flixOye
Buzz

ಡ್ರಗ್ಸ್ ಪ್ರಕರಣ: ದೀಪಿಕಾ, ಸಾರಾ, ಶ್ರದ್ಧಾ ಕಪೂರ್ ಗೆ ಎನ್‌ಸಿಬಿ ನೋಟಿಸ್


ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಲಿವುಡ್ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಹಾಗೂ ಶ್ರದ್ಧಾ ಕಫೂರ್‌ಗೆ ಮುಂದಿನ ಮೂರು ದಿನಗಳ ಒಳಗಾಗಿ ವಿಚಾರಣೆಗೆ ಹಾಜರಾಗುವಂತೆ ಎನ್‌ಸಿಬಿ ಸೂಚನೆಯನ್ನು ನೀಡಿದೆ.

ಇದೀಗ ಬಾಲಿವುಡ್ ನಲ್ಲಿ ನಡುಕ ಶುರುವಾಗಿದೆ. ನಟಿ ದೀಪಿಕಾ ಪಡುಕೋಣೆ ಹಾಗೂ ಮ್ಯಾನೇಜರ್ ಕರೀಷ್ಮಾ ಪ್ರಕಾಶ್ ನಡುವೆ ಡ್ರಗ್ಸ್ ಪೂರೈಕೆ ಸಂಬಂಧ ನಡೆದಿರುವ ವಾಟ್ಸಪ್ ಸಂದೇಶ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.

ಇದರ ಬೆನ್ನಲ್ಲೇ ದೀಪಿಕಾ ಪಡುಕೋಣೆ ಸೇರಿದಂತೆ ಹಲವರ ಹೆಸರುಗಳು ತಳುಕು ಹಾಕಿಕೊಂಡಿದ್ದೆ. ರಿಯಾ ಚಕ್ರವರ್ತಿ ಜೊತೆಗೆ ಶ್ರದ್ಧಾ ಕಪೂರ್ ಹಾಗೂ ಸಾರಾ ಅಲಿಖಾನ್ ಸ್ನೇಹ ಹೊಂದಿದ್ದರೆ ಎಂಬ ಹಿನ್ನಲೆಯಲ್ಲಿ ಎನ್ ಸಿಬಿ ನೋಟಿಸ್ ಜಾರಿ ಮಾಡಿದೆ.

ಸಂಬಂಧಿತ · Related