ಉದಯ ಟಿವಿಯಲ್ಲಿ ಹೊಸ ಧಾರಾವಾಹಿ “ಕಸ್ತೂರಿ ನಿವಾಸ” ಸೆಪ್ಟೆಂಬರ್ 9ರಿಂದ ಸೋಮವಾರದಿಂದ ಶನಿವಾರ ಸಂಜೆ 6.30ಕ್ಕೆ

Published on

465 Views
Advertisement

“ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ” ಎಂದು ಶ್ರೀ ಡಿ.ವಿ.ಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಹೇಳಿರುವಂತೆ, ಹಳೆ ತತ್ವಗಳಿಗೆ ಹೊಸ ಯುಕ್ತಿ ಸೇರಬೇಕು ಹಾಗೆ ಹೊಸದಾಗಿ ಚಿಗುರು ಬರುವುದು ಹಳೆ ಬೇರಿನಿಂದಲೇ ಎನ್ನುವುದು ಎಲ್ಲರಿಗೂ ಮನನವಾಗಬೇಕು. ಪ್ರಾಚೀನಕತೆಗೆ ಧಕ್ಕೆ ಬಾರದಂತೆ ಆಧುನಿಕತಗೆ ಪರಿವರ್ತಿಸುವ ವಿಷಯವನ್ನು ಇಟ್ಟುಕೊಂಡು ಜನಜೀವನಕ್ಕೆ ಉಪಯುಕ್ತವಾಗುವಂತಹ ಒಂದು ವಿನೂತನ ವಿಚಾರದ ಕುರಿತು “ಕಸ್ತೂರಿ ನಿವಾಸ” ಎಂಬ ಹೊಸ ಧಾರಾವಾಹಿಯನ್ನು ಉದಯ ಟಿವಿ ಇದೇ ಸೆಪ್ಟೆಂಬರ್ 9 ರಿಂದ ಸೊಮವಾರದಿಂದ ಶನಿವಾರದವರೆಗೆ ಸಂಜೆ 6.30ಕ್ಕೆ ಪ್ರಾರಂಬಿಸುತ್ತಿದೆ.

ಈಗಾಗಲೇ ನಂದಿನಿ, ಕಾವೇರಿ, ನಾಯಕಿ, ಕ್ಷಮಾ, ನಾನು ನನ್ನ ಕನಸು ಎಂಬ ವಿಭಿನ್ನ ಕಥೆಗಳ ಧಾರಾವಾಹಿಗಳನ್ನು ನೀಡುತ್ತಾ ಬಂದಿರುವ ಉದಯ ಟಿವಿ ಈಗ ಮತ್ತೊಂದು ವಿನೂತನ ಕಥೆಯ ‘’ಕಸ್ತೂರಿ ನಿವಾಸ’’ ಎಂಬ ಧಾರಾವಾಹಿಯನ್ನು ಪ್ರಾರಂಬಿಸುತ್ತಿದೆ. ಮನೆತನ , ಸಂಪ್ರಾದಾಯ , ಸಂಸ್ಕøತಿ ಅಂತ ನಂಬಿರೋ ಪಾರ್ವತಿ ಒಂದ್ಕಡೆ ಆದ್ರೆ , ಕಟ್ಟು ಪಾಡುಗಳಲ್ಲಿ ನಂಬಿಕೆ ಇಲ್ಲದೆ, ಹಕ್ಕಿಯಂತೆ ಹಾರಾಡಬೇಕು ಅನ್ನೋ ಮೃದುಲಾ ಇನ್ನೋಂದ್ಕಡೆ. ಈ ಬೇರೆ ಬೇರೆ ಆಲೋಚನೆಗಳಿರೋ ಈ ಇಬ್ಬರನ್ನ ವಿಧಿ ಒಂದೆ ದಾರಿಯಲ್ಲಿ ನೆಡೆಯೋ ಹಾಗೆ ಮಾಡಿದರೆ ಹೇಗಿರುತ್ತದೆ ಎಂಬುದೆ ಈ ಧಾರಾವಾಹಿಯ ಕಥಾ ಹಂದರ.

