flixOye
Buzz

ಇದೇ 18 ಕ್ಕೆ ತೆರೆಗೆ ಬರಲಿದೆ ನಾನೊಂಥರ ಸಿನಿಮಾ.

ಕರೋನ ನಂತರ ಸಿನೆಮಾ ಗಳು ಸಹ ಬಿಡುಗಡೆಯಾಗುತ್ತಿದ್ದು, ಚಿತ್ರರಂಗದಲ್ಲಿ ಖುಷಿಯ ವಾತಾವರಣ ಮನೆ ಮಾಡಿದೆ. ಪ್ರತಿ ವಾರದಂತೆ ಈ ವಾರವೂ ಸಹ ಬಿಡುಗಡೆಯಾಗುತ್ತಿರುವ ಕನ್ನಡ ಸಿನೆಮಾಗಳ ಪಟ್ಟಿಯಲ್ಲಿ ನಾನೊಂಥರ ಸಿನೆಮಾ ಸಹ ರೆಡಿ ಯಾಗಿದೆ.

ಹೊಸಬರ ಹೊಸ ಪ್ರಯತ್ನದ ಸಿನೆಮಾ ನಾನೊಂಥರ ದಲ್ಲಿ ತಂದೆ-ಮಗನ ಬಾಂಧವ್ಯದ ಸುತ್ತ ಕಥೆ ಹೋಗುತ್ತೆ. ನಾಯಕ ತಾರಖ್‍ಗೆ ಆತನ ಜೀವನದಲ್ಲಿ ನಡೆದಂಥ ಒಂದು ದುರ್ಘಟನೆ ಆತನನ್ನು ಮದ್ಯವ್ಯಸನಿಯನ್ನಾಗಿ ಮಾಡುತ್ತದೆ. ಅಲ್ಲಿಂದ ಕಥೆ ಯಾವ ಕಡೆ ತಿರುಗುತ್ತದೆ ಎಂಬುದಕ್ಕೆ ಸಿನೆಮಾ ನೋಡಬೇಕು.

Advertisement

ರಮೇಶ್ ಕಗ್ಗಲ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ತಾರಖ್ ಅವರು ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಜೈಸಸ್ ಮತ್ತು ರಕ್ಷಕ ಅಭಿನಯಿಸಿದ್ದು, ಡಾ.ಜಾಕ್ಲಿನ್ ಫ್ರಾನ್ಸಿಸ್ ಸಿನಿಮಾ ಕ್ಕೆ ಬಂಡವಾಳ ಹೂಡಿದ್ದಾರೆ. ಸುನಿಲ್ ಸಾಮ್ಯುಯಲ್ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುನಿರಾಜ್ ಚಿತ್ರದ ಸಾಹಿತ್ಯ ಸಂಭಾಷಣೆ ರಚಿಸಿದ್ದಾರೆ. ಈ ವಾರ ತೆರೆ ಕಾಣುತ್ತಿರುವ ಈ ಸಿನೆಮಾ ಗೆಲ್ಲಲಿ ಎಂಬುದು ನಮ್ ಆಶಯ.

ಸಂಬಂಧಿತ · Related