ಉದಯ ಟಿವಿಯಲ್ಲಿ ಹೊಸ ಶೋ “ತುತ್ತಾ ಮುತ್ತಾ” ಇದೇ ಶನಿವಾರದಿಂದ ರಾತ್ರಿ 9ಕ್ಕೆ

Published on

606 Views
Advertisement

ಕರ್ನಾಟಕದ ಹೆಮ್ಮೆಯ ವಾಹಿನಿಯಾದ ಉದಯ ಟಿವಿಯು ಹೊಸದೊಂದು ಕಾರ್ಯಕ್ರಮವನ್ನು ಜನತೆಗೆ ಪರಿಚಯಿಸಲು ಸಜ್ಜಾಗಿದೆ. ಉದಯ ವಾಹಿನಿಯ ಹತ್ತಾರು ಕ್ರಿಯಾಶೀಲ ರಿಯಾಲಿಟಿ ಶೋಗಳ ಪಟ್ಟಿಗೆ ಈ ಹೊಸ ಕಾರ್ಯಕ್ರಮ “ತುತ್ತಾ ಮುತ್ತಾ” ಸೇರ್ಪಡೆಯಾಗಲಿದೆ. ತನ್ನ ಮಾತಿನಿಂದಲೇ ನಗುವಿನ ಹೊಳೆ ಹರಿಸುವ ನಿರಂಜನ್ ದೇಶಪಾಂಡೆ ನಿರೂಪಕನಾಗಿ ಕಾರ್ಯ ವಹಿಸಲಿದ್ದಾರೆ. ಮನರಂಜನೆಯೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು, ಸವಾಲು ಜವಾಬುಗಳ ಜುಗಲ್ಬಂದಿಯಾಗಿ ತೆರೆಯಮೇಲೆ ಇದೊಂದು ಹೊಸ ರೀತಿಯ, ವಿನೂತನ ರಿಯಾಲಿಟಿ ಶೋ ಆಗಿ ಮೂಡಿಬರಲಿದೆ. ಕಾರ್ಯಕ್ರಮದಲ್ಲಿ ಹಿರಿತೆರೆ ಮತ್ತು ಕಿರುತೆರೆಯ ತಾರೆಯರ ದಂಡು ಭಾಗವಹಿಸಲಿದ್ದಾರೆ. ತಾರೆಯರ ಮಡದಿ ಮತ್ತು ತಾಯಂದಿರ ನಡುವೆ ನಡೆಯುವ ಜಟಾಪಟಿಯೇ “ತುತ್ತಾ ಮುತ್ತಾ”.

ಆಟದಲ್ಲಿ ತಾರೆಯರ ತಾಯಿ ಒಂದು ಕಡೆ, ಹೆಂಡತಿ ಒಂದು ಕಡೆ ನಿಂತು ನಿರಂಜನ್ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ. ಹನ್ನೆರಡು ಪ್ರಶ್ನೆಗಳಿಂದ ಐದು ಲಕ್ಷ ಗೆಲ್ಲುವ ಅವಕಾಶ ಇವರಿಗೆ ಇರುತ್ತದೆ. ಇದರಲ್ಲಿ ಸರಿಯಾಗಿ ಉತ್ತರ ಕೊಡುವವರು ಯಾರು ಎಂಬ ಆಯ್ಕೆ ಮಾತ್ರ ಬಂದ ತಾರೆಯರದ್ದು. ಉತ್ತರ ತಪ್ಪಾದಲ್ಲಿ ಬರೀ ಒಂದು ಕಡೆಯಿಂದ ಮಾತ್ರವಲ್ಲದೆ, ಆರೋಹಣ ಮತ್ತು ಅವರೋಹಣದ ಕ್ರಮದಲ್ಲಿ ಹಣ ಕಡಿತವಾಗುತ್ತ ಬರುತ್ತದೆ. ತಾಯಿ, ಮಗ, ಸೊಸೆಯ ನಡುವಿನ ಬಾಂಧವ್ಯ, ಸಂಬಂಧಗಳ ಮುಕ್ತ ಚರ್ಚೆ, ಹಾಗು ಪ್ರಶ್ನೆಗಳಿಗೆ ಉತ್ತರ ಕೊಡುವ ರೋಚಕತೆಯೇ ಈ “ತುತ್ತಾ ಮುತ್ತಾ”

Advertisement

ವಾರಾಂತ್ಯದಲ್ಲಿ ಪ್ರಸಾರವಾಗುವ ಈ ಶೋನಲ್ಲಿ ಜನಕ್ಕೆ ತಮ್ಮ ನೆಚ್ಚಿನ ತಾರೆಯರ ಪರಿಚಯ, ಮತ್ತಷ್ಟು ಹತ್ತಿರದಿಂದ ಆಗುವುದರಲ್ಲಿ ಅನುಮಾನವೇ ಇಲ್ಲ. ಹಾಗೆ ಮಸ್ತಿ ಮತ್ತು ಮನರಂಜನೆ ಅನಿಯಮಿತವಾಗಿ ದೊರೆಯಲಿದೆ.

ಈ ಶೋನಲ್ಲಿ ವಿಧವಿಧವಾದ ಸವಾಲುಗಳನ್ನು ಹಾಕಲಾಗುತ್ತದೆ. ಇದನ್ನೆಲ್ಲಾ ಉತ್ತರಿಸಲು ಸಿನಿಮಾ ಮತ್ತು ಸಣ್ಣಪರದೆಯ ತಾರೆಯರು ಬರುತ್ತಾರೆ. ಸಂಗೀತ ನಿರ್ದೇಶಕ ಗುರುಕಿರಣ್, ಹಾಸ್ಯ ನಟ ಕುರಿ ಪ್ರತಾಪ್ ಈಗಾಗಲೇ ಈ ಆಟದಲ್ಲಿ ಭಾಗವಹಿಸಿರುವ ತಾರೆಯರು. ಗುರುಕಿರಣ್ ಅವರ ತಾಯಿಯ ಮುಗ್ಧತೆ, ಮಡದಿಯ ಮುದ್ದು ಮಾತುಗಳು, ಗುರುಕಿರಣರ ಹಾಡುಗಳು ಆ ಕಂತಿನ ವಿಶೇಷತೆಯಾದರೆ, ಕುರಿ ಪ್ರತಾಪರ ಸಂಚಿಕೆ, ಹಾಸ್ಯ ಸಾಗರವನ್ನೇ ಸುರಿಸುವುದರಲ್ಲಿ ಅನುಮಾನವೇ ಇಲ್ಲ.

“ತುತ್ತಾ ಮುತ್ತಾ” ಇದೇ ಶನಿವಾರದಿಂದ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 1 week ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com