ಸರಿಪೋಧಾ ಶನಿವಾರಂ ಹೊಸ ವಿಡಿಯೋ ರಿಲೀಸ್: ವಿವೇಕ್ ಆತ್ರೇಯ ಅವರ ಚಿತ್ರದಲ್ಲಿ ನಾನಿ ಮತ್ತು ಎಸ್‌ಜೆ ಸೂರ್ಯ ಮುಖಾಮುಖಿ.

Published on

608 Views
Advertisement

ವಿವೇಕ್ ಆತ್ರೇಯ ನಿರ್ದೇಶನದ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಆಕ್ಷನ್ ಚಿತ್ರ ‘ಸರಿಪೋದಾ ಶನಿವಾರಂ’ (ಶನಿವಾರ ಸಾಕಲ್ಲವೇ?) ಬಿಡುಗಡೆಗೆ ಸಿದ್ಧವಾಗಿದೆ.

Advertisement

ತೆಲುಗು ಆಕ್ಷನ್ ಎಂಟರ್‌ಟೈನರ್ ಸರಿಪೋಧಾ ಶನಿವಾರಂ ವಿವೇಕ್ ಆತ್ರೇಯ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಅವರು ನಾಯಕನಾಗಿ ಮತ್ತು ನಟಿ ಪ್ರಿಯಾಂಕಾ ಮೋಹನ್ ನಾಯಕಿಯಾಗಿ ಅಭಿನಯಿಸಿದ್ದಾರೆ.ಚಿತ್ರದಲ್ಲಿ ಎಸ್‌ಜೆ ಸೂರ್ಯ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.

Advertisement

 

ಸರಿಪೋಧಾ ಶನಿವಾರಂ, ನಿರ್ದೇಶಕ ವಿವೇಕ್ ಆತ್ರೇಯ ಅವರ ಮೊದಲ ಆಕ್ಷನ್ ಎಂಟರ್‌ಟೈನರ್ ಚಿತ್ರ ವಾಗಿದ್ದು, ಅವರು ಕೌಟುಂಬಿಕ ನಾಟಕಗಳು ಮತ್ತು  ಹಾಸ್ಯ ಚಿತ್ರಗಳಾದ ಮೆಂಟಲ್ ಮದಿಲೋ, ಅಂತೆ ಸುಂದರಾನಿಕಿ ಮತ್ತು ಬ್ರೋಚೆವರೇವರೂರ ಅಂತಹ ಚಿತ್ರಗಳಲ್ಲಿ ಹೆಸರುವಾಸಿಯಾಗಿದ್ದಾರೆ.

Advertisement

‘ಸರಿಪೋದಾ ಶನಿವಾರಂ’ ಚಿತ್ರವು ನಾನಿಯವರೊಂದಿಗೆ ನಿರ್ದೇಶಕ ವಿವೇಕ್ ಆತ್ರೇಯ ಅವರ ಎರಡನೇ ಪ್ರಾಜೆಕ್ಟ್ ಆಗಿದ್ದು, ಮೊದಲನೆ ಚಿತ್ರ ‘ಅಂತೆ ಸುಂದರಾನಿಕಿ’ ತೆಲುಗು ಭಾಷೆಯ ರೊಮ್ಯಾಂಟಿಕ್ ಕಾಮಿಡಿ/drama ಆಗಿದ್ದು, 2022ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ನಾನಿ ಮತ್ತು ನಜ್ರಿಯಾ ನಜೀಮ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿದ್ದು, ನಾನಿ ಮತ್ತು ನಜ್ರಿಯ ಅವರ ಅಭಿನಯಕ್ಕೆ ವಿಶೇಷ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನಟ ಎಸ್ ಜೆ ಸೂರ್ಯ ಅವರ ಜನ್ಮದಿನದಂದು ನಿರ್ದೇಶಕ ವಿವೇಕ್ ಆತ್ರೇಯ ಅವರ ತೆಲುಗು ಚಿತ್ರ ‘ಸರಿಪೋಧಾ ಸನಿವಾರಂ’ ನಿಂದ ‘ಟೀಸರ್ ಅಲ್ಲ’ ಅನ್ನುವ ಶೀರ್ಷಿಕೆಯಲ್ಲಿ ವೀಡಿಯೋ ಬಿಡುಗಡೆ ಮಾಡಿದ್ದಾರೆ.