Advertisement

ಹಿಂದಿನ ಕಾಲದ ಆಲೋಚನೆಗಲಿಗೆ ಆಧುನಿಕತೆಯನ್ನು ಅಳವಡಿಸಿಕೊಂಡು ನಡೆಯುವದರಲ್ಲಿ ತಪ್ಪೇನಿದೆ ಎಂಬ ವಾದ ಧಾರಾವಾಹಿಯ ನಾಯಕಿ ಮೃದಲಾಳವಾದವಾದರೆ, ಹೆಣ್ಣು ಅಡುಗೆ ಮಾಡಬೇಕು , ತಗ್ಗಿ ಬಗ್ಗಿ ನಡೆಯಲೇಬೇಕು, ಮೈ ಮುಚ್ಚುವಹಾಗೆ ಉಡುಗೆ ತೊದುಗೆಗಲನ್ನ ಧರಿಸ ಬೆಕು ಎಂಬುದು ಪಾರ್ವತಿಯವಾದ. ಇವರುಗಳ ಮದ್ಧ್ಯೆ ತನ್ನ ಅಮ್ಮನ ಮಾತನ್ನು ಮೀರೋಕಾಗ್ದೆ, ಫ್ಯಾಶನ್ ಡಿಸೈನರ್ ಆಗೋ ಕನಸು ಕಾಣ್ತಿರೋ ನಾಯಕ ತನ್ನ ಮನಸ್ಸಿನ ಮಾತನ್ನು ಧಿಕ್ಕರಿಸೊಕೆ ಆಗ್ದೆ ಒದ್ದಾಡ್ತಿರೋ ಕಥೆ “ಕಸ್ತೂರಿ ನಿವಾಸ” ಧಾರಾವಾಹಿಯನ್ನು ಅದ್ಭುತವಾಗಿ ನಿರ್ದೇಶಿಸುತ್ತಿದ್ದಾರೆ ಮುಸ್ಸಂಜೆ ಮಹೆಶ್.

Advertisement

ನಾಯಕಿ ಮೃದಲಾ ಪಾತ್ರವನ್ನು ನಟಿ ವರ್ಷಾ ಮಾಡುತ್ತಿದ್ದಾರೆ. ಕಿರುತೆರೆ ಮತ್ತು ಹಿರಿತೆರೆಯ ಹೆಸರಾಂತ ನಟಿ ಆಶಾ ರಾಣಿ ಪಾರ್ವತಿಯ ಪಾತ್ರವನ್ನು ನೀರ್ವಹಿಸುತ್ತಿದ್ದಾರೆ. ನಾಯಕ ನಟನಾಗಿ ದೀಲಿಪ್ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಹಾಗೆ ರಾಜಗೋಪಾಲ ಜೋಶಿ , ರುತು , ಶಿಲಶ್ರೀ , ಸಿತಾರಾ ಹೀಗೆ ಹಲವಾರು ಪ್ರತಿಭಾವಂತ ಕಲಾವಿದರ ತಂಡು ಈ ಧಾರಾವಾಹಿಯಲ್ಲಿದೆ.

ದೇವಿ ಸ್ಟುಡಿಯೋಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಕಿರುತೆರೆಯ ಜನಪ್ರಿಯ ನಟಿ ಜಯಶ್ರೀ ಈ ಧಾರಾವಾಹಿಯನ್ನ ಉದಯ ಟಿವಿಯ ವೀಕ್ಷಕರಿಗೆ ಅರ್ಪಿಸುತ್ತಿದ್ದಾರೆ. ಮಾಣಿ ಛಾಯಾಗ್ರಹಣ ಮಾಡುತ್ತಿದ್ದಾರೆ.
ವಿನೂತನ ಪ್ರಯತ್ನದ “ಕಸ್ತೂರಿ ನಿವಾಸ” ಉದಯ ಟಿವಿಯಲ್ಲಿ ಇದೇ ಸೆಪ್ಟಂಬರ್ 09 ರಿಂದ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.

Advertisement

More Buzz

Trailers 3 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 3 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com