. ಇವೆರಡರ ಮಿಶ್ರಣವೇ “ಮಾಯಾ” ಧಾರಾವಾಹಿಯ ಮೂಲ.

Advertisement

ಸಾವಿರಾರು ವರ್ಷಗಳ ಹಿಂದೆ ಕಣ್ಮೆರೆಯಾದ ಆತ್ಮವನ್ನು ಮತ್ತೆ ಈ ಕಾಲದಲ್ಲಿ ತನ್ನ ಹಿಡಿತಕ್ಕೆ ತೆಗೆದುಕೊಂಡು ಇಡೀ ಪ್ರಪಂಚದಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಬೇಕೆನ್ನುವುದು ಕಾಲಾಂತಕನ ಆಸೆ. ಅವನ ಆಸೆ ನೆರವೇರದೆ ದುಷ್ಟ ಶಕ್ತಿಗಳನ್ನು ತಡೆಯಬೇಕೆಂಬ ಇನ್ನೊಂದು ಗುಂಪು. ಕಾಲಾಂತಕನಿಗೆ ಬೆಂಬಲವಾಗಿ ನಿಲ್ಲುವ ರಣಮಾಯಾ.

ಇಂದಿನ ಜನ್ಮದಲ್ಲಿ ಅರವಿಂದ್, ಯಕ್ಷ ಮತ್ತು ದರ್ಶಿನಿ ಯಾಗಿ ಹುಟ್ಟಿರುವ ಮೂರು ಜನರೇ ಈ ಕಥೆಯ ಕೇಂದ್ರ ಬಿಂದುಗಳು. ಯಾರ ಜೊತೆಗೆ ಯಾರು ಸೇರಿದರೆ ಒಳ್ಳೆಯದನ್ನು ಸಾಧಿಸಬಹುದು? ಯಾರನ್ನ ಯಾರಿಂದ ದೂರಾ ಮಾಡಬೇಕು? ಯಾರಿಂದ ಯಶಸ್ಸು ದೊರೆಯುತ್ತದೆ? ಎನ್ನುವ ಹೋರಾಟವೇ ಕಾಲದ ಹಾಗೂ ಕಾಲಾಂತಕನ ಮಾಯೆ.

Advertisement

ಈ ಧಾರಾವಾಹಿಯ ಕಥೆಯೇ ಹೊಸ ರೀತಿಯ ಹಂದರವಾಗಿರುವುದಲ್ಲದೇ.. ಅದಕ್ಕೆ ಪೂರಕವಾದ ಜಾಗಗಳು, ಮನಸೆಳೆಯುವ ಗ್ರಾಫಿಕ್ಸ್.. ನವೀನ ಮಾದರಿಯ ತಂತ್ರಜ್ಞಾನದ ಉಪಯೋಗ ಎಲ್ಲವೂ ವೀಕ್ಷಕರನ್ನು ಆಶ್ವರ್ಯಗೊಳ್ಳುವಂತೆ ಮಾಡುತ್ತದೆ. ಪ್ರೀತಿ, ಪ್ರೇಮ ಮತ್ಸರ, ಹಗೆ, ಹಾಸ್ಯ ಹೀಗೆ ಮನರಂಜಿಸಲು ಬೇಕಾಗುವ ಎಲ್ಲ ಅಂಶಗಳೂ ಈ ಧಾರಾವಾಹಿಯಲ್ಲಿ ಅಡಕವಾಗಿದೆ.

ಈಗಾಗಲೇ ಕರ್ನಾಟಕದಲ್ಲಿ ಮನೆ ಮಾತಾಗಿರುವ “ನಂದಿನಿ” ಧಾರಾವಾಹಿಯನ್ನು ನಿರ್ಮಾಣ ಮಾಡುತ್ತೀರುವ ಅವ್ನಿ ಟೆಲಿ ಮೀಡಿಯ ಈ “ಮಾಯಾ” ಧಾರಾವಾಹಿಯನ್ನು ತಯಾರಿಸುತ್ತಿದ್ದಾರೆ. ನಂದಾಸ್ ಮತ್ತು ನಾರಾಯಣ ಮೂರ್ತಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

Advertisement

ತಾರಾಗಣದಲ್ಲಿ ಸರಯೂ ಧಾರಾವಾಹಿಯ ಮೂಲಕ ಹೆಸರಾದ ಶ್ವೇತ ನಾಯಕಿಯಾಗಿ, ಆಕಾಂಕ್ಷ ಮತ್ತೊರ್ವ ನಾಯಕಿಯಾಗಿ,ಅಜಯ್ ಈ ಧಾರಾವಾಹಿಯ ನಾಯಕನಾಗಿ ಅಭಿನಯಿಸತ್ತಿದ್ದಾರೆ.ಹಿರಿಯಯ ನಟ ಉಮೇಶ್, ವಿನಯ ರಾಮ್ ಪ್ರಸಾದ್,ಮೋಹನ್ ಶರ್ಮ, ಅಶೋಕ್ ಮುಂತಾದವರು ಈ ಧಾರಾವಾಹಿಗೆ ಸಾಥ್ ನೀಡಿದ್ದಾರೆ.

ಶೀರ್ಷಿಕೆ ಸಂಗೀತ ವನ್ನು ಸತ್ಯ, ಸಂಕಲನವನ್ನು ಶ್ರೀಕಾಂತ್,ಸಾಹಿತ್ಯ-ಸಂಭಾಷಣೆಯನ್ನು ಉದಯ್ ಮತ್ತು ಛಾಯಾಗ್ರಹಣ-ನಿರ್ದೇಶನ: ಭಾನು ಅವರು ವಹಿಸಿಕೊಂಡಿದ್ದಾರೆ. ಈ ಧಾರಾವಾಹಿಯ ಕಥೆ-ಚಿತ್ರಕತೆ, ಸಲಹೆ-ನಿರ್ಮಾಣ ಸುಂದರ್ ಸಿ ನಿರ್ವಹಿಸುತ್ತಿದ್ದಾರೆ.

ಫ್ಯಾಂಟಸಿ, ಸಾಮಾಜಿಕ ಮೆಗಾ ಧಾರಾವಾಹಿ “ಮಾಯಾ” ಜುಲೈ 9ರಿಂದ ರಾತ್ರಿ ಸೋಮವಾರದಿಂದ ಶುಕ್ರವಾರದ ವರೆಗೆ ರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com