ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಸೇವಂತಿ”

Published on

520 Views
Advertisement

ಕನ್ನಡದ ಮನರಂಜನಾ ಕ್ಷೇತ್ರದಲ್ಲಿ ಇಪ್ಪತ್ತೈದು ಯಶಸ್ವಿ ವರ್ಷಗಳನ್ನು ಸದ್ಯದಲ್ಲಿಯೇ ಪೂರೈಸುತ್ತಿರುವ ಉದಯ ಟಿವಿ ಧಾರಾವಾಹಿಗಳಿಂದಲೇ ಮನೆಮಾತಾಗಿದೆ. ಒಂದಕ್ಕಿಂತ ಒಂದು ವಿಭಿನ್ನ ಕಥೆಗಳನ್ನು ಕನ್ನಡದ ವೀಕ್ಷಕರಿಗೆ ನೀಡಿದೆ. ಈ ಸಾಲಿನಲ್ಲಿ ಈಗ ಹೊಸ ಸೇರ್ಪಡೆ “ಸೇವಂತಿ”.

ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ ಕನ್ನಡದ ಮನರಂಜನಾ ವಾಹಿನಿಗಳ ವ್ಯಾಪ್ತಿ. ಹೊಸ ತಂತ್ರಜ್ಞಾನ, ವಿನೂತನ ಕಥಾ ಹಂದರ, ನವಿರಾದ ನಿರೂಪಣೆ ಎಲ್ಲವನ್ನೂ ಒಳಗೊಂಡು ಕನ್ನಡದ ವೀಕ್ಷಕರಿಗೆ ಹೊಸ ಧಾರಾವಾಹಿಯನ್ನು ಉಣಬಡಿಸಲು ಸಿದ್ಧತೆ ನಡೆಸಿದೆ ಉದಯ ಟಿವಿ. ‘ಸೇವಂತಿ’ ಎಂಬ ಈ ಸುಂದರ ಧಾರಾವಾಹಿ ಫೆ. 25 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

Advertisement

ಒಂದಾಗಬೇಕೆಂದುಕೊಂಡಾಗ ದೂರವಾಗುವ, ದೂರವಾಗಬೇಕೆಂದುಕೊಂಡಾಗ ಒಂದಾಗಲು ಬಯಸುವ ಹುಡುಗಿಯ ಕಥೆ ‘ಸೇವಂತಿ’ – ಒಂದು ದೃಶ್ಯ ವೈಭವವಾಗಿ ವೀಕ್ಷಕರ ಮುಂದೆ ಬರಲಿದೆ.
ಪ್ರಸಿದ್ಧ ನಿರ್ಮಾಣ ಸಂಸ್ಥೆ ಸರೆಗಮ ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದು, ವಿನೋದ್ ನಿರ್ದೇಶನ ಮಾಡುತ್ತಿದ್ದಾರೆ. ಮತ್ತೆ ಬಹಳ ದಿನಗಳ ನಂತರ ಕಿರುತೆರೆಗೆ ಆಗಮಿಸುತ್ತಿರುವ ಹಿರಿಯ ನಟಿ ಭಾರತಿ ವಿಷ್ಣುವರ್ದನ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಮಂಜುನಾಥ್ ಭಟ್, ಹಂಸ, ಮೈಕೋ ಶಿವು, ಕೃಷ್ಣ ಅಡಿಗ, ಸಂಗೀತ, ಗಿರೀಶ್ ಅಭಿನಯಿಸುತ್ತಿದ್ದಾರೆ.

Advertisement

ಚೆಂದುಳ್ಳಿ ಚೆಲುವೆ ನಟಿ ಪಲ್ಲವಿ ಗೌಡ ಸೇವಂತಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಇವರ ಜೋಡಿಯಾಗಿ ಹ್ಯಾಂಡ್ ಸಮ್ ಶಿಶಿರ್ ಅವರು ನಾಯಕ ಅರ್ಜುನ್ ಆಗಿ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.
“ಸೇವಂತಿ” ಇದೇ ಫೆಬ್ರವರಿ 25 ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 7.30ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com