ಪ್ರೀತಿಯ ಹಿಂದೆ ಬಿದ್ದ ನವರಸನ್

Published on

666 Views
Advertisement

ಪ್ರೀತಿಯ ಹಿಂದೆ ಬಿದ್ದ ನವರಸನ್

ರಾಕ್ಷಸಿ, ವೈರ, ಸೈಕೋ ಶಂಕ್ರದಂತಹ ವಿಭಿನ್ನ ಹಾಗು ದೆವ್ವದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ನಟ, ನಿರ್ದೇಶಕ ನವರಸನ್, ‘ಜೈ ಲವ್ಸ್ ಜಾನು’ ಚಿತ್ರದ ಮೂಲಕ ಪ್ರೇಮ ಕಥೆಯ ಚಿತ್ರಗಳತ್ತ ಮುಖಮಾಡಿದ್ದಾರೆ.
ಗೀತಾ ಎಂಟಟೈನ್‍ಮೆಂಟ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ‘ಜೈ ಲವ್ಸ್ ಜಾನು’ ಚಿತ್ರದ ಮೂಲಕ ಪ್ರಾಣ್ ಪೂಜಾರಿ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗಿತ್ತಿದ್ದಾರೆ. ನವರಸನ್, ತಬಲನಾಣಿ, ವಿಜಯ್ ಚೆಂಡೂರ್, ಕೆಂಪೇಗೌಡ ಅವರ ತಾರಾಬಳಗ ಈ ಚಿತ್ರಕ್ಕಿದೆ. ನಾಯಕಿ ಸೇರಿದಂತೆ ಉಳಿದ ಪಾತ್ರವನ್ನು ಸದ್ಯದಲ್ಲಿಯೇ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳಿವೆ.

Advertisement

ತಮಿಳು ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ನಟ ವಿಶಾಲ್ ಮತ್ತು ಅವರ ತಂದೆ ಜಿ.ಕೆ ರೆಡ್ಡಿ ಚೆನ್ನೈನಲ್ಲಿ ಇತ್ತೀಚೆಗೆ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ನವರಸನ್ ಪ್ರಯತ್ನಕ್ಕೆ ಬೆಂಬಲ ವ್ಯಕ್ತಪಡಿಸಿ ಬೆನ್ನುತಟ್ಟಿ ಹರಸಿದ್ದಾರೆ.
ಜೈ ಲವ್ಸ್ ಜಾನು ಚಿತ್ರವನ್ನು ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ವಿವಿದೆಡೆ 45 ದಿನಗಳ ಕಾಲ ಚಿತ್ರೀಕರಣ ನಡೆಸಲು ನಿರ್ಧರಿಸಲಾಗಿದೆ. ಪ್ರೀತಿ ಮಾಡಿ ಕೈಗೂಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಆದರಾಚೆಯೂ ಜೀವನ ಇರಲಿದೆ ಎನ್ನುವುದನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುತ್ತಾರೆ ನಟ ನವರಸನ್.

Advertisement

ವೈರ ಚಿತ್ರದ ಬಳಿಕ ಇಪ್ಪತ್ತೈದಕ್ಕೂ ಹೆಚ್ಚು ಕಥೆ ಕೇಳಿದ್ದೇನೆ.ಯಾವುದೂ ಇಷ್ಟವಾಗಲಿಲ್ಲ.ಪ್ರಾಣ್ ಹೇಳಿದ ಕಥೆ ಇಷ್ಟವಾಯಿತು. ಜೊತೆಗೆ ವೈರದಲ್ಲಿ ನಿರ್ಮಾಣದದಲ್ಲಿ ಕೈಜೋಡಿದ್ದ ಗೀತಾ ಎಂಟಟೈನ್‍ಮೆಂಟ್ ಈ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.ಮೊದಲಿನಿಂದಲೂ ವಿಭಿನ್ನವಾದ ಪಾತ್ರ ಮಾಡುವ ಹಂಬಲವಿತ್ತು.ಅದಕ್ಕೆ ಪೂರಕವಾಗ ಕಥೆಗಳು ಪಾತ್ರಗಳು ಸಿಕ್ಕಿರಲಿಲ್ಲ. ಈಗ ಒಳ್ಳೆಯ ಪಾತ್ರ ಸಿಕ್ಕಿದೆ.ದೆವ್ವದ ಸಿನಿಮಾ ಮಾಡಿ ಲವ್ ಸ್ಟೋರಿಯ ಸಿನಿಮಾಗೆ ಒಗ್ಗಿಕೊಳ್ಳುವುದು ಅಷ್ಟೇನು ಕಷ್ಟವಾಗುವುದಿಲ್ಲ. ನಟನೆ ನಿರ್ದೇಶನದಲ್ಲಿ ಅನುಭವವಿದೆ. ಮೂರು ವರ್ಷಗಳ ತರಬೇತಿಯನ್ನೂ ಪಡೆದಿದ್ದೇನೆ. ಅದು ಸಹಾಯವಾಗಲಿದೆ ಎನ್ನುವ ವಿಶ್ವಾಸ ಅವರದು.

ದೆವ್ವದ ಸಿನಿಮಾ ಮಾಡಿ ಅದಕ್ಕೆ ಹೊಂದಿಕೊಂಡಿದ್ದೆ. ಈಗ ಪ್ರೀತಿಯ ವಿಷಯದ ಕಥೆ ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ ಹ್ಯೂಮರ್ ಮತ್ತು ಎಮೋಷನ್ ಇದೆ. ಚಿತ್ರ ಎಲ್ಲರಿಗೂ ಇಷ್ಟವಾಗಲಿದ ಎನ್ನುತ್ತಾರೆ ನವರಸನ್.

Advertisement

More Buzz

Trailers 2 weeks ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 2 weeks ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 3 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 3 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 3 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 3 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 3 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 3 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 3 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 3 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 3 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 3 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com