Advertisement

ಭಗವಾನ್ ಶ್ರೀ ಕೃಷ್ಣ ಮತ್ತು ಸತ್ಯಭಾಮೆ, ರಾಕ್ಷಸ ನರಕಾಸುರನನ್ನು ಸೋಲಿಸುವ ಪೌರಾಣಿಕ ಕಥೆಯಿಂದ ಪ್ರೇರಿತವಾದ ಚಿತ್ರದ ಕಥಾಹಂದರವನ್ನು ಸೂಚಿಸುವ ನಿರೂಪಣೆಯೊಂದಿಗೆ, ನಾನಿ ಮತ್ತು ಪ್ರಿಯಾಂಕಾ ಮೋಹನ್ ರವರು ಕೃಷ್ಣ ಮತ್ತು ಸತ್ಯಭಾಮೆಯನ್ನು ಪ್ರತಿನಿಧಿಸುತ್ತಾರೆ.

ಚಿತ್ರದಲ್ಲಿ ಎಸ್ ಜೆ ಸೂರ್ಯ ಅವರು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿದ್ದಾರೆ. ನಾನಿ ಅವರ “ಹ್ಯಾಪಿ ಬರ್ತಡೇ ಸರ್ ” ಎನ್ನುವ ಡೈಲಾಗ್ ಎಸ್ ಜೆ ಸೂರ್ಯ ಅವರ ಬರ್ತಡೇ ಗೆ ಸ್ಪೆಷಲ್ ವಿಷ್ ಅನ್ನೋ ಹಾಗೆ ‘ಟೀಸರ್ ಅಲ್ಲ’ ಅಂತ ಶೀರ್ಷಿಕೆಯನ್ನು ಕೊಡಲಾಗಿದೆ.

ಈ ವಿಡಿಯೋದಲ್ಲಿ ಸೂರ್ಯಾ ಅವರ ನಿರ್ದಯಿ ಪೊಲೀಸ್ ಅಧಿಕಾರಿ ಪಾತ್ರವನ್ನು ನರಕಾಸುರನಿಗೆ ಮತ್ತು ನಾಯಕನ ಪಾತ್ರಗಳನ್ನು ಕೃಷ್ಣ ಮತ್ತು ಸತ್ಯಭಾಮಕ್ಕೆ ಹೋಲಿಕೆಮಾಡಲಾಗಿದೆ. ದುಷ್ಟ ಶಕ್ತಿಯು ಬಲಗೊಂಡಾಗಲೆಲ್ಲಾ ಅದನ್ನು ಎದುರಿಸಲು ಸಮಾನವಾದ ಅಥವಾ ಹೆಚ್ಚು ಶಕ್ತಿಶಾಲಿ ಶಕ್ತಿಯು ಉದ್ಭವಿಸುತ್ತದೆ ಎಂದು ಹೇಳುವ ಅಶರೀರವಾಣಿಯೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ.

ಎಸ್.ಜೆ.ಸೂರ್ಯ ಅವರು ಧನುಷ್ ಅಭಿನಯದ ರಾಯನ್’ ಚಿತ್ರದಲ್ಲಿ ಕೂಡ ಅಭಿನಯಿಸಿದ್ದಾರೆ ಮತ್ತು ‘ರಾಯನ್’ ಚಿತ್ರದ ಪ್ರಚಾರದ ಸಮಯದಲ್ಲಿ, ಸೂರ್ಯ ಅವರು ‘ಸರಿಪೋಧಾ ಶನಿವಾರಂ’ ಬಗ್ಗೆ ಹಂಚಿಕೊಂಡಿದ್ದರು.ಕಾಲಿವುಡ್‌ನಲ್ಲಿ ‘ಮಾನಾಡು’ ಹೇಗೆ ಮನಸ್ಸಿಗೆ ಮುದ ನೀಡುವ ವೈಜ್ಞಾನಿಕ ಕಥಾಹಂದರವನ್ನು ಹೊಂದಿದೆಯೋ ಅದೇ ರೀತಿ ತೆಲುಗು ಚಿತ್ರರಂಗದಲ್ಲಿ ಸರಿಪೋಧಾ ಸನಿವಾರಂ’ ಚಿತ್ರವು ದೊಡ್ಡ ಯಶಸ್ಸನ್ನು ಗಳಿಸುತ್ತದೆ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅಂದಹಾಗೆ ಸರಿಪೋಧಾ ಸನಿವಾರಂ ಸಿನಿಮಾ ದೊಡ್ಡ ಹಿಟ್ ಆಗಲಿದೆ ಎಂದು ಎಸ್.ಜೆ.ಸೂರ್ಯ ಹೇಳಿದ್ದಾರೆ.

ರಾಯನ್ ಚಿತ್ರದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಸರಿಪೋಧಾ ಶನಿವಾರಂ’ ನಲ್ಲಿ ನಾನಿ ಪಾತ್ರವು ವಾರದ ಒಂದು ನಿರ್ದಿಷ್ಟ ದಿನದಂದು ಮಾತ್ರ ಕೋಪಗೊಳ್ಳುವ ವ್ಯಕ್ತಿಯಂತೆ ಕಾಣುತ್ತದೆ. ಈ ಚಿತ್ರಕ್ಕೆ ಜೇಕ್ಸ್ ಬಿಜಾಯ್ ಅವರ ಸಂಗೀತ ಮತ್ತು ಮುರಳಿ ಜಿ ಅವರ ಛಾಯಾಗ್ರಹಣವಿದೆ.

ಡಿವಿವಿ ಎಂಟರ್‌ಟೈನ್‌ಮೆಂಟ್ ನಿರ್ಮಿಸಿರುವ ಈ ಚಿತ್ರವು ತೆಲುಗು, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಚಿತ್ರ ಆಗಸ್ಟ್ 29 ರಂದು ಬಿಡುಗಡೆಯಾಗಲಿದೆ.

More Buzz

Trailers 5 days ago

ಬಾಲನ್ – ದಿ ಬಾಯ್ ಟ್ರೇಲರ್: ಭಯಾನಕ ಕಥೆಯ ಸುಳಿವು!

Trailers 5 days ago

ನೀ ನಂಗೆ ಅಲ್ಲವ ಟೀಸರ್: ರಾಹುಲ್ ಆರ್ಕೋಟ್ ಡೆಬ್ಯೂಟ್ novità

Buzz 2 weeks ago

ಪೀಬೊ ಬ್ರೈಸನ್ ನಿಧನ: ಡಿಸ್ನಿ ಗೀತೆಗಳ ಗಾಯಕನಿಗೆ 75ನೇ ವಯಸ್ಸಿನಲ್ಲಿ ಅಂತಿಮ ನಮನ

Buzz 2 weeks ago

Avengers: Doomsday ಕಾಫಿ ಶಾಪ್? ಅಭಿಮಾನಿಗಳ ನಿರಾಸೆ!

Buzz 2 weeks ago

ಕಲಾ ಹಿರನ್: ಸಲ್ಮಾನ್ ಖಾನ್‌ರ ಕಾನೂನು ನೋಟಿಸ್, ನಿರ್ಮಾಪಕ ಪ್ರತಿಕ್ರಿಯೆ!

Trailers 2 weeks ago

‘ಭಾರತ್ ಭಾಗ್ಯ ವಿಧಾತ’ ಟ್ರೇಲರ್: ಕಂಗನಾ 26/11 ವೀರ ನರ್ಸ್ ಪಾತ್ರದಲ್ಲಿ

Buzz 2 weeks ago

ಗೌರವ ಗೇರಾ: 84 ರೂ. ಜೊತೆಗಿದ್ದ ದಿನಗಳ ನೆನಪು!

Buzz 2 weeks ago

ತ್ರಿಶಾ ಕೃಷ್ಣನ್ ಟ್ವೀಟ್: ವಿಜಯ್‌ ಗೂಳಿಬಿರಿದು ವಿವಾದಕ್ಕೆ ಪ್ರತಿಕ್ರಿಯೆ!

Trailers 2 weeks ago

Massa Massa Lyrical Video Drops: Ram Charan & Janhvi Ignite Screens for Peddi

Short Films 2 weeks ago

ಜಾನು ಪಾಪ ನಾನು ಕಿರುಚಿತ್ರ: Bhaava Frames ನಿಂದ ನಗುವಿನ ಧಮಾಕಾ!

Short Films 2 weeks ago

KARAVATIKE ಕನ್ನಡ ಕಿರುಚಿತ್ರ ಟ್ರೇಲರ್: ಭಾವನೆಗಳ ಅದ್ಭುತ ಜರ್ನಿ!

Short Films 2 weeks ago

ಶಂಕರಶಾಸ್ತ್ರಿ ಮತ್ತು ಭಟ್ಟನ ಕೀಟ್ಲೆಗಳು: KGF ಬಾಯ್ಸ್‌ನ ಹೊಸ ಕಾಮಿಡಿ ವೈರಲ್!

Copyright ©2026 . All Rights Reserved. privacy | terms Whatsapp: 9538193653 Email: hello@flixoye.